ದಿನದ ಸುದ್ದಿ
ವಿಡಿಯೋ | ಹಾವೇರಿ : ನೆರೆ ಸಂತ್ರಸ್ತರಿಗೆ ನೆರವಾದ ನವಿಲೇಹಾಳು ಗ್ರಾಮಸ್ಥರು
ಸುದ್ದಿದಿನ, ಹಾವೇರಿ : ಮಹಾಮಳೆಗೆ ಕರ್ನಾಟಕ ತತ್ತರಿಸಿ ಹೋಗಿದೆ. ಉತ್ತರ ಕರ್ನಾಟಕ ಪ್ರವಾಹಕ್ಕೆ ಸಿಲುಕಿ ಸಾವಿರಾರು ಕೋಟಿ ನಷ್ಟವಾಗಿದೆ. ಜನಜೀವನ ಸಹಜ ಸ್ಥಿತಿಗೆ ಬರಲು ಇನ್ನು ಅದೆಷ್ಟು ದಿನ ಬೇಕೋ? ತಿಳಿಯದು. ಇಂತಹ ಪರಿಸ್ಥಿತಿಯಲ್ಲಿ ಸಂತ್ರಸ್ತರ ನೆರವಿಗೆ ಕರ್ನಾಟಕದ ಜನೆತೆ ಸಹಾಯ ಹಸ್ತ ಚಾಚಿದ್ದಾರೆ.
ಅದರಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನವಿಲೇಹಾಳು ಗ್ರಾಮಸ್ಥರು ನೆರೆ ಹಾವಳಿಗೆ ತುತ್ತಾದ ಹಾವೇರಿ ತಾಲ್ಲೂಕಿನ
ಗೊಡೂರು ಗ್ರಾಮದ ಜನತೆಗೆ ನೆರವಾಗಿದ್ದಾರೆ.
ಆಗಸ್ಟ್ 14 ರ ಮಧ್ಯರಾತ್ರಿ ಗ್ರಾಮಕ್ಕೆ ತಲುಪಿದ ಅವರು, ನವಿಲೇಹಾಳು ಗ್ರಾಮದ ಪರವಾಗಿ ಮೂಲಭೂತ ಅವಶ್ಯಕತೆಯುಳ್ಳ ಸಾಮಗ್ರಿಗಳನ್ನು ನೆರೆ ಸಂತ್ರಸ್ತರಿಗೆ ತಲುಪಿಸಿ ಆ ಗ್ರಾಮದ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ.
ನೆರೆ ಸಂತ್ರಸ್ತರಿಗೆ ನೀಡಿದ ಸಾಮಗ್ರಿಗಳು
- ಅಕ್ಕಿ – 60 ಚೀಲ
- ಉಪ್ಪು – 3 ಚೀಲ
- ಬೆಲ್ಲ – 1 ಚೀಲ
- ತೆಂಗಿನ ಕಾಯಿ – 400
- ಬಿಸ್ಕೇಟ್ – 1 ಬಾಕ್ಸ್
- ಎಣ್ಣೆ – 1 ಬಾಕ್ಸ್
- ಸೀರೆ – 100
- ಪಂಚೆ – 300
- ಟವೇಲ್ – 200
- ನೈಟಿ – 70
- ಬೆಡ್ ಶೀಟ್ – 54
- ನ್ಯಾಪ್ಕಿನ್ – 1 ಬಾಕ್ಸ್
- ಚಿಕ್ಕಮಕ್ಕಳ ಬಟ್ಟೆ – 100+100
- ಔಷಧಿ – 1 ಬಾಕ್ಸ್
ಸುದ್ದಿದಿನ.ಕಾಂ|ವಾಟ್ಸಾಪ್|9980346243