ದಿನದ ಸುದ್ದಿ
ಕರಾವಳಿಯಲ್ಲಿ ಭರ್ಜರಿ ಮಳೆ; ಮಧ್ಯ ಕರ್ನಾಟಕದಲ್ಲಿ ಬರೀ ಮೋಡ ಕವಿದ ವಾತಾವರಣ
ಸುದ್ದಿದಿನ ಡೆಸ್ಕ್: ಕಳೆದ ಎರಡು ದಿನಗಳಿಂದ ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಆದರೆ ಇತ್ತ ಮಧ್ಯ ಕರ್ನಾಟಕ ಭಾಗದಲ್ಲಿ ಕೇವಲ ಮೊಡ ಕವಿದ ವಾತಾವರಣವಿದ್ದು, ಕೃಷಿಕರು ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಮಂಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಜಲಾಶಯಗಳು ಭರ್ತಿಯಾಗಿವೆ. ಮುಂದಿನ ಎರಡು ದಿನ ಮಳೆ ಮುಂದುವರಿಯುವ ಸೂಚನೆಯಿದ್ದು, ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಅಗತ್ಯ ಸಿದ್ದತೆ ಮಾಡಿಕೊಂಡಿದೆ. ಬಂಟ್ವಾಳ, ಮಂಗಳೂರು ಸೇರಿದಂತೆ ವಿವಿಧೆಡೆ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಜಲಾಶಯ ಭಾಗದಲ್ಲಿ ಕಾವಲುಗಾರರ ನಿಯೋಜನೆ ಮಾಡಲಾಗಿದೆ.
ಇನ್ನು ಇತ್ತ ಮಧ್ಯ ಕರ್ನಾಟಕ ಭಾಗದಲ್ಲಿ ಕೇವಲ ಮೊಡ ಕವಿದ ವಾತಾವರಣವಿದ್ದು, ಬಿತ್ತನೆ ಮಾಡಿರುವ ರೈತರು ಮುಗಿಲು ನೋಡುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಕತ್ತೆ ಮದುವೆ ಮಾಡಲಾಗುತ್ತಿದೆ.
Heavy rains wreak havoc in Mangalore