ದಿನದ ಸುದ್ದಿ
ಜೀವನ ಮೌಲ್ಯಗಳನ್ನು ಮಕ್ಕಳಿಗೆ ಹೇಳಿಕೊಡುವಲ್ಲಿ ಕನ್ನಡದ ಶಿಶುಗೀತೆಗಳು ಅತ್ಯಂತ ಪೂರಕ : ಎಚ್.ಬಿ. ಮಂಜುನಾಥ್
ಸುದ್ದಿದಿನ,ದಾವಣಗೆರೆ: ಜೀವನ ಮೌಲ್ಯಗಳನ್ನು ಪ್ರಾಮಾಣಿಕವಾಗಿ ಎಲ್ಲಿ ಪಾಲಿಸಲಾಗುತ್ತದೆಯೋ ಅದಕ್ಕೆ ಸುಸಂಸ್ಕೃತ ಸಮಾಜ ಎಂದು ಹೇಳುತ್ತಾರೆ. ಜೀವನ ಮೌಲ್ಯಗಳು ಸಾಕಾರಗೊಳ್ಳಬೇಕಾದರೆ ಮಕ್ಕಳು ಚಿಕ್ಕವರಿರುವಾಗಲೇ ಅವರಿಗೆ ಅರಿವಾಗುವ ಹಾಗೆ ನಾವು ಹೇಳಿದ್ದೇ ಆದಲ್ಲಿ ಜೀವನ ಮೌಲ್ಯಗಳು ಸಮಾಜದಲ್ಲಿ ಸಾಕಾರಗೊಳ್ಳುತ್ತವೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಬಿ. ಮಂಜುನಾಥ್ ಹೇಳಿದರು.
ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು 65ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡ ಅಂತರ್ಜಾಲ ಮೂಲಕ ಕನ್ನಡ ನುಡಿ ಹಬ್ಬ ಕಾರ್ಯಕ್ರಮದ 14 ನೇ ದಿನದ ಕಾರ್ಯಕ್ರಮದಲ್ಲಿ “ಕನ್ನಡ ಕೆಲವು ಶಿಶುಗೀತೆ ಗಳಲ್ಲಿ ನಮ್ಮ ಸಂಸ್ಕೃತಿ” ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡಿದರು.
ಜೀವನ ಮೌಲ್ಯಗಳನ್ನು, ಬದುಕಿನ ಒಳ್ಳೆಯ ಅಂಶಗಳನ್ನು ಮಕ್ಕಳಿಗೆ ಹೇಳಿಕೊಡುವಲ್ಲಿ ನಮ್ಮ ಕನ್ನಡದ ಶಿಶುಗೀತೆಗಳು ಅತ್ಯಂತ ಪೂರಕವಾಗಿವೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡುತ್ತ ನಾವು ಮತ್ತೊಬ್ಬರಿಗೆ ಉಪಕಾರಿ ಆಗಿರಬೇಕು, ಇನ್ನೊಬ್ಬರ ಒಳ್ಳೆಯತನ ಗುರುತಿಸಬೇಕು, ಮನೆಗೆ ಒಬ್ಬರನ್ನು ಕರೆಯಬೇಕು, ಎಲ್ಲ ಪ್ರಾಣಿ -ಪಕ್ಷಿ, ಗಿಡ- ಮರ -ಬಳ್ಳಿ, ಪ್ರಕೃತಿಯನ್ನು ನಮ್ಮಂತೆ ಅವುಗಳನ್ನು ನೋಡಬೇಕು. ಅದರಲ್ಲಿ ನಮ್ಮನ್ನು ನಾವು ಕಾಣಬೇಕು. ಇವೆಲ್ಲಾ ಜೀವನ ಮೌಲ್ಯಗಲಾಗಿರುತ್ತವೆ ಎಂದು ಹೆಚ್. ಬಿ. ಮಂಜುನಾಥರವರು ತಿಳಿಸಿದರು. ಇಂತಹ ಜೀವನ ಮೌಲ್ಯಗಳನ್ನು ಚಿಕ್ಕ ಚಿಕ್ಕ ಮಕ್ಕಳಿಗೆ ಬಾಲ್ಯದಿಂದಲೇ ಹೇಳಿಕೊಡುತ್ತಾ ಬಂದಾಗ ಅವರು ಮುಂದೆ ಮೌಲ್ಯಯುತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ನಿಟ್ಟಿನಲ್ಲಿ ಹೇಳುವುದಾದರೆ ನಮ್ಮ ಕರ್ನಾಟಕದ ಕೆಲವು ದಶಕಗಳ ಹಿಂದಿನ ದಿನಗಳಲ್ಲಿ ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿತ ಕೆಲವು ಪದ್ಯಗಳು ಇವತ್ತಿಗೂ ನನಗೆ ನೆನಪಿದೆ ಎಂದು ಆ ಪದ್ಯಗಳನ್ನು ನೆನಪಿಸುತ್ತಾ ಮಂಜುನಾಥರವರು ಕೆಳಗಿನ ಕೆಲವು ಶಿಶು ಗೀತೆಗಳನ್ನು ಉದಾಹರಿಸಿದರು.
ಬಾರಲೇ ಹಕ್ಕಿ, ಬಣ್ಣದ ಹಕ್ಕಿ
ಬಾರಲೇ ಹಕ್ಕಿ, ಹಾರುವ ಹಕ್ಕಿ,
ಗೆಳೆಯರು ಆಡಲು ಯಾರು ಇಲ್ಲ
ಕಳೆಯುವುದೆಂದು ವೇಳೆಯನೆಲ್ಲ
ಅಮ್ಮನು ನೀರಿಗೆ ಹೋಗಿಹಳು, ಅಪ್ಪನು ಪೇಟೆಗೆ ಹೋಗಿಹನು,
ಅಮ್ಮನು ಬರಲಿ, ಅಪ್ಪನು ಬರಲಿ,
ತಿನ್ನಲು ಅಣ್ಣನು ಕೊಡಿಸುವೆನು
ನನಗೂ ಹಾರಲು ಕಲಿಸು
ಬಾ ಬಾ ಬಾ
ನನಗೂ ಹಾಡಲು ಕಳಿಸು
ನಾನು ನೀನು ಇಬ್ಬರೂ ಸೇರಿ
ಮುಗಿಲಿಗೆ ಹಾರುವ ಬಾ.
ಈ ಶಿಶು ಗೀತೆಯನ್ನು ನೆನಪಿಸಿಕೊಳ್ಳುತ್ತಾ ಮಗು ಇದರಲ್ಲಿರುವ ತಾದಾತ್ಮ ಕತೆ ಯನ್ನು ಅನುಭವಿಸುತ್ತಾ ಆನಂದಿಸುತ್ತದೆ. ಈ ಶಿಶುಗೀತೆಗಳು ಕೊನೆಯಲ್ಲಿ ನೀತಿಯನ್ನು ಹೇಳುವಂತಹ ಗುಣವನ್ನು ಹೊಂದಿವೆ ಎಂದು ತಿಳಿಸುತ್ತಾ ಮುಂದುವರೆದು..
“ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ”
“ ಚಂದಿರನೇತಕೆ ಓಡುವನಮ್ಮ ಮೋಡಕೆ ಬೆದರಿಹನೆ”
ಎಂಬ ಕೆಲವು ಶಿಶು ಗೀತೆಗಳನ್ನು ಹಾಡುತ್ತಾ
“ ಒಂದು ಎರಡು ಬಾಳೆಲೆದೆರಡು ಮೂರು-ನಾಲ್ಕು ಅನ್ನ ಹಾಕು”
ಈ ಗೀತೆಯಲ್ಲಿ ಮನೆಗೆ ಬಂದ ಅತಿಥಿಗಳಿಗೆ ಬಾಳೆ ಎಲೆಯಲ್ಲಿ ಬಿಸಿ ಅನ್ನ ಮಾಡಿ, ಊಟ ಹಾಕು. ಅತಿಥಿಗಳು ಊಟ ಮಾಡಿದ ಎಲೆಯನ್ನು ನೀನು ತೆಗೆದುಹಾಕು ಎನ್ನುವ ಅತಿಥಿ ಸತ್ಕಾರದ ನೀತಿಯನ್ನು ಈ ಶಿಶುಗೀತೆಯು ಒಳಗೊಂಡಿರುವುದನ್ನು ತಿಳಿಸಿದರು.
“ಏರುತಿಹುದು ಹಾರುತಿಹುದು ನೋಡು ನಮ್ಮ ಭಾವುಟ” ಎಂಬ ಗೀತೆಯನ್ನು ಹಾಡುತ್ತಾ ಈ ಗೀತೆಗಳು ಮಕ್ಕಳಿಗೆ ಅರ್ಥವಾಗುವ ಹಾಗೆ ಮಗುವಿನ ಕಲ್ಪನೆಯನ್ನು ಕಟ್ಟಿ ಕೊಡುವುದಕ್ಕೆ ಸಾಧ್ಯವಾಗಿದೆ ಜೊತೆಗೆ ವಿಶಾಲವಾದ ಭಾವನೆಗಳನ್ನು ಬೆಳೆಸುವುದರೊಂದಿಗೆ ಮಕ್ಕಳಲ್ಲಿ ರಾಷ್ಟ್ರಾಭಿಮಾನ, ರಾಷ್ಟ್ರೀಯ ಐಕ್ಯತೆ, ರಾಷ್ಟ್ರೀಯ ಗೌರವವನ್ನು ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರಧ್ವಜದ ಮಹತ್ವ, ರಾಷ್ಟ್ರದ ಮಹತ್ವ ಹೀಗೆ ಹಲವು ಕಲ್ಪನೆಗಳನ್ನು ವಿಚಾರಗಳನ್ನು ಭಾವನೆಗಳನ್ನು ಮಕ್ಕಳಲ್ಲಿ ಬಿತ್ತರಿಸುವ ರೊಂದಿಗೆ ಮೌಲ್ಯಯುತವಾದ ನೀತಿಗಳನ್ನು ಮಕ್ಕಳಿಗೆ ಕಲಿಸುತ್ತವೆ ನುಡಿದರುು ಎಂದರು.
ಅಧ್ಯಕ್ಷೀಯ ನುಡಿ ಗಳನ್ನಾಡಿದ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಿ ವಾಮದೇವಪ್ಪ ನವರು ಇಂದು ಮಕ್ಕಳ ದಿನಾಚರಣೆ. ನೆಹರುರವರ 131ನೇ ಹುಟ್ಟುಹಬ್ಬವನ್ನು ನೆನಪಿಸಿಕೊಳ್ಳುತ್ತಾ ಪುಟಾಣಿಗಳಾದ ಕುಮಾರ ನಿಶ್ಚಲ್ ಎಸ್ ಕಿರ್ತಿ, ಹಾಗೂ ಕುಮಾರಿ ಧಾತ್ರಿ ಎಸ್ ಕೀರ್ತಿ ಇವರಿಗೆ ಸಿಹಿ ತಿನ್ನಿಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಾ ನಾಡಿನ ಎಲ್ಲಾ ಮಕ್ಕಳಿಗೂ ಶುಭವನ್ನು ಹಾರೈಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು, ಶಿಶುಗೀತೆಗಳ ರಚನಾಕಾರರು ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನಲ್ಲೂ ಅನೇಕರಿದ್ದಾರೆ. ಶಿಶುಗೀತೆಗಳು ಮನಸ್ಸಿಗೆ ಮುದ ನೀಡುವಂತಹ ಮತ್ತು ಮಕ್ಕಳನ್ನು ಉರಿದುಂಬಿಸು ವಂತಹ ಒಂದು ಸ್ಫೂರ್ತಿಯ ಸೆಲೆಯಾಗಿವೆ ಎಂದು ಶಿಶು ಗೀತೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
“ಅಜ್ಜನ ಕೋಲಿದು ನನ್ನಯ ಕುದುರೆ ಹೆಜ್ಜೆ ಹೆಜ್ಜೆಗೂ ಕುಣಿಯುವ ಕುದುರೆ
ಕಾಲಿಲ್ಲದೆ ಓಡಾಡುವ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ “
ಎಂಬ ಶಿಶು ಗೀತೆಯನ್ನು ನೆನಪಿಸುತ್ತಾ, ಇಂತಹ ಹಲವಾರು ಶಿಶುಗೀತೆಗಳು ಇಂದು ಜನಮಾನಸದಿಂದ ದೂರ ಸರಿಯುತ್ತಿವೆ ಎಂದು ವಿಷಾದ ವ್ಯಕ್ತಪಡಿಸುತ್ತಾ, ಈ ಗೀತೆಗಳನ್ನು ಹಿರೇಕೋಗಲೂರಿನ ಗೀತಾ, ದಾವಣಗೆಯ ಹಿರಿಯ ಕವಿಯತ್ರಿ ಭಾಗ್ಯಲಕ್ಷ್ಮಿಸು ಅಮೃತಾಪುರ್, ಕಡಲ ತೀರದ ಭಾರ್ಗವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಶಿವರಾಮ ಕಾರಂತರು ಇನ್ನೂ ಹಲವಾರು ಕವಿಗಳು ಶಿಶು ಗೀತೆಗಳನ್ನು ರಚಿಸಿ ಕನ್ನಡ ಸಾಹಿತ್ಯ ಪರಿಷತ್ತಿಗೆ ತಮ್ಮದೇ ಆದ ಕೊಡುಗೆ ನೀಡಿರುವುದನ್ನು ನೆನಪಿಸಿ ಕೊಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ಉಪನ್ಯಾಸಕರ ಪರಿಚಯವನ್ನು ಮಾಡಿಕೊಡುವುದರೊಂದಿಗೆ ಶ್ರೀಮತಿ ರೂಪ ಟಿ. ಎಸ್. ಸಹಾಯಕ ಪ್ರಾಧ್ಯಾಪಕರು, ಆರ್. ವಿ. ಇಂಜಿನಿಯರಿಂಗ್ ಕಾಲೇಜು ಬೆಂಗಳೂರು. ಇವರು ಸರ್ವರನ್ನು ಸ್ವಾಗತಿಸಿದರು.
ದಾವಣಗೆರೆಯ ವಿನಾಯಕ ಬಡಾವಣೆಯ ವಿನೂತನ ಮಹಿಳಾ ಸಮಾಜದ ಕಲ್ಯಾಣಿ ತಂಡದ ಸದಸ್ಯರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243