ದಿನದ ಸುದ್ದಿ
ಬಾವಿಗೆ ಬಿದ್ದ ಮೇಕೆ ಮರಿ ರಕ್ಷಿಸಿದ ಅಗ್ನಿ ಶಾಮಕ ಸಿಬ್ಬಂದಿ
ಸುದ್ದಿದಿನ ಡೆಸ್ಕ್: ಬಾವಿಗೆ ಬಿದ್ದ ಮೇಕೆ ಮರಿಯೊಂದನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ.
ಬಾವಿಗೆ ಮೇಕೆ ಮರಿ ಬಿದ್ದಿದ್ದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಏನೇ ಹರಸಾಹಸ ಮಾಡಿದರೂ ಮೇಕೆ ಮರಿ ಹೊರ ತರಲು ಸಾಧ್ಯವಾಗಲಿಲ್ಲ. ಕೊನೆಗೆ ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿದ ಗ್ರಾಮಸ್ಥರು ಸ್ವಲ್ಪ ಹೊತ್ತು ಕಾದರು.
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಹಗ್ಗದ ಸಹಾಯದಿಂದ ಬಾವಿಯೊಳಗೆ ಇಳಿದು ಮೇಕೆ ಮರಿ ರಕ್ಷಿಸಿದರು. ಪ್ರಾಣ ರಕ್ಷಣೆ ವಿಷಯದಲ್ಲಿ ಅಗ್ನಿ ಶಾಮಕ ದಳ ಯಾರನ್ನೂ ನಿರ್ಲಕ್ಷಿಸುವುದಿಲ್ಲ ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆ.
ಮೇಕೆ ಮರಿ ಪ್ರಾಣ ರಕ್ಷಿಸಿದ ಸಿಬ್ಬಂದಿ ವರ್ಗಕ್ಕೆ ಸುದ್ದಿದಿನ ಅಭಿನಂದನೆ ಕೋರುತ್ತದೆ.