ದಿನದ ಸುದ್ದಿ
‘ಹಂಡಿ ಜೋಗಿ ಸಮುದಾಯ’ಕ್ಕಿಲ್ಲ ಮೂಲಭೂತ ಸೌಕರ್ಯ; ಹೋರಾಟಕ್ಕೆ ಸಜ್ಜು
ಸುದ್ದಿದಿನ,ಚಿತ್ರದುರ್ಗ : ಹಂಡಿ ಜೋಗಿ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡದಿದ್ದರೆ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವುದಾಗಿ ಸಮುದಾಯದ ಪ್ರತಾಪ್ ಜೋಗಿ ಎಚ್ಚರಿಕೆ ನೀಡಿದರು.
ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ ಶ್ರೀ ನುಂಕೆಮಲೆ ಬೆಟ್ಟ ಶ್ರೀ ಕಾಲಭೈರವೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಹಂಡಿ ಜೋಗಿ ಸಮುದಾಯದವರು ಬಳ್ಳಾರಿ ಹೊಸಪೇಟೆ ಸಿರುಗುಪ್ಪ ಚಿತ್ರದುರ್ಗ ಜಿಲ್ಲೆಗಳಿಂದ ಭಾಗವಹಿಸಿದ್ದ ಪ್ರತಾಪ್ ಜೋಗಿ ಮಾತನಾಡಿ ಹಂಡಿಜೋಗಿ ಸಮುದಾಯವು ಬಹಳ ಹಿಂದುಳಿದಿರುವ ಸಮುದಾಯ ಈ ಸಮುದಾಯಕ್ಕೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಇದಕ್ಕೆ ಕಾರಣ ಸಂಘಟನೆಯ ಕೊರತೆ ಮಕ್ಕಳಿಗೆ ಶಿಕ್ಷಣ ಕೊಡಬೇಕು ಆಗ ಅಭಿವೃದ್ಧಿ ಸಾಧ್ಯ ಶ್ರೀ ನುಂಕೆಮಲೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸುಮಾರು ಒಂಬತ್ತು ವರ್ಷಗಳಿಂದಲೂ ಬಂದು ದೇವಸ್ಥಾನದ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಕೂಡಿಟ್ಟ ಹಣವನ್ನು ಶ್ರೀಮಠಕ್ಕೆ ಕೊಟ್ಟು ಸ್ವಾಮಿಯ ಆಶೀರ್ವಾದವನ್ನು ಪಡೆದುಕೊಂಡು ಹೋಗ್ತಾ ಇರೋದು ಸ್ವಾಗತಾರ್ಹ ಎಂದರು.
ಉತ್ತಮವಾದಂತಹ ಸಂಘಟನೆ ಮಾಡಿದರೆ ಪ್ರಜಾಪ್ರತಿನಿಧಿಗಳು ಮಾತನ್ನು ಕೇಳ್ತಾರೆ ಇಲ್ಲ ಅಂತಂದ್ರೆ ಹಂಡಿಜೋಗಿ ಎಂದರೆ ನಮ್ಮನ್ನು ಬಹಳ ಕೀಳಾಗಿ ನೋಡುತ್ತಾರೆ ಸಂಘಟನೆ ಬಹಳ ಅತ್ಯವಶ್ಯಕ ಈಗ ನಮ್ಮ ವೃತ್ತಿಯೂ ಡಬ್ಬಾ ರಿಪೇರಿ ಬೀಗ ರಿಪೇರಿ ಒಂದೂರಿನಿಂದ ಒಂದೂರಿಗೆ ಜೀವನ ಮಾಡದೇ ನಮ್ಮ ಪರಿಸ್ಥಿತಿಯೇ ಇದನ್ನೆಲ್ಲ ತಡೆಯಬೇಕು.ಒಂದು ವಾರದ ಹಿಂದೆ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅಲೆಮಾರಿ ಸಮುದಾಯಗಳಿಗೆ ವಸತಿ ಸೌಲಭ್ಯ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ಕೋಡಿ ಎಂದು ಉನ್ನತ ಮಟ್ಟದ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ ಎಂದು ತಿಳಿಸಿದ್ದಾರೆ. ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದಲ್ಲಿ ಅತಿ ಹೆಚ್ಚು ಹಣ ಕೇವಲ ಸಿಸಿ ರೋಡ್ ಬೇರೆ ಬೇರೆ ಸಮುದಾಯಗಳು ಹೆಚ್ಚು ಸವಲತ್ತುಗಳನ್ನು ತಗೊಳ್ತಾರೆ ಇದನ್ನೆಲ್ಲಾ ನೀವು ತಗೋಬೇಕು ಅಂತ ಅಂದ್ರೆ ನೀವು ಮುನ್ನುಗ್ಗಬೇಕು ಆಗ ಮಾತ್ರ ಸಾಧ್ಯ ಎಂದು ಆತ್ಮಸ್ಥೈರ್ಯವನ್ನು ಪ್ರತಾಪ್ ಜೋಗಿ ಹೇಳಿದರು.
ಈ ಸಂದರ್ಭದಲ್ಲಿ ಹಂಡಿಜೋಗಿ ಬಳ್ಳಾರಿ ಜಿಲ್ಲಾಧ್ಯಕ್ಷ ರಮೇಶ್,ನಾರಣಪ್ಪ ಸಿರಿಗೆರೆ ,ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ,ಯರಿಸ್ವಾಮಿ, ಮಲ್ಲಿಕಾರ್ಜುನ, ಭೀಮಪ್ಪ ಅಗರಿ, ಮಚ್ಚೇಂದ್ರ, ಮೈಲಾರಿ ಶ್ರೀಮಠಕ್ಕೆ ಕಾಣಿಕೆಯನ್ನು ಅರ್ಪಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401