ದಿನದ ಸುದ್ದಿ

ಹಾವೇರಿ | ಜಲಾವೃತಗೊಂಡ ಗ್ರಾಮ : ಗಂಟು-ಮೂಟೆ ಕಟ್ಟಿದ ಗ್ರಾಮಸ್ಥರು

Published

on

ಸುದ್ದಿದಿನ,ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿ‌ನ ಮನ್ನಂಗಿ, ಮೆಳ್ಳಾಗಟ್ಟಿ ಸೇರಿದಂತೆ ನದಿ ದಡದ ಬಹುತೇಕ ಗ್ರಾಮಗಳು ಜಲಾವೃತಗೊಂಡಿದ್ದು, ಅಕ್ಷರಶಃ ನಡುಗಡ್ಡೆಯಂತಾಗಿವೆ.

ಗ್ರಾಮದಲ್ಲಿ ನೀರು ನುಗ್ಗುತ್ತಿದ್ದಂತೆ ಎಚ್ಚತ್ತುಕೊಂಡು ಗ್ರಾಮಸ್ಥರು, ತಮ್ಮ ಸಂಬಂಧಿಕರ ಊರುಗಳಿಗೆ ಗಟ್ಟು – ಮೂಟೆ ಕಟ್ಟುತ್ತಿದ್ದಾರೆ. ಮನ್ನಂಗಿ ಗ್ರಾಮಸ್ಥರು ಬಹುತೇಕ ಹೊಸ ಮನ್ನಂಗಿ ಗ್ರಾಮಕ್ಕೆ ಸ್ಥಳಾಂತರಗೊಂಡರು. ಇನ್ನು ಮೆಳ್ಳಾಗಟ್ಟಿ ಗ್ರಾಮಸ್ಥರು, ದೂರದ ಸಂಬಂಧಿಕರ ಗ್ರಾಮಗಳಿಗೆ ತೆರಳಿದರೆ, ಇನ್ನೂ ಕೆಲವರು ಮೆಳ್ಳಾಗಟ್ಟಿ ಪ್ಲಾಟ್ ನಲ್ಲಿರು ಪರಿಚಯಸ್ತರು, ಸಂಭಂಧಿಕರು ಆಶ್ರಯ ಪಡೆದುಕೊಂಡಿದ್ದರೆ,ಮತ್ತೆ ಕೆಲವರ ದೇವಸ್ಥಾನಗಳಲ್ಲಿ, ಶಾಲೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲರು ಮನೆ ಕಾಲಿ‌ ಮಾಡುವಂತ ಸ್ಥಿತಿ‌ ನಿರ್ಮಾಣವಾಗಿದ್ದು, ಗ್ರಾಮಸ್ಥರಿಗೆ ಪುನರ್ವಸತಿ ಕೇಂದ್ರವನ್ನು ತೆರೆಯಬೇಕು. ಜೊತೆಗೆ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದ್ದ, ಜಿಲ್ಲಾಡಳಿತ ತಕ್ಷಣ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಹ ಆಗ್ರಹಿಸಿದ್ದಾರೆ.

ಕೃಪೆ : ಉದಯ ಕಾಲ ನ್ಯೂಸ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version