ರಾಜಕೀಯ

ಯಡಿಯೂರಪ್ಪ ಹೋಮ ಹವನ ‘ಠುಸ್’ ಆಗಲಿದೆ : ಎಚ್.ಡಿ.ರೇವಣ್ಣ

Published

on

ಸುದ್ದಿದಿನ,ಬೆಳಗಾವಿ : ಬಿಜೆಪಿಯವರು ರಾಷ್ಟ್ರದ ಜನರನ್ನ 17ರೂಪಾಯಿಗೆ ಅಡವಿಟ್ಟುಕೊಂಡಿದ್ದಾರೆ. ಬಿಜೆಪಿಯವರು ಅಧಿಕಾರದ ಭ್ರಮೆಯಲ್ಲಿದ್ದಾರೆ.ಕಾಟಾಚಾರಕ್ಕೆ ಬರಗಾಲದ ಪ್ರವಾಸ ಮಾಡಿದ್ದಾರೆ. ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಹೋಮ್ ಠುಸ್ ಆಗಲಿದೆ ಎಂದು ಬೆಳಗಾವಿಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ವ್ಯಂಗ್ಯವಾಡಿದರು.

5ವರ್ಷ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತೆ.
ಸಿಎಂ ಎಚ್ ಡಿ ಕುಮಾರಸ್ವಾಮಿ ಸಿಎಂ ಆಗಿ ಮುಂದುವರೆಯಲಿದ್ದಾರೆ.ಈ ಭಾರಿ ಜನಪ್ರಿಯ ಬಜೆಟ್ ಮಂಡನೆ ಮಾಡಲಿದ್ದಾರೆ.ಸಿಎಂ ಆಗೊಕೆ ಯಡಿಯೂರಪ್ಪ ಕನಸು ಕಾಣುತ್ತಿದ್ದಾರೆ.ಯಡಿಯೂರಪ್ಪ ಹೋಮ ಹವನ ಠುಸ್ ಆಗಲಿದೆ ಎಂದರು.

ಕುಮಾರಸ್ವಾಮಿ ಸರ್ಕಾರ ಆರರಂದು ರಾಜ್ಯಪಾಲರಿಂದ ಬಜೆಟ್ ಅಂಗೀಕಾರ ಪಡೆದು,
ಎಂಟರಂದು ಬಜೆಟ್ ಕೂಡ ಅಂಗೀಕಾರ ಆಗುತ್ತೆ. ರಾಜ್ಯದ ಜನರಿಗೆ ಒಳ್ಳೆಯ ಬಜೆಟ್ ನೀಡಲು ಎಂಟು ದಿನಗಳಿಂದ ತಯಾರಿ ನಡೆಸುತ್ತಿದ್ದಾರೆ. ಬಿಜೆಪಿಯವರು ಕೇಂದ್ರ ಸರ್ಕಾರಕ್ಕೆ‌ ಬರಗಾಲದ ಕುರಿತು ಒತ್ತಾಯ ಮಾಡಿ ಅನುದಾನ ತರಬೇಕು. ಆದರೆ ಇದರ ಬಗ್ಗೆ ತಲೆ ಕೆಡಸಿಕೊಳ್ಳುತ್ತಿಲ್ಲ. ಇವರಿಗೆ ಬೆಳಗ್ಗೆ ಸಂಜೆ ಯಾವಾಗ ಸರ್ಕಾರ ಬೀಳುತ್ತೆ ಎನ್ನುವ ಚಿಂತೆ.ಈ ಸರ್ಕಾರ ರೈತರ ಆಶೀರ್ವಾದದಿಂದ ಸುರಕ್ಷಿತವಾಗಿದೆ‌ ಎಂದು ನುಡಿದರು.

ಮಾಜಿ ಸಚಿವ ಎ ಮಂಜು ವಿರುದ್ಧ ಹರಿಹಾಯ್ದ ಸಚಿವ ರೇವಣ್ಣ, ಹಾಸನ ಜನ ಹತ್ತು ವರ್ಷದಿಂದ
ಬಿಕ್ಷುಕರಂತಿದ್ದರು.ಜನರು ಕುಡಿಯುವ ನೀರಿಗಾಗಿ ತಾತ್ಸಾರ ಪಡುತ್ತಿದ್ದರು.ಹಾಸನ ಇಂಜಿನಿಯರಿಂಗ್ ಸಿಟ್ ಕೂಡ ಕಡಿಮೆಯಾಗಿತ್ತು.‌ಡಿಗ್ರಿ ಮತ್ತು ಪಿಜಿ ಸಿಟ್ ಇರಲಿಲ್ಲ. ಹಾಸನ ಜಿಲ್ಲೆಯಲ್ಲಿ ಈಗ ಕಾಂಗ್ರೆಸ್ ಸ್ಥಿತಿ ಎನಿದೆ.‌ನಾವು ಅವರ ಬಗ್ಗೆ ಮಾತನಾಡುವುದಿಲ್ಲ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version