ರಾಜಕೀಯ

ರಾಷ್ಟ್ರಕ್ಕೆ ಮಾರಕವಾಗಿರುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಾವು ಒಂದಾಗಿದ್ದೇವೆ : ಎಚ್.ಡಿ.ದೇವೇಗೌಡ

Published

on

ಸುದ್ದಿದಿನ, ಬಳ್ಳಾರಿ : ಈ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕೆಂದು ಎರಡೂ ಪಕ್ಷಗಳ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ, ಕಾಂಗ್ರೆಸ್ ನಾಯಕತ್ವದಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸೂಚನೆಯಂತೆ ಕುಮಾರಸ್ವಾಮಿಯವರನ್ನು ಸಿಎಂ ಮಾಡಲಾಗಿದೆ ಎಂದು ಬಳ್ಳಾರಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ನಂತರ ಮಾತನಾಡಿದ ಅವರು ಭಿನ್ನಾಭಿಪ್ರಾಯ ಮರೆತು ಈ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಕೆಲಸ ಮಾಡುತ್ತಿದ್ದೇವೆ, ಹಿಂದೆ ನಡೆದಿರುವ ಘಟನೆಗಳನ್ನು ಮರೆತು ರಾಷ್ಟ್ರಕ್ಕೆ ಹೊಸ ಸಂದೇಶ ನೀಡಲು ಶ್ರಮಿಸಬೇಕಿದೆ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕಿದೆ. ಜಾತ್ಯಾತೀತ ಪಕ್ಷಗಳು ಒಟ್ಟುಗೂಡಿ ರಾಷ್ಟ್ರಕ್ಕೆ ಮಾರಕವಾಗಿರುವ ವ್ಯವಸ್ಥೆ ಏನಿದೆ ಅದನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ, ಹೀಗೆಂದು ನಾವು ನಿರ್ಣಯ ಮಾಡಿದ್ದೇವೆ, ಅದರ ಭಾಗವಾಗಿ ಈ ಚುನಾವಣೆ ನಡೆಸುತ್ತಿದ್ದೇವೆ ಎಂದರು.

ಜಮಖಂಡಿಗೆ ಹೋಗಬೇಕೆಂದು ಸಿದ್ದರಾಮಯ್ಯ ಹೇಳಿದರೆ ಅಲ್ಲಿಗೂ ಹೋಗುವೆ, ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಒಳ್ಳೆಯ ವ್ಯಕ್ತಿ, ಇವರಿಗಿಂತ ಒಳ್ಳೆಯ ಅಭ್ಯರ್ಥಿ ಹುಡುಕಲು ಸಾಧ್ಯವಿಲ್ಲ. ಜೆಡಿಎಸ್ ಕಾರ್ಯಕರ್ತರು ಶಕ್ತಿ ಮೀರಿ ಹೋರಾಟ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕಿದೆ, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲೇಬೇಕು ಎಂಬುದು ನಮ್ಮ ಅಭಿಪ್ರಾಯ, ಗೆಲುವು ಸಾಧಿಸುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ರಾಹುಲ್ ಗಾಂಧಿ ಪ್ರಧಾನಮಂತ್ರಿ ಅಭ್ಯರ್ಥಿ

ಬಿಜೆಪಿಗೆ ಕನಿಷ್ಟ ಕಾಳಜಿ ಇದೆಯೇ? ರಾಜ್ಯ ಏಕೀಕರಣ ಆದ ನಂತರ ನೀರಾವರಿ ಯೋಜನೆಗಳನ್ನು ಈ ಭಾಗದಲ್ಲಿ ನಾನು ಜಾರಿಗೆ ತಂದಿದ್ದೇನೆ, ಸುಮಾರು 9 ನೀರಾವರಿ ಯೋಜನೆಗಳನ್ನು ಈ ಭಾಗಕ್ಕೆ ತಂದಿದ್ದೇನೆ. ರಾಹುಲ್ ಗಾಂಧಿ ಬಗ್ಗೆ ಲಘುವಾದ ಮಾತುಗಳನ್ನಾಡಲು ಸಿದ್ಧ ಇಲ್ಲ, 130 ವರ್ಷ ಹಳೆಯದಾದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಅವರು ಓರ್ವ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ,ರಾಹುಲ್ ಗಾಂಧಿಯವರು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ನಾನು ಒಪ್ಪುತ್ತೇನೆ ಎಂದು ನುಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version