ದಿನದ ಸುದ್ದಿ

ಒಂದೇ ರೈತ ಕುಟುಂಬದ ನಾಲ್ವರು ಸಾವು ಪ್ರಕರಣ : ಕೊನೆಗೂ ಸಿಕ್ತು ಪರಿಹಾರ

Published

on

ಸುದ್ದಿದಿನ , ಪಾಂಡವಪುರ: ಸಾಲಭಾದೆಯಿಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾದ ಸುಂಕಾತೊಣ್ಣೂರು ನಂದೀಶ್ ಅವರ ಮನೆಗೆ ಜಿಲ್ಲಾಧಿಕಾರಿ ಭೇಟಿಕೊಟ್ಟು ನಂದೀಶ್ ಕುಟುಂಬಕ್ಕೆ ಐದು ಲಕ್ಷ ಪರಿಹಾರ ನೀಡಿದರು.

ಜಿಲ್ಲಾಧಿಕಾರಿ ಮನೆಗೆ ಭೇಟಿಕೊಟ್ಟಿಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಂಜುಶ್ರೀ, ಉಪವಿಭಾಗಾಧಿಕಾರಿ ಶೈಲಜಾ, ತಹಶಿಲ್ದಾರ್ ಡಿ.ಹನುಮಂತರಾಯಪ್ಪ ಭೇಟಿಕೊಟ್ಟು ನಂದೀಶ್ ಅವರ ತಂದೆ ಕೆಂಪೇಗೌಡ, ತಾಯಿ ಕಮಲಮ್ಮ ಅವರಿಗೆ ಸಾಂತ್ವನ ಹೇಳಿ ಜಿಲ್ಲಾಡಳಿತದಿಂದ ಪರಿಹಾರ ಚೆಕ್ ವಿತರಿಸಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ಮಂಜುಶ್ರೀ, ಆತ್ಮಹತ್ಯೆಗೆ ಸುಂಕಾತೊಣ್ಣೂರಿನ ನಂದೀಶ್ ಅವರ ಮನೆಗೆ ಭೇಟಿಕೊಟ್ಟು ನಂದೀಶ್ ತಂದೆತಾಯಿಗಳಿಗೆ ಸಾಂತ್ವಾನ ಹೇಳಿದ್ದೇವೆ.‌ಈ ಪ್ರಕರಣವನ್ನು ರೈತ ಆತ್ಮಹತ್ಯೆ ಪ್ರಕರಣ ಎಂಬುದಾಗಿ ಪರಿಗಣಿಸಿ ಜಿಲ್ಲಾಡಳಿತದಿಂದ ೫ ಲಕ್ಷ ರೂ.ಪರಿಹಾರವನ್ನು ನಂದೀಶ್ ಅವರ ತಂದೆ ಕೆಂಪೇಗೌಡ ಖಾತೆ ಆರ್ ಟಿಜಿಎಸ್ ಮಾಡಲಾಗುವುದು, ಅದರ ಪ್ರಮಾಣ ಪತ್ರವನ್ನು ಆ ಕುಟುಂಬಕ್ಕೆ ನೀಡಿದ್ದೇವೆ ಎಂದರು.

ಇನ್ನೂ ನಂದೀಶ್ ಅವರ ಕುಟುಂಬಕ್ಕೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯ ಒದಗಿಸಿಕೊಡಲಾಗುವುದು. ನಂದೀಶ್ ಅವರ ತಾಯಿ ಜಮೀನಿ ಬಿಡಿಸಿಕೊಡಿ ಎಂಬುದಾಗಿ ಮನವಿ ಮಾಡಿದ್ದಾರೆ ಈ ಬಗ್ಗೆ ಮಾತುಕತೆ ಮಾಡಿ ಕ್ರಮತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

four fermer suicide panadavapura mandya

Trending

Exit mobile version