ದಿನದ ಸುದ್ದಿ

ಹರ್ಷ ಹತ್ಯೆ ಪ್ರಕರಣ : ಮತ್ತೆ ಇಬ್ಬರ ಬಂಧನ

Published

on

ಸುದ್ದಿದಿನ,ಶಿವಮೊಗ್ಗ: ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಇಲಿಯಾಸ್ ನಗರದ ವಾದಿ ಎ ಹುದಾದ ಅಬ್ದುಲ್ ಖಾದರ್ ಜಿಲಾನ್ (25) ಮತಗತು ಫರಾಜ್ ಪಾಷಾ (24) ಬಂಧಿತ ಆರೋಪಿಗಳಾಗಿದ್ದು, ಹರ್ಷ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟು ಆಗಿದೆ.

ಹರ್ಷ ಕೊಲೆ ಪ್ರಕರಣದಲ್ಲಿ ಈ ಹಿಂದೆ ಮೊಹಮ್ಮದ್ ಖಾಸಿಫ್, ಸಯ್ಯದ್ ನದೀಮ್​, ರಿಹಾನ್ ಶರೀಫ್, ಆಸಿಫ್ ಉಲ್ಲಾ ಖಾನ್, ಅಬ್ದುಲ್ ಅಫಾನ್ ಹಾಗೂ ನಿಹಾನ್ ಎಂಬ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version