ದಿನದ ಸುದ್ದಿ

ಜಲಾವೃತವಾದ ಬೆಳೆ, ಆತ್ಮಹತ್ಯೆಗೆ ಯತ್ನಿಸಿದ ರೈತ

Published

on

ಸುದ್ದಿದಿನ ಡೆಸ್ಕ್: ಭಾರಿ ಮಳೆಯಿಂದ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು, ನೂರಾರು ಎಕರೆ ಬೆಳೆ ಜಲಾವೃತವಾಗಿದೆ. ಇದರಿಂದ ಮನನೊಂದ ರೈತನೊಬ್ಬ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರು ಸಮೀಪದ ಕುಪ್ಪರವಳ್ಳಿ ಬಳಿ ನಡೆದಿದೆ.

ಕಪಿಲಾನದಿ ತುಂಬಿ ಹರಿಯುತ್ತಿದ್ದು, ನೂರಾರು ಎಕರೆ ಭತ್ತದ ಜಮೀನು ನೀರಿನಲ್ಲಿ ಮುಳುಗಡೆಯಾಗಿದೆ. ಇದರಿಂದ ಹತ್ತಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದು ದಿಕ್ಕು ತೋಚದಂತೆ ಆಗಿದ್ದಾರೆ. ರೈತ ಬಸಯ್ಯ ಎಂಬಾತ ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿ ಬಿತ್ತನೆ ಮಾಡಿದ್ದು, ಇಡೀ ಬೆಳೆ ಮುಳುಗಡೆಯಾಗಿದೆ. ಇದರಿಂದ ಮನ ನೊಂದ ರೈತ ನೀರಿನಲ್ಲಿ ಮುಳುಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಗ ಸ್ಥಳದಲ್ಲಿದ್ದ ಕೆಲವರು ಆತನ ರಕ್ಷಣೆ ಮಾಡಿದ್ದಾರೆ.

English summary: former suicide attempt at kupparavalli,  kapila river.

Leave a Reply

Your email address will not be published. Required fields are marked *

Trending

Exit mobile version