ದಿನದ ಸುದ್ದಿ
ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಪತ್ನಿ ವಿಧಿವಶ
ಸುದ್ದಿದಿನ ಡೆಸ್ಕ್ | ಮಾಜಿ ಕಡೂರು ಶಾಸಕ ವೈ.ಎಸ್.ವಿ.ದತ್ತ ಪತ್ನಿ ನಿರ್ಮಲಾ (60) ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪತಿ ಮತ್ತು ಒಬ್ಬಳೇ ಮಗಳನ್ನು ಅಗಲಿರುವ ನಿರ್ಮಲಾ ಅವರ ಅಂತಿಮ ದರ್ಶನಕ್ಕೆ ನಾಳೆ ಬೆಳಗ್ಗೆ 10ರ ತನಕ ದತ್ತ ಅವರ ರಾಜಾಜಿನಗರ ನಿವಾಸದಲ್ಲಿ ಅವಕಾಶ ಕಲ್ಪಿಸಲಾಗಿದೆ. ನಾಳೆ ಸಂಜೆ 4 ಗಂಟೆಗೆ ಕಡೂರು ತಾಲೂಕಿನ ಯಗಟಿ ಗ್ರಾಮದ ದತ್ತ ಅವರ ತೋಟದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದಾಗಿ ತಿಳಿದು ಬಂದಿದೆ.