ದಿನದ ಸುದ್ದಿ
ನ್ಯೂಸ್ ಚಾನೆಲ್ ಬಗ್ಗೆ ಸ್ಪಷ್ಟನೆ ಕೊಡ್ತಾರಾ ಬಿ ವೈ ವಿಜಯೇಂದ್ರ, ರವಿಕುಮಾರ್ ?
ಬಿ ವೈ ವಿಜಯೇಂದ್ರ ಮಾಲಕತ್ವದ ನ್ಯೂಸ್ ಫಸ್ಟ್ ಸುದ್ದಿ ವಾಹಿನಿ ಲೋಕಾರ್ಪಣೆಯಾಗುತ್ತಿದೆ ಎಂದು ನಮ್ಮ ವೆಬ್ ಮೀಡಿಯಾ ಬಹಿರಂಗಗೊಳಿಸಿತ್ತು. ಇದು ಮಿಡಿಯಾದಲ್ಲಿ ಪ್ರಸಾರವಾಗಿದ್ದು ಎಕ್ಸ್ ಕ್ಲೂಸಿವ್ ಆದರೂ ಕೂಡಾ ಪತ್ರಕರ್ತರ ಪಡಸಾಲೆಗೆ ಹೊಸಾ ಸುದ್ದಿಯೇನೂ ಅಲ್ಲ.
ಪತ್ರಕರ್ತರ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾದ ಬಿ ವೈ ವಿಜಯೇಂದ್ರ ಮಾಲಕತ್ವದ ನ್ಯೂಸ್ ಫಸ್ಟ್ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ವ್ಯಾಪಕ ಪ್ರತಿಕ್ರಿಯೆಗಳು ಬರುತ್ತಿದೆ. ಒಂದು ಮಾಧ್ಯಮವಾಗಿ ಎಲ್ಲಾ ಪ್ರತಿಕ್ರಿಯೆಗಳನ್ನು ಸುದ್ದಿದಿನ.ಕಾಂ ಸಕಾರಾತ್ಮಕವಾಗಿ ಸ್ವೀಕರಿಸುತ್ತದೆ.
ಬಿ ವೈ ವಿಜಯೇಂದ್ರ ಕರ್ನಾಟಕದ ಮೊದಲ ಸಾಲಿನ ರಾಜಕಾರಣಿ. ಮುಖ್ಯಮಂತ್ರಿ ಪುತ್ರರಾಗಿರುವ ವಿಜಯೇಂದ್ರ ನ್ಯೂಸ್ ಚಾನೆಲ್ ವೊಂದಕ್ಕೆ ಹಣ ಹೂಡಿಕೆ ಮಾಡಿದ್ದಾರೆ ಎಂದರೆ ಅದೊಂದು ಸುದ್ದಿಯಾಗಿ ಮುಖ್ಯವಾಗುತ್ತದೆ. ಜನರ ಬಾಯಲ್ಲಿರುವ ಈ ಸುದ್ದಿಗೆ ಪ್ರತಿಕ್ರಿಯೆ ಕೊಡಬೇಕಿರೋದು ಬಿ ವೈ ವಿಜಯೇಂದ್ರರೇ ಹೊರತು ಇನ್ಯಾರೋ ಅಲ್ಲ. ಬಿ ವೈ ವಿಜಯೇಂದ್ರ ಹಣ ಹೂಡಿಕೆ ಮಾಡಿಲ್ಲ ಅಂತ ಯಾರು ಯಾರೋ ದೂರವಾಣಿ ಕರೆಗಳನ್ನು ಮಾಡುತ್ತಿದ್ದಾರೆ. ಅದನ್ನು ಹೇಳಬೇಕಿರೋದು ಬಿ ವೈ ವಿಜಯೇಂದ್ರ ಮತ್ತು ಬಿ ವೈ ವಿಜಯೇಂದ್ರ ಮಾತ್ರ.
ನ್ಯೂಸ್ ಫಸ್ಟ್ ಚಾನೆಲ್ ಹಲವು ವರ್ಷಗಳಿಂದ ಇಂದು ಬರುತ್ತೆ, ನಾಳೆ ಬರುತ್ತೆ ಎಂಬ ನಿರೀಕ್ಷೆಗಳನ್ನು ಹುಟ್ಟಿಸಿತ್ತು. ನ್ಯೂಸ್ ಫಸ್ಟ್ ಅನುಭವಿಸಿದ ತೊಂದರೆಗಳು, ಎದುರಿಸಿದ ಸವಾಲುಗಳೇ ಭವಿಷ್ಯದ ಪತ್ರಿಕೋಧ್ಯಮಿಗಳಿಗೆ ಪಾಠದಂತಿದೆ. ಈಗ ನ್ಯೂಸ್ ಫಸ್ಟ್ ಚಾನೆಲ್ ಲೋಕಾರ್ಪಣೆಗೊಳ್ಳುವ ಸಂಧರ್ಭದಲ್ಲಿ ಬಿ ವೈ ವಿಜಯೇಂದ್ರ ಹೂಡಿಕೆ ಸದ್ದು ಮಾಡ್ತಿದೆ.
ವಿಜಯೇಂದ್ರ ಹೂಡಿಕೆ ಮಾಡುವುದು ತಪ್ಪೇನಲ್ಲ. ನೇರ ಹೂಡಿಕೆಯೋ, ಪರೋಕ್ಷ ಹೂಡಿಕೆಯೋ ಎಂಬ ಪ್ರಶ್ನೆಗಳೂ ಬರುತ್ತದೆ. ಮಾಧ್ಯಮಗಳು ಜನರಿಗೆ ಉತ್ತರದಾಯಿಯಾಗಿರಬೇಕು ಎಂದು ನ್ಯೂಸ್ ಫಸ್ಟ್ ಸಂಸ್ಥಾಪಕ, ಹಿರಿಯ ಪತ್ರಕರ್ತ ರವಿಕುಮಾರ್ ಅಗಾಧವಾಗಿ ನಂಬಿದವರು. ಈಗ ರವಿಕುಮಾರ್ ಸರ್ ಈ ಬಗ್ಗೆ ಸ್ಪಷ್ಟನೆ ಕೊಡುತ್ತಾರೆ ಎಂದು ನಂಬಿದ್ದೇವೆ.
ಓದುಗರು ತಮ್ಮ ಅನಿಸಿಕೆಯನ್ನು ಪ್ರತಿಕ್ರಿಯೆ ವಿಭಾಗದಲ್ಲಿ ನಮೂದಿಸಬೇಕೇ ಹೊರತು ತಮ್ಮ ಅಭಿಪ್ರಾಯವನ್ನು ಸುದ್ದಿದಿನ.ಕಾಂ ಮೇಲೆ ಕರೆ ಮಾಡಿ ಹೇರಬಾರದು. ಪತ್ರಕರ್ತ ರವಿಕುಮಾರ್ ಸರ್ ಮತ್ತು ಬಿ ವೈ ವಿಜಯೇಂದ್ರ ಅವರ ಎಲ್ಲಾ ರೀತಿಯ ಸ್ಪಷ್ಟನೆಗಳನ್ನು ಪ್ರಕಟಿಸಲು ಸುದ್ದಿದಿನ.ಕಾಂ ಸಿದ್ದವಿದೆ ಎಂದು ತಿಳಿಸಲು ಬಯಸುತ್ತೇವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243