ಸಿನಿ ಸುದ್ದಿ
ಬೆಳ್ತಂಗಡಿಯ ಭಾರತ್ ಸಿನಿಮಾ ಮಂದಿರದಲ್ಲಿದ್ದ ಜೇಮ್ಸ್ ಫಿಲ್ಮ್ ಎತ್ತಂಗಡಿ : ಬಿಜೆಪಿ ಶಾಸಕ ಹರೀಶ್ ಪೂಂಜಾರಿಂದ ಅಪ್ಪುಗೆ ಅವಮಾನ
ಸುದ್ದಿದಿನ,ಮಂಗಳೂರು: ಬೆಳ್ತಂಗಡಿಯ ಭಾರತ್ ಸಿನಿಮಾ ಮಂದಿರದಲ್ಲಿದ್ದ ಜೇಮ್ಸ್ ಫಿಲ್ಮ್ ಎತ್ತಂಗಡಿ ಮಾಡಿಸುವುದರ ಮೂಲಕ ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಅವಮಾನ ಮಾಡಿದ್ದಾರೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ.
ಚಿತ್ರಮಂದಿರದ ಮೇಲೆ ಒತ್ತಡ ಹಾಕಿ ಜೇಮ್ಸ್ ಫಿಲ್ಮ್ ಎತ್ತಂಗಡಿ ಮಾಡಿಸಿರುವ ಪೂಂಜಾ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿ ಕಾಶ್ಮೀರಿ ಫಿಲ್ಮ್ ನೋಡಲು ಒತ್ತಾಯಿಸುತ್ತಿರುವ ಪೋಸ್ಟ್ ಒಂದನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಶಾಸಕ ಪೂಂಜಾ ಅವರ ಈ ನಡೆ ಖಂಡಿಸಿರುವ ಅಪ್ಪು ಅಭಿಮಾನಿಗಳು ಸಿಎಂ ಬೊಮ್ಮಾಯಿಯವರೇ ನಿಮ್ಮ ಮಾತಿಗೆ ಬಿಜೆಪಿ ಶಾಸಕರಿಂದಲೇ ಕವಡೆ ಕಾಸಿನ ಕಿಮ್ಮತ್ತಿಲ್ವಾ? ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಬೆಳ್ತಂಗಡಿಯಲ್ಲಿ
ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ತಿಂಗಳ 24ರಿಂದ 30ರವರೆಗೆ ಕಾಶ್ಮೀರಿ ಫೈಲ್ ಫಿಲ್ಮ್ ವೀಕ್ಷಿಸಲು ಪೂಂಜಾ ಒತ್ತಡಹಾಕಿದ್ದಾರೆ.
ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಬಿಜೆಪಿ ಶಾಸಕ ಹರೀಶ್ ಪೂಂಜಾ ಫೇಸ್‌ಬುಕ್ ಪೋಸ್ಟ್
ಸುದ್ದಿದಿನ.ಕಾಂ|ವಾಟ್ಸಾಪ್|9980346243