ದಿನದ ಸುದ್ದಿ

ಬಿ ವೈ ವಿಜಯೇಂದ್ರ ಮಾಲಕತ್ವದ ನ್ಯೂಸ್ ಫಸ್ಟ್ ಲೋಕಾರ್ಪಣೆಗೆ ಮುಹೂರ್ತ.. ! ಬಿಜೆಪಿ ಒಡೆತನದ ಮತ್ತೊಂದು ಚಾನೆಲ್.. !

Published

on

  • ಅರುಣ್ ಕುಮಾರ್, ಹಿರಿಯ ಪತ್ರಕರ್ತರು

ನ್ಯೂಸ್ ಫಸ್ಟ್ ಚಾನೆಲ್ ಲೋಕಾರ್ಪಣೆಗೆ ಮೂಹೂರ್ತ ನಿಗಧಿಯಾಗಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರ ಪುತ್ರ, ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಮಾಲಕತ್ವದ ನ್ಯೂಸ್ ಫಸ್ಟ್ ಚಾನೆಲ್ ಸೆಪ್ಟೆಂಬರ್ 20 ರಿಂದ ಪ್ರಾರಂಭವಾಗಲಿದೆ.

ಕಳೆದ ಎರಡು ವರ್ಷಗಳಿಂದ ಭ್ರೂಣವಸ್ಥೆಯಲ್ಲೇ ಇದ್ದ ಮೊಟ್ಟೆಗೆ ಅಂತಿಮವಾಗಿ ಬಿ ವೈ ವಿಜಯೇಂದ್ರ ಕಾವು ಕೊಟ್ಟು ಲೋಕ ದರ್ಶನ ಮಾಡಿಸಿದ್ದಾರೆ. ಆ ಮೂಲಕ ಬಿಜೆಪಿಗರ ಸಾಲು ಗಟ್ಟಲೆ ವಾಹಿನಿಗಳ ಪಟ್ಟಿಗೆ ಮತ್ತೊಂದು ವಾಹಿನಿ ಸೇರ್ಪಡೆಯಾದಂತಾಗಿದೆ.

ಟಿವಿ9 ನಿಂದ ಹೊರ ಹಾಕಲ್ಪಟ್ಟಿದ್ದ ರವಿಕುಮಾರ್ ಮತ್ತು ಮಾರುತಿ ಎಂಬ ಹಕ್ಕಬುಕ್ಕರು ಸೇರಿಕೊಂಡು ಫಸ್ಟ್ ನ್ಯೂಸ್ ಪ್ರಾರಂಭಿಸಿದ್ದರು. ಆರೇ ತಿಂಗಳಲ್ಲಿ ಎಲ್ಲಾ ರೆಡಿಯಾಗಿ ಆನ್ ಏರ್ ಬರುತ್ತೇವೆ ಎಂದು ಮೊದಲ ಮಾಲೀಕರಿಗೆ ಇಬ್ಬರೂ ಭರವಸೆ ನೀಡಿದ್ದರು. ಅದು ಸಾಧ್ಯವಾಗದೇ ಇದ್ದಾಗ ಮತ್ತೊಂದು ಮಾಲೀಕರನ್ನು ಹುಡುಕಲಾಯ್ತು. ಹೊಸಾ ಮಾಲೀಕರೂ ಕೂಡಾ ಒಂದು ವರ್ಷ ವ್ಯರ್ಥ ಹೂಡಿಕೆ ಮಾಡಿದರು‌.

ನೋಟು ಅಮಾಣ್ಯೀಕರಣ, ಆರ್ಥಿಕ ಕುಸಿತ, ಕೊರೋನಾ ಹೊಡೆತವನ್ನು ಚಾನೆಲ್ ಇಲ್ಲದೆಯೇ ಅನುಭವಿಸಿದ ಏಕೈಕ ಚಾನೆಲ್ ಫಸ್ಟ್ ನ್ಯೂಸ್‌. ಕೊನೆಗೆ ಫಸ್ಟ್ ನ್ಯೂಸ್ ಚಾನೆಲ್ ಪ್ರಾರಂಭವಾಗುವುದೇ ಇಲ್ಲ ಎಂದಾದಾಗ ಹಣ ಹೂಡಿಕೆ ಮಾಡಿದ ಉಧ್ಯಮಿಗಳು ಹೂಡಿಕೆ ಹಣವನ್ನು ವಾಪಸ್ ಕೇಳಿದಾಗ ಕಂಪನಿಯ ಹೆಸರನ್ನೇ ಬದಲು ಮಾಡಲಾಯ್ತು.

ಫಸ್ಟ್ ನ್ಯೂಸ್ ಬದಲಿಗೆ ನ್ಯೂಸ್ ಫಸ್ಟ್ ಎಂದು ನಾಮಕರಣ ಮಾಡಿ ಕಳೆದ ಕೆಲ ತಿಂಗಳಿನಿಂದ ಯೂ ಟ್ಯೂಬ್ ನಲ್ಲಿ ಚಾಲ್ತಿಯಲ್ಲಿದೆ. ಇದೀಗ ನ್ಯೂಸ್ 1 ಯಾನೇ ನ್ಯೂಸ್ ಫಸ್ಟ್ ಗೆ ಬಿ ವೈ ವಿಜಯೇಂದ್ರ 45 ಕೋಟಿ ಹೂಡಿಕೆ ಮಾಡಿದ್ದಾರೆ.

ಬಿಜೆಪಿ ಮಾಜಿ ಸಂಸದರಾಗಿರುವ ಲಿಂಗಾಯತ ಸಮುದಾಯದ ದಿಗ್ವಿಜಯ ಚಾನೆಲ್ ಈಗಾಗಲೇ ಹಾಗೋ ಹೀಗೋ ನಡೆಯುತ್ತಿದೆ. ಬಿಜೆಪಿ ಶಾಸಕ ಮುನಿರತ್ನ ಮಾಲಕತ್ವದ ಪಬ್ಲಿಕ್ ಟಿವಿಯೂ ಇದೆ. ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ರವರ ಸುವರ್ಣ ಟಿವಿಯೂ ಇದೆ. ಮೋದಿ ಖಾಸಾ ಮಿತ್ರ ಅಂಬಾನಿಯ ನ್ಯೂಸ್ 18 ಇದೆ. ಹಾಗಿರುವ ಅತ್ತ ಬಿಜೆಪಿಗರಿಗೂ ಬೇಡದ, ಇತ್ತ ಕಾಂಗ್ರೆಸ್, ಜೆಡಿಎಸ್ ಮತ್ತು ಜನಸಾಮಾನ್ಯರ ವಿರೋಧ ಕಟ್ಟಿಕೊಂಡು ಸರ್ಕಾರದ ಯೂಸ್ ಲೆಸ್ ತುತ್ತೂರಿಯ ಅಗತ್ಯ ಏನಿದೆ ?

ಏನಾದರಾಗಲೀ, ಆಲ್ ದಿ ಬೆಸ್ಟ್ ಎಂದು ಹೇಳೋಣಾ ಅಂದ್ರೆ ಸೆಪ್ಟೆಂಬರ್ 20 ಕ್ಕೆ ಉದ್ಘಾಟಣೆ ಆಗೇ ಆಗುತ್ತೆ ಎಂದೇನೂ ಇಲ್ಲ. ಎರಡ್ಮೂರು ವರ್ಷಗಳಿಂದ ಇಂತಹ ಅದೆಷ್ಟೋ ದಿನಾಂಕಗಳನ್ನು ಕಂಡ ಫಸ್ಟ್ ನ್ಯೂಸ್ ಮತ್ತು ನ್ಯೂಸ್ ಫಸ್ಟ್ ಹಲವು ಸಿಬ್ಬಂದಿಗಳಿಗೆ ಸಂಬಳವನ್ನೇ ನೀಡಿಲ್ಲ. ಇದೀಗ ಬಿ ವೈ ವಿಜಯೇಂದ್ರ ಮೂಸೆಯಿಂದ ಹೊರ ಬರುತ್ತಿರುವ ನ್ಯೂಸ್ ಫಸ್ಟ್ ಸೆಪ್ಟೆಂಬರ್ 20 ರಂದಾದ್ರೂ ಹೊರಬರಲಿ ಎಂದು ಹಾರೈಕೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version