ಲೈಫ್ ಸ್ಟೈಲ್

‘ಫ್ಯಾಟ್ ಈಸ್ ಬ್ಯೂಟಿ’ ವಿದ್ಯಾಬಾಲನ್ ಬ್ಯೂಟಿ ಸೀಕ್ರೇಟ್…!

Published

on

ಲೋ… ತುಮಾರಿ ಸುಲು….! ಎಂಟರ್ಟೈನ್ಮೆಂಟ್ ಎಂಟರ್ಟೈನ್ಮೆಂಟ್ ಎಂಟರ ಟೈನ್ಮೆಂಟ್..! ಈ ಡೈಲಾಗ್ ಕೇಳಿದ್ರೆ ಸಾಕು ಥಟ್ಟನೇ ನೆನಪಾಗೋದು ಬಾಲಿವುಡ್ನ ಸೀರೆ ಸುಂದರಿ ವಿದ್ಯಾ ಬಾಲನ್…! ಚೆಂದದ ಸೀರೆಯುಟ್ಟು , ಆಕರ್ಷಕವಾಗಿ ಕಾಣುವ ಮುದ್ದು ಬೊಂಬೆ..! ಇತ್ತಿಚ್ಚೆಗೆ ಸ್ವಲ್ಪ ದಪ್ಪಗಾಗಿರುವ ವಿದ್ಯಾ ಬಾಲನ್…! ದಪ್ಪ ಇದ್ರೂ ಬ್ಯೂಟಿಫುಲ್ ಆಗಿರಬಹುದು ಅನ್ನೋದನ್ನ ತೋರಿಸಿಕೊಟ್ಟವರು. ಹಾಗಾದ್ರೆ ವಿದ್ಯಾ ಫ್ಯಾಟ್ ಇದ್ರೂ ಬ್ಯೂಟಿಫುಲ್ ಆಗಿ, ಹೆಲ್ದಿಯಾಗಿ ಕಾಣೋದಕ್ಕೆ ಏನೆಲ್ಲಾ ಮಾಡ್ತಾರೆ ಗೊತ್ತಾ..?

ವಿದ್ಯಾ ಬಾಲನ್ ದಕ್ಷಿಣದಿಂದ ಉತ್ತರಕ್ಕೆ ಹಾರಿದ ಸುಂದರಿ…! ಡಿಂಪಲ್ ನಗುವಿನಲ್ಲೇ ಸೆಳೆದ ಸುಂದರಿ…! ವುಮೆನ್ ಸೆಂಟ್ರಿಕ್ ಪಾತ್ರಗಳಲ್ಲೇ ಹೆಚ್ಚು ಗುರುತಿಸಿಕೊಂಡ ಬೆಡಗಿ ವಿದ್ಯಾಬಾಲನ್… ಆರಂಭದಿಂದಲೂ ತನ್ನದೇ ವಿಶಿಷ್ಟ ಸ್ಟೈಲ್ ಫಾಲೋ ಮಾಡ್ತಿರುವ ವಿದ್ಯಾ ಸಾಕಷ್ಟು ಮಹಿಳೆಯರಿಗೆ ಸ್ಪೂರ್ತಿ…!

ಡರ್ಟಿ ಪಿಕ್ಚರ್ ಮೂಲಕ ಸ್ವಲ್ಪ ದಪ್ಪಗಾದ ನಟಿ, ಸಣ್ಣ ಆಗೋದ್ರ ಬಗ್ಗೆ ಯೋಚ್ನೆ ಮಾಡಿದ್ರೂ ಸಹ ಝೀರೋ ಸೈಜ್ಗೆ ಮಾರು ಹೋಗಿಲ್ಲ. ಬದಲಿಗೆ ಫ್ಯಾಟ್ ಇಸ್ ಬ್ಯೂಟಿ ಅಂತಿದ್ದಾರೆ. ಅಷ್ಟೇ ಅಲ್ಲದೇ ದಪ್ಪ ಇದ್ದುಕೊಂಡೇ ಬಿಗ್ ಬಜೆಟ್ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಹಿಟ್ ಚಿತ್ರಗಳನ್ನು ಕೊಡುತ್ತಲೇ ಬಂದಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾ ಬಾಲನ್ ನಾವು ದಪ್ಪ ಎಂದು ಕೊರಗುವ ಹೆಣ್ಣು ಮಕ್ಕಳಿಗೆ ಚಿಯರ್ ಅಪ್ ಲೇಡೀಸ್ ಅಂತಿದ್ದಾರೆ.

ಈಗಾಗಲೇ ವಿದ್ಯಾ ಲಿಟಲ್ ಫ್ಯಾಟ್ ಅನ್ನಿಸುತ್ತಿದ್ರೂ, ಆರೋಗ್ಯದ ಬಗ್ಗೆ ಕಾಳಜಿ ವಹಿಸ್ತಾರೆ. ಈ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಡಯೆಟ್ ಮಾಡದೇ ಹಣ್ಣು-ತರಕಾರಿಗಳಲ್ಲೇ ಹೆಲ್ದಿ ಡಯೆಟ್ ಸರಿ ದೂಗಿಸುತ್ತಿದ್ದಾರೆ . ಹೌದು…! ನೀವು ದಪ್ಪ ಇದ್ದರೂ ಸಹ ಆರೋಗ್ಯದ ದೃಷ್ಟಿಯಿಂದ ಕೆಲವೊಂದು ಡಯೆಟ್ಗಳನ್ನು ಅನುಸರಿಸಲೇಬೇಕು. ಆಗ ಮಾತ್ರ ಬೊಜ್ಜಿನಿಂದ ಉಂಟಾಗುವ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ ಇದನ್ನೇ ವಿದ್ಯಾ ಬಾಲನ್ ಹೇಳ್ತಿರೋದು.

ಇನ್ನೂ ಇದೇ ಹಿನ್ನೆಲೆಯಲ್ಲಿ ನೋಡೋದಾದ್ರೆ, ವಿದ್ಯಾ ಡಯೆಟ್ಗಿಂತ ಹೆಚ್ಚು ನಿದ್ದೆಗೆ ಪ್ರಾಮುಖ್ಯತೆ ಕೊಡ್ತಾರೆ. ಆದ್ದರಿಂದ ಪ್ರತಿನಿತ್ಯ 8 ಗಂಟೆ ತಪ್ಪದೇ ನಿದ್ದೆ ಮಾಡ್ತಾರಂತೆ. ಇನ್ನೂ ವಾರದಲ್ಲಿ 4-5 ದಿನ ತಪ್ಪದೇ ವರ್ಕ್ ಔಟ್ ಮಾಡ್ತಾರಂತೆ ವಿದ್ಯಾ. ತುಂಬಾ ಸಣ್ಣಾಗಲೂ ಇಷ್ಟವಿಲ್ಲದ ವಿದ್ಯಾ, ದೇಹದಲ್ಲಿ ಅನಗತ್ಯವಾಗಿ ಸಂಗ್ರವಾಗಿರುವ ಬ್ಯಾಡ್ ಫ್ಯಾಟ್ ಕರಿಸುವ ಕಡೆ ಮಾತ್ರ ಹೆಚ್ಚು ಫೊಕಸ್ ಮಾಡ್ತಾರೆ. ಅಂದ್ರೆ ಮುಖದ ಭಾಗದಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗದಂತೆ ನೋಡಕೊಳ್ತಾರೆ ವಿದ್ಯಾ.

ಇನ್ನೂ ತಪ್ಪದೇ ತಮ್ಮ ಜಿಮ್ ಟ್ರೈನರ್ ಸಹಾಯ ಪಡೆದು ಬೆಂಡಿಂಗ್, ಕಿಕ್ಕಿಂಗ್, ಜಂಪಿಂಘ್, ಟ್ವಿಸ್ಟಿಂಗ್ನಂಥ ವರ್ಕ್ಔಟ್ ತಪ್ಪದೇ ಮಾಡ್ತಾರೆ. ಇನ್ನು ಇದನ್ನು ವಾರದಲ್ಲಿ 4-5 ಬಾರಿ ಅನುಸರಿಸ್ತಾರೆ. ಅಲ್ಲದೇ ವಿದ್ಯಾ ಮನೆಯಲ್ಲಿಯೇ ಕಾರ್ಡಿಯೋ ಮಾಡ್ತಾರಂತೆ. ಇನ್ನೂ ತಮ್ಮ ಡಯೆಟಿಷಿಯನ್ ಮಾರ್ಗದರ್ಶನದಲ್ಲಿ ಸೂಕ್ತ ಡಯೆಟ್ ಕೂಡ ಅನುಸರಿಸ್ತಾರೆ ಚಬ್ಬಿ ಸುಂದರಿ. ಈ ಹಿನ್ನೆಲೆಯಲ್ಲಿ ಪ್ರತಿ ಎರಡು ಗಂಟೆಗೊಮ್ಮೆ ತಿನ್ನುವ ಅಭ್ಯಾಸವಿದೆಯಂತೆ. ಇದು ದೇಹದ ಮೆಟಬೋಲಿಸಂ ಹೆಚ್ಚು ಮಾಡುತ್ತದಂಥೆ. ಇನ್ನೂ ವಿದ್ಯಾ ತ್ವಚೆ ಹೆಚ್ಚು ಗ್ಲೋಯಿಂಗ್ ಆಗಿರುವುದಲ್ಲದೇ ತಾರುಣ್ಯ ಪೂರ್ಣವಾಗಿದೆ ಇದಕ್ಕೆ ವಿದ್ಯಾ ಸಸ್ಯಾಹಾರ ತೆಗೆದುಕೊಳ್ಳುವುದೇ ಕಾರಣವಂತೆ. ಮೊಟ್ಟೆಯನ್ನೂ ಸಹ ಸೇವಿಸೋಲ್ಲವಂತೆ.

ರೋಟಿ ಮತ್ತು ಸಬ್ಝಿ ಜೊತೆಗೆ ಅನ್ನ ಸೇವಿಸುವುದಿಲ್ಲ. ಸೇಬು ಮತ್ತು ಕಿತ್ತಳೆ ಒಟ್ಟಿಗೆ ಸೇವಿಸೋದಿಲ್ಲವಂತೆ. ಅಲ್ಲದೇ ಹೆಚ್ಚು ಚಾಕೋಲೇಟ್ ತಿಂತಾರೆ. ಅಲ್ಲದೇ ಹೆಚ್ಚು ನೀರು ಕುಡಿಯುತ್ತಾರಂತೆ ವಿದ್ಯಾ. ಇನ್ನೂ ವಿದ್ಯಾ ಬಾಲನ್ ಆದಷ್ಟು ನ್ಯಾಚುರಲ್ ಫುಡ್ಗಳನ್ನೇ ಹೆಚ್ಚು ಪ್ರಿಫರ್ ಮಾಡ್ತಾರೆ. ಜೊತೆಗೆ ಮೈದಾ ಹಿಟ್ಟಿನ ಪದಾರ್ಥಗಳನ್ನು ಸೇವಿಸುವುದಿಲ್ಲವಂತೆ. ಇನ್ನೂ ಆದಷ್ಟು ತರಕಾರಿ ಜ್ಯೂಸ್ಗಳನ್ನು ಹೆಚ್ಚೆಚ್ಚು ಕುಡಿಯುತ್ತಾರಲ್ಲದೇ, ಹಣ್ನಿನ ಜ್ಯೂಸ್ ಬದಲಿಗೆ ಹಣ್ಣನ್ನು ಹೆಚ್ಚು ಸೇವಿಸುತ್ತಾರಂತೆ. ಸಿಹಿ ತಿನ್ನುವದರ ಬದಲಿಗೆ, ಡ್ರೈ ಫ್ರೂಟ್ಸ್ ಸೇವಿಸುತ್ತಾರಲ್ಲದೇ, ಮಸಾಲೆ ಟೀ ಮಿಸ್ ಮಾಡಲು ಮನಸು ಬರುವುದಿಲ್ಲವಂತೆ.

ಹೀಗೆ ವಿದ್ಯಾ ತಮ್ಮ ಡಯೆಟ್ನಲ್ಲಿ ಆರೋಗ್ಯಕ್ಕೆ ಪೂರಕವಾದ ಆಹಾರಗಳನ್ನಷ್ಟೇ ಹೆಚ್ಚು ಸೇವಿಸುತ್ತಾರಲ್ಲದೇ, ಸರಿಯಾದ ಸಮಯಕ್ಕೆ ತಪ್ಪದೇ ಡಯೆಟ್ ಫಾಲೋ ಮಾಡ್ತಾರೆ. ಇದೇ ಕಾರಣಕ್ಕೆ ವಿದ್ಯಾ ಫ್ಯಾಟ್ ಇದ್ರೂ ಹೆಲ್ದಿ ಇದ್ದಾರಂತೆ. ಫ್ಯಾಟ್ ಇಸ್ ಬ್ಯೂಟಿ ಅನ್ನೋದು ವಿದ್ಯಾ ಸ್ಟೈಲ್ ಸ್ಟೇಟ್ಮೆಂಟ್.

ಫ್ಯಾಟ್ ಇಸ್ ಬ್ಯೂಟಿ ಅನ್ನುತ್ತಲೇ ದಪ್ಪ ಎಂದು ಕೀಳರಿಮೆ ಅನುಭವಿಸುವವರಿಗೆ ವಿದ್ಯಾ ಹೀಗೆ ಮಾದರಿಯಾಗಿದ್ದಾರೆ. ಆ ಮೂಲಕ ಝೀರೋ ಸೈಜ್ ಹ್ಯಾಂಗ್ ಓವರ್ಗೆ ಬ್ರೇಕ್ ಹಾಕಿದ್ದಾರೆ. ಇದಿಷ್ಟೇ ಅಲ್ಲ ವಿದ್ಯಾ ಬಾಲನ್ ಸೀರೆಗಳಲ್ಲೂ ಸಾಕಷ್ಟು ವಿಶೇಷತೆಗಳಿವೆ. ವಿದ್ಯಾ ಬಾಲನ್ ಅಂದ ಕೂಡಲೇ ಕಣ್ನ ಮುಂದೆ ಬರೋದು ಚೆಂದನೆಯ ಸೀರೆಗಳು. ಟ್ರೆಡಿಷನಲ್ ಲುಕ್ನಲ್ಲೇ ಕಂಗೋಳಿಸುವ ವಿದ್ಯಾರನ್ನು ನೋಡಿ ಇಂಥದ್ದೇ ಸೀರೆಗಳನ್ನೇ ಉಡಬೇಕು ಎನ್ನುವಷ್ಟು ಪ್ರಭಾವಿಸುವ ಸ್ಟೈಲ್ ಐಕಾನ್ ವಿದ್ಯಾ. ಅಷ್ಟೇ ಅಲ್ಲದೇ ಪ್ಲಸ್ ಸೈಜ್ ಮಹಿಳೆಯರಿಗೆ ಸಾಕಷ್ಟು ಟಿಪ್ಸ್ಗಳನ್ನು ಅವರ ಸ್ಟೈಲ್ ಮೂಲಕ ಹೇಳಿದ್ದಾರೆ.

ಅದರ ವಿವರಗಳು ನಾಳಿನ ಸಂಚಿಕೆಯಲ್ಲಿ, ನಿರೀಕ್ಷಿಸಿ..!

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version