ಕ್ರೀಡೆ

ವಿದೇಶಿ ಫುಟಬಾಲ್ ಅಭಿಮಾನಿಗಳ ಜತೆಗೆ ಲೈಂಗಿಕ ಸಂಪರ್ಕ ಹೊಂದದಂತೆ ರಷ್ಯಾದ ರಾಜಕಾರಣಿ ಹೇಳಿಕೆ

Published

on

ಸುದ್ದಿದಿನ ಡೆಸ್ಕ್: ಫುಟ್ಬಾಲ್ ವರ್ಲ್ಡ್ ಕಪ್ ನೋಡಲು ಬರುವ ಅಭಿಮಾನಿಗಳ ಜತೆಗೆ ಲೈಂಗಿಕ ಸಂಪರ್ಕ ಹೊಂದಬಾರದಂತೆ ರಷ್ಯಾ ಸಂಸತ್ ಸಮಿತಿಯ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ.

ಹುಡುಗಿಯೊಬ್ಬಳು ಹುಡುಗನನ್ನು ಭೇಟಿಯಾಗಬಹುದು, ಮಗುವಿಗೂ ಜನ್ಮ ನೀಡಬಹುದು, ಮದುವೆ ಆಗಬಹುದು, ಇಲ್ಲದೇನೂ ಇರಬಹುದು. ಇದರಿಂದ ಮಗುವೂ ಸಹ ಅವರಂತೆ ನೋವು ಅನುಭವಿಸುತ್ತದೆ. 1980ರಲ್ಲಿ ಮಾಸ್ಕೋ ನಡೆದ ಒಲಂಪಿಕ್ ನಂತರ ನಡೆದಿವೆ.

ಇಂತಹ ನಡವಳಿಕೆಗಳಿಂದ ಏಕ ಪೋಷಕ ಕುಟುಂಬಗಳಿಗೆ ಕಾರಣವಾಗಬಹುದು. ಒಂದೇ ಜನಾಂಗೀಯ ಪೋಷಕರಿಂದ ಮಕ್ಕಳು ಜನಿಸಿದರೆ ಒಳಿತು ಎಂದು ಗೋವೊರಿಟ್ ಮಾಸ್ಕ್ವಾ ರೆಡಿಯೋ ಕೇಂದ್ರದಲ್ಲಿ ಸಂಸತ್ತಿನ ಕೆಳಮನೆಯ ಕುಟುಂಬ ಮತ್ತು ಮಹಿಳೆ, ಮಕ್ಕಳ ಖಾತೆಯ ತಮಾರಾ ಪ್ಲೆಟ್ನೋವಾ ಹೇಳಿದ್ದಾರೆ. ಯುರೋಪ್ ಮತ್ತು ಪ್ರಪಂಚದಲ್ಲಿ ರಷ್ಯಾ ದೇಶವು ಎಚ್ಐವಿ ಪ್ರಕರಣ ಏರಿಕೆಯಲ್ಲಿ ಮುಂದಿದೆ. ಶೇ. ೫೦ಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಭಿನ್ನಲಿಂಗೀಯರೊಂದಿಗಿನ ಲೈಂಗಿಕ ಸಂಪರ್ಕವೇ ಕಾಣವಾಗಿದೆ. ರಷ್ಯಾ ದೇಶಕ್ಕೆ ಸುಮಾರು ಒಂದು ಮಿಲಿಯನ್ ಫುಟ್ಬಾಲ್ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ 2 ಮಿಲಿಯನ್ ಟಿಕೆಟ್ ಮಾರಾಟವಾಗಿವೆ.

Leave a Reply

Your email address will not be published. Required fields are marked *

Trending

Exit mobile version