ದಿನದ ಸುದ್ದಿ
ಈ ಹತ್ತು ಜಿಲ್ಲೆಗಳಲ್ಲಿ ಭಾರೀ ಮಳೆ
ಸುದ್ದಿದಿನ ಡೆಸ್ಕ್ ; ರಾಜ್ಯದ ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು, ತುಮಕೂರು, ಕೊಡುಗು ಜಿಲ್ಲೆಗಳ ಧಾರಾಕಾರ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಲಬುರಗಿಯಲ್ಲಿ ದಿನದ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೆಂಗಳೂರು ಸುತ್ತಮುತ್ತ ಸಾಮಾನ್ಯವಾಗಿ ಮೋಡಕವಿದ ವಾತಾವರಣ. ಹಗುರ ಮತ್ತು ಸಾಧಾರಣ ಮಳೆ ಸಾಧ್ಯತೆ. ಗರಿಷ್ಠ 32, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ಸಂಭವ. ಸಂಕೇಶ್ವರ, ನಾಪೋಕ್ಲು, ಕಿರವತ್ತಿ, ಮೂರ್ನಾಡು, ಭಾಗಮಂಡಲ, ನಿಪ್ಪಾಣಿ, ಚಿಕ್ಕೋಡಿ, ಮುದ್ದೇಬಿಹಾಳ, ಧಾರವಾಡ, ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243