ದಿನದ ಸುದ್ದಿ

ಗಜಲ್ ಸಾಹಿತಿ ಮೈಬೂಬಸಾಹೇಬ ವೈ.ಜೆ ಅವರಿಗೆ ಶತಶೃಂಗ ಸಾಹಿತ್ಯ ಪ್ರಶಸ್ತಿ

Published

on

ಸುದ್ದಿದಿನ ಡೆಸ್ಕ್ : ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ ಗ್ರಾಮದವರಾದ ಇವರು ಉನ್ನತ ವ್ಯಾಸಂಗ ಮಾಡುವಾಗಲೇ ಯುವ ಸಾಹಿತಿಯಾಗಿ,ಹೋರಾಟಗಾರರ ಸಾಲಿನಲ್ಲಿಯೂ ಗುರುತಿಸಿಕೊಂಡು ಇವರ ಕಥೆ, ಕವನ ಗಜಲ್,ವಿಮರ್ಶೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಿವೆ.

ಇವರಿಂದ ಚಂದನವಾಹಿನಿ ಗಜಲ್ ಹರಟೆಕಟ್ಟೆ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ರಾಜ್ಯದಾದ್ಯಂತ ಪ್ರಸಾರ ಮಾಡಿತ್ತು.

ಎಳೆಯ ವಯಸ್ಸಿನಲ್ಲಿಯೇ ಭರವಸೆಯ ಸಾಹಿತಿಯಾಗಿ ಗುರುತಿಸಿಕೊಂಡಿರುವ ಇವರಿಗೆ ಕರುನಾಡ ಸಾಹಿತ್ಯ ರತ್ನ, ಯುವಸಾಧಕ ರತ್ನ, ತ.ರಾ.ಸು ರತ್ನ, ಕಹಳೆ ಕಥಾ ಸಾಧಕ,ಜ್ಞಾನಜ್ಯೋತಿಯಂತಹ ಹಲವಾರು ಪ್ರಶಸ್ತಿಗಳು ಲಭಿಸಿವೆ.

ಇವರ ಈವರೆಗಿನ ಸಾಹಿತ್ಯ ಸಾಧನೆಯನ್ನು ಗುರುತಿಸಿ ಸ್ವರ್ಣ ಭೂಮಿ ಫೌಂಡೇಷನ್(ರಿ) ಬೆಂಗಳೂರು, ವಾರ್ಷಿಕವಾಗಿ ಕೊಡುವ ಶತಶೃಂಗ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿದ್ದು,ನಾಡಿನ ಖ್ಯಾತಸಾಹಿತಿ ದೊಡ್ಡರಂಗೇಗೌಡ ಅವರ ಅದ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು‌.ಎಂದು ಸಂಸ್ಥಾಪಕ ಅಧ್ಯಕ್ಷರಾದ ಬಿ.ಶಿವಕುಮಾರ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version