ದಿನದ ಸುದ್ದಿ
ಶಾಕಿಂಗ್ : ಕೊಡಗಿನಲ್ಲಿ ಭಾರಿ ಮಳೆ: ಫೇಸ್‌ಬುಕ್ ಮೂಲಕ ಸಂತ್ರಸ್ತರ ಮೊರೆ !
ಸುದ್ದಿದಿನ ಡೆಸ್ಕ್: ಮಳೆಯ ಆರ್ಭಟಕ್ಕೆ ಕೇರಳ ಹಾಗೂ ಕರ್ನಾಟಕದ ಅರ್ಧ ಭಾಗ ಅಕ್ಷರಶಃ ನಲುಗಿದೆ. ಕೊಡಗಿನಲ್ಲಿ ಮಳೆ ಆವಾಂತರಕ್ಕೆ ಗುಡ್ಡಗಳ ಅಕ್ಕಪಕ್ಕದ ಮನೆಗಳು ಕುಸಿದಿದ್ದು, ಕೆಲವರು ಮನೆಗಳ ಮಧ್ಯೆ ಸಿಲುಕಿಕೊಂಡಿರುವ ಕುರಿತು ವರದಿಯಾಗಿವೆ. ಕೆಲವರು ಫೇಸ್‌ಬುಕ್ ಲೈವ್ ವಿಡಿಯೋಗಳ ಮೂಲಕ ಜನತೆಯ ನೆರವು ಕೇಳುತ್ತಿದ್ದಾರೆ.
ಕೊಡಗಿನಲ್ಲಿ ಭಾರಿ ಮಳೆ
ಕೊಡಗು ಜಿಲ್ಲೆಯಾದ್ಯಂತ ಇಂದೂ ಕೂಡ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಹಲವು ಪ್ರದೇಶಗಳು ನಡುಗಡ್ಡೆಗಳಂತಾಗವೆ. ಹೊರ ಜಗತ್ತಿನ ಸಂಪರ್ಕವನ್ನೇ ಕಡಿದುಕೊಂಡಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಜನರು ನೆರವಿಗಾಗಿ ಮೊರೆಯಿಡುತ್ತಿದ್ದಾರೆ. ದೇವಸ್ತೂರು ಪ್ರವಾಹಕ್ಕೆ ಸಿಲುಕಿದ್ದು, ಗ್ರಾಮಗಳು ಜಲಾವೃತವಾಗಿವೆ. ನೂರಾರು ಮಂದಿ ಪ್ರಾಣ ರಕ್ಷಣೆಗಾಗಿ ಗುಡ್ಡ ಏರಿ ನಿಂತಿದ್ದಾರೆ. ಮುಕ್ಕೊಡ್ಲಿನಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ಸಹಾಯಕ್ಕೆ ಅಂಗಲಾಚುತ್ತಿದ್ದಾರೆ.
ಅರಕಲಗೂಡು ಆತಂಕ
ರಾಜ್ಯದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಹಾರಂಗಿ ಡ್ಯಾಂನಿಂದ 80 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿರುವುದರಿಂದ ರಾಮನಾಥಪುರದಲ್ಲಿ ತೆರೆದಿದ್ದ ಗಂಜಿ ಕೇಂದ್ರಕ್ಕೂ ನೀರು ನುಗ್ಗಿದೆ. ಹೀಗಾಗಿ ರಾಮನಾಥಪುರದಲ್ಲಿ ಸಾಕಷ್ಟು ಮನೆಯಲ್ಲಿ ಜಲಾವ್ರತವಾಗಿವೆ. ಸ್ಥಳಕ್ಕೆ ಹಾಸನ ಜಿಲ್ಲಾಧಿಕಾರಿ ಎ. ಟಿ. ರಾಮಸ್ವಾಮಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೇರಳಕ್ಕೆ ಪ್ರಧಾನಿ ಮೋದಿ
ಕೇರಳ ಮುಖ್ಯಮಂತ್ರಿ ಪಿ. ವಿಜಯನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯದಾದ್ಯಂತ ಆವರಿಸಿರುವ ಪ್ರವಾಹ ಪರಿಸ್ಥಿತಿಯನ್ನು ಚರ್ಚಿಸಿದ್ದಾರೆ. ಇನ್ನು ರಕ್ಷಣಾ ಕಾರ್ಯಗಳ ಬಗ್ಗೆ ಮಾಹಿತಿ ಪಡೆದ ಪ್ರಧಾನಿ, ಇಂದು ಸಂಜೆ ಪ್ರವಾಹ ಪೀಡಿತ ಪ್ರದೇಶಗಳನ್ನು ವೀಕ್ಷಿಸಲು ಕೇರಳಕ್ಕೆ ಹೋಗಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401