ರಾಜಕೀಯ

ನಾಗಮಂಗಲ | ಇಂದು ಮತಯಾಚನೆ‌ಯ ಅಖಾಡಕ್ಕಿಳಿಯಲಿದ್ದಾರೆ ದೇವೇಗೌಡರು

Published

on

ಸುದ್ದಿದಿನ ಡೆಸ್ಕ್ : ಮಂಡ್ಯ ಲೋಕಸಭಾ ಉಪ ಚುನಾವಣೆಯ ಹಿನ್ನಲೆ ಜಿಲ್ಲೆಯಲ್ಲಿಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಜೆಡಿಎಸ್ ಅಭ್ಯರ್ಥಿ ಪರವಾಗಿ ಅಖಾಡಕ್ಕಿಳಿಯಲಿದ್ದಾರೆ ಮಾಜಿ ಪ್ರಧಾನಿ ದೇವೇಗೌಡರು.

ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಗಿರೋ ದೇವೇಗೌಡ್ರು ನಾಗಮಂಗಲದಲ್ಲಿಂದು ದೇವೇಗೌಡರಿಂದ ಬಹಿರಂಗ ಸಭೆಯಲ್ಲಿ ಪಕ್ಷದ ಪರಮತ ಯಾಚನೆ ಮಾಡಲಿದ್ದಾರೆ.ದೇವೇಗೌಡ್ರ ಈ ಬಹಿರಂಗ ಪ್ರಚಾರ ಸಭೆ ಹಿನ್ನಲೆ ಕಾರ್ಯಕ್ರಮಕ್ಕಾಗಿ ನಾಗಮಂಗಲದಲ್ಲಿ ಭರದ ಸಿದ್ದತೆ ನಡೆದಿದ್ದು, ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ಸೇರಿ ನಿರ್ಮಾಣ ಸೇರಿ ಕಿಲೋ‌ಮೀಟರ್ ವರೆಗೆ ಧ್ವನಿ ವರ್ಧಕ ಅಳವಡಿಕೆ ಮಾಡಲಾಗಿದೆ. ಪಟ್ಟಣದ ಬಿ.ಎಂ. ರಸ್ತೆಯ ಜವರಪ್ಪ ಪೆಟ್ರೋಲ್ ಬಂಕ್ ಸಮೀಪ ಸಿದ್ದವಾಗಿದೆ ಬೃಹತ್ ವೇದಿಕೆ.

ವೇದಿಕೆ ಕಾರ್ಯಕ್ರದಲ್ಲಿ ಸುಮಾರು 20 ಸಾವಿರ ಕಾರ್ಯಕರ್ತರು ಕುಳಿತುಕೊಳ್ಳಲು ಆಸನದ ವ್ಯವಸ್ಥೆಯಿದ್ದು, ನಾಗಮಂಗಲ ಸುರೇಶ್ ಗೌಡ ನೇತೃತ್ವದಲ್ಲಿ ಆಯೋಜಿಸಿರೋ ಬೃಹತ್ ಬಹಿರಂಗ ಪ್ರಚಾರ ಸಭೆ ಇದಾಗಿದೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಪರವಾಗಿ ಪ್ರಚಾರ ಸಭೆಯಲ್ಲಿಮತಯಾಚಿಸಲಿದ್ದಾರೆದೇವೇಗೌಡ್ರು.ದೇವೇಗೌಡ್ರ ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಸಚಿವರು ಸೇರಿ ಜಿಲ್ಲೆಯ ಶಾಸಕರು ಸಾಥ್ ನೀಡಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version