ದಿನದ ಸುದ್ದಿ

ನದಿಯಲ್ಲಿ ಮುಳುಗಿದ್ದ ಮಹಿಳೆ ಶವ ಒಂದು ತಿಂಗಳ ನಂತರ ಪತ್ತೆ !

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಹಾಸನ: ಹೇಮಾವತಿ ನದಿಯಲ್ಲಿ ತೆಪ್ಪ ಮುಳುಗಿ ಮಹಿಳೆ ನೀರು ಪಾಲಾಗಿದ್ದು, ಒಂದು ತಿಂಗಳ‌ ನಂತರ ಮಹಿಳೆ ಮೃತದೇಹ ಪತ್ತೆಯಾಗಿದೆ.

ಐಗೂರು ಸೇತುವೆ ಬಳಿ ಮಹಿಳೆ ಶವ ಪತ್ತೆಯಾಗಿದ್ದು, ಸತತ ಹದಿನೈದು ದಿನ ನದಿಯಲ್ಲಿ ಮಹಿಳೆಗಾಗಿ‌ ತಾಲ್ಲೂಕು ಆಡಳಿತ ಶೋಧಕಾರ್ಯ ನಡೆಸಿತ್ತು. ಜಮೀನಿನ ಕೆಲಸ ಮುಗಿಸಿ ಬರುವಾಗ ತುಂಬಿ ಹರಿಯುತ್ತಿದ್ದ ನದಿಯಲ್ಲಿ ಮಹಿಳೆ‌ ಕೊಚ್ಚಿಹೋಗಿದ್ದರು. ತೆಪ್ಪದಲ್ಲಿ ನದಿದಾಟುವಾಗ ಆಕಸ್ಮಿಕವಾಗಿ ತೆಪ್ಪ ಮಗುಚಿತ್ತು.

ಘಟನೆಯಲ್ಲಿ ಮೂವರು ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾಗಿದ್ದರು. ಚಿಕ್ಕಂದೂರು ಮಹಿಳೆ ಸೌಮ್ಯ ಮಾತ್ರ ನದಿನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.ಸಕಲೇಶಪುರ ತಾಲೂಕಿನ ಐಗೂರು ಬಳಿ ನಡೆದಿಧ್ದ ಘಟನೆ ನಡೆದಿತ್ತು.

Trending

Exit mobile version