ದಿನದ ಸುದ್ದಿ
ಸಕಲೇಶಪುರ | ಗ್ರಾಮದ ಜನತೆ ಸ್ಥಳಾಂತರಿಸಲು ಸೂಚನೆ | ಎಚ್.ಡಿ.ರೇವಣ್ಣ
ಸುದ್ದಿದಿನ ಡೆಸ್ಕ್ | ಶಿರಾಡಿಘಾಟ್ ರಸ್ತೆ ಇನ್ನೂ ನಾಲ್ಕೈದು ತಿಂಗಳ ಕಾಲ ಸಂಚಾರಕ್ಕೆ ತಡೆಯೊಡ್ಡಲಾಗುವುದು. ರಸ್ತೆ ಕಾಮಗಾರಿ ಸಂಪೂರ್ಣ ಮುಗಿಯುವವರೆಗೆ ಯಾವುದೇ ಸಂಚಾರವಿಲ್ಲ.
ಕಾಮಗಾರಿ ಮುಗಿಯುವುದು ಇನ್ನೂ ನಾಲ್ಕೈದು ತಿಂಗಳಾಗಬಹುದು ಎಂದು ಹೊಳೆನರಸೀಪುರದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಹೆಚ್,ಡಿ,ರೇವಣ್ಣ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಪರಿಶೀಲಿಸಿ ವರದಿ ನಿಡಿ ರಸ್ತೆ ಸರಿಪಡಿಸಿದ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಸಕಲೇಶಪುರ ತಾಲ್ಲೂಕಿನ ಹತ್ತಾರು ಗ್ರಾಮಗಳ ಜನ್ರನ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ. ಹಾಗೆ ಅತ್ತಿಹಳ್ಳಿ, ಹೊಂಗಡಹಳ್ಳ ಮಾಗೇರಿ, ಪಟ್ಲ, ಹೆತ್ತೂರು ಗ್ರಾಮಸ್ಥರಿಗೆ ಗಂಜಿಕೇಂದ್ರ ತೆರೆಯಲು ಸೂಚನೆ ಕೊಡಲಾಗಿದೆ. ಎಲ್ಲಿ ಮಳೆಯಿಂದ ಅಪಾಯವಿದೆಯೋ ಅಲ್ಲಿರುವ ಜನ್ರನ್ನು ಸ್ಥಳಾಂತರಿಸಲು ಕೂಡ ಸೂಚನೆ ಕೊಡಲಾಗಿದೆ ಎಂದು ಹೇಳಿದರು.
ಒಟ್ಟು ಲೋಕೋಪಯೋಗಿ ಇಲಾಖೆಯಲ್ಲಿ 150ಕೋಟಿ ಅಂದಾಜು ನಷ್ಟವಾಗಿದೆ. ಕೊಡಗಿನಲ್ಲಿ ಮಳೆಯಿಂದ ಹಾಳಾಗಿರುವ ರಸ್ತೆಗಳಿಂದ ಅಂದಾಜು 138 ಕೋಟಿ ನಷ್ಟ. ನಾನೇ ನಿನ್ನೆ ಖುದ್ದಾಗಿ ಸ್ಥಳಕ್ಕೆ ಭೆಟಿ ನೀಡಿದ್ದೇನೆ.ನಿನ್ನೆ ಜಿಲ್ಲಾಧಿಕಾರಿ ಜೊತೆ ಮಾತನಾಡಿ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಜನ್ರನ್ನು ರಕ್ಷಿಸಲು ಎರಡು ಹೆಲಿಕಾಪ್ಟರ್ ನ್ನು ಕಳುಹಿಸಲಾಗಿದೆ.ಸಂತ್ರಸ್ತರಗೆ ಎಲ್ಲಾ ರೀತಿಯ ನೆರವು ಒದಗಿಸಲಾಗಿದೆ. ಸರ್ಕಾರದಿಂದ ಎಲ್ಲಾ ನೆರವು ಒದಗಿಸಲಾಗಿದೆ.ಶಿರಾಡಿಘಾಟ್ ನಲ್ಲಿ 4 ತಿಂಗಳು ಸಂಚಾರ ಕಷ್ಟವಾಗುತ್ತದೆ. ಹಾಸನ ಜಿಲ್ಲೆಯಲ್ಲಿ ಪ್ರವಾಹ ನಷ್ಟದ ಬಗ್ಗೆ ಸಂಪೂರ್ಣ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401