ದಿನದ ಸುದ್ದಿ

ಇಂದು ಶುಭ ಶುಕ್ರವಾರ, ವಿವಿಧೆಡೆ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವಾದ ಇಂದು ಶುಭ ಶುಕ್ರವಾರ ದಿನವನ್ನಾಗಿ ಕ್ರೈಸ್ತ ಧರ್ಮೀಯರು ಶ್ರದ್ಧಾ ಭಕ್ತಿಗಳಿಂದ ಆಚರಿಸಿದರು.

ಗುಡ್ ಫ್ರೈಡ್ ಅಂಗವಾಗಿ ಗುರುವಾರ ಆರಂಭವಾದ ಪ್ರಾರ್ಥನೆ ಹಾಗೂ ಆಚರಣೆಗಳು ಭಾನುವಾರದಂದು ಈಸ್ಟರ್ ಆಚರಣೆಯೊಂದಿಗೆ ಮುಕ್ತಾಯವಾಗುತ್ತದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನಾ ಸಭೆಗಳನ್ನು ಏರ್ಪಡಿಸಲಾಗಿತ್ತು. ದೊಡ್ಡಬಳ್ಳಾಪುರದ ಸಂತ ಪೇತ್ರರ ಚರ್ಚ್‌ನಲ್ಲಿ ಆಂಟೋನಿ ಡಿಸೋಜಾ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಏರ್ಪಡಿಸಲಾಗಿತ್ತು. ಚಿತ್ರದುರ್ಗ ನಗರದ ಹೋಲಿ ಚರ್ಚ್‌ನಲ್ಲಿ ನೂರಾರು ಜನ ಕ್ರೈಸ್ತ ಭಾಂಧವರು ಪ್ರಾರ್ಥನೆ ಸಲ್ಲಿಸಿದರು.

ಗದಗ- ಬೇಟಗೆರಿ ಅವಳಿ ನಗರದ ಸಂತ ಇಗ್ನಾಷಿಯಸ್ ಲಯೋಲ ಚರ್ಚ್ ಸೇರಿದಂತೆ ಜಿಲ್ಲೆಯ ಅನೇಕ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಆಯೋಜಿಸಲಾಗಿತ್ತು.
ಯಾದಗಿರಿ ನಗರದ ಚರ್ಚ್‌ಗಳಲ್ಲಿ ಶಿಲುಬೆಯ ಹಾದಿ, ಶಿಲುಬೆಯ ಆರಾಧನೆ ಮತ್ತಿತರ ಕಾರ್ಯಕ್ರಮಗಳು ಬೆಳಗ್ಗೆಯಿಂದ ನಡೆದವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version