ದಿನದ ಸುದ್ದಿ
ಶಾಕಿಂಗ್: ತಂದೆಯ ಆಸ್ಪತ್ರೆ ಚಿಕಿತ್ಸಾ ವೆಚ್ಚ ಭರಿಸಲಾಗದೇ ಮಗ ನೇಣಿಗೆ ಶರಣು !
ಸುದ್ದಿದಿನ ಮಂಡ್ಯ: ತಂದೆಯ ಆಸ್ಪತ್ರೆ ಚಿಕಿತ್ಸಾ ವೆಚ್ಚ 2 ಲಕ್ಷ ರೂ. ಬಿಲ್ ಕಟ್ಟಲಾಗದೆ ಮಗ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಕೆ.ಆರ್. ಪೇಟೆ ತಾಲ್ಲೋಕು ಮಂಡ್ಯ ಜಿಲ್ಲೆ ಬೂಕನಕೆರೆ ಗ್ರಾಮದಲ್ಲಿ ನಡೆದಿದೆ.
ಮೈಸೂರಿನ ಕುವೆಂಪು ನಗರದ ಬಾನವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ತಂದೆ ಈರಣ್ಣಶೆಟ್ಟರ ಮೆಡಿಕಲ್ ಬಿಲ್ 2 ಲಕ್ಷ ರೂ ಕಟ್ಟಲಾಗದೇ ಮೈಸೂರಿನ ತನ್ನ ಕೊಠಡಿಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿರುವ ಮಂಜು(25) ನೇಣಿಗೆ ಶರಣಾದರೆ ತಂದೆ ಈರಣ್ಣಶೆಟ್ಟಿ(50) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನರಾದರು. ತಂದೆ ಮಗನ ಎರಡೂ ಮೃತ ದೇಹಗಳನ್ನು ಬೂಕನಕೆರೆ ಗ್ರಾಮಕ್ಕೆ ತರಲಾಗಿದ್ದು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮೃತರ ಸಂಬಂಧಿಗಳ ಆಕ್ರಂದನವು ಮುಗಿಲು ಮುಟ್ಟಿದೆ.