ದಿನದ ಸುದ್ದಿ

ಬಿಗ್ ಬ್ರೇಕಿಂಗ್ | ‘2000 ಕೋಟಿ GST ಹಗರಣ’ ಬಯಲಿಗೆ ; 14 ಕಂಪನಿಗಳ ಮೇಲೆ ರೇಡ್..!

Published

on

ಸುದ್ದಿದಿನ,ಬೆಂಗಳೂರು : ಕರ್ನಾಟಕ ವಾಣಿಜ್ಯ ತೆರಿಗೆ ಅಧಿಕಾರಿಗಳ ಬೃಹತ್​​ ಕಾರ್ಯಾಚರಣೆ ನಡೆಸಿದ್ದು ಸುಮಾರು 2000ಕೋಟಿ‌ ರೂ ಹಗರಣ ಬಯಲಿಗೆ ಬಂದಿ್ರದೆ. ಜಿಎಸ್​ಟಿ ಜಾರಿ ನಂತರ ಇಡೀ ದೇಶದಲ್ಲೇ ಇದು ಬೃಹತ್​​​ ರೇಡ್​ ಆಗಿದ್ದು, 14 ಕಂಪನಿಗಳ ಮೇಲೆ ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಮೂವರನ್ನು ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

203 ಕೋಟಿ ಮೊತ್ತದ ಬೋಗಸ್​ ಬಿಲ್​​ ನೀಡಿರುವ ಮೂವರು ಆರೋಪಿಗಳು, ನೂರಾರು ಜಿಎಸ್​ಟಿ ಡೀಲರ್​ಗಳಿಗೆ ಕೋಟಿ ಕೋಟಿ ರೂ ಬೋಗಸ್ ಬಿಲ್​​​ ಕೊಟ್ಟಿದ್ದಾರೆ. ಲ್ಯಾಪ್​ಟಾಪ್​​, ಕಂಪ್ಯೂಟರ್​​​,ಡೈರಿ ಮತ್ತು ದಾಖಲೆಗಳು ವಶಕ್ಕೆ ಪಡೆದಿರುವ ಅಧಿಕಾರಿಗಳು, ಪ್ರಮುಖವಾಗಿ ತೆರಿಗೆ ವಂಚನೆ ಮಾಡಿರುವ ಕಂಪನಿ ರಾಯಲ್ ಎಂಟರ್ ಪ್ರೈಸಸ್, ರಾಜೀವ್ ಎಂಟರ್ ಪ್ರೈಸಸ್ ಈ ಎರಡು ಕಂಪನಿಗಳ ಮಾಲೀಕ ವಿಕ್ರಮ್ ದಗಲ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version