ದಿನದ ಸುದ್ದಿ

ಯಾವ ದೇಶದ್ರೋಹಿಯನ್ನು ಬಿಡುವುದಿಲ್ಲ : ಸಚಿವ ಆರ್. ಅಶೋಕ್

Published

on

ಸುದ್ದಿದಿನ,ಬೆಂಗಳೂರು: ಶಿವಮೊಗ್ಗದಲ್ಲಿ ನಡೆದಿರುವ ಗಲಭೆಯು ಮುಸ್ಲಿಂ ಗೂಂಡಾಗಿರಿಯಿಂದ ಆಗಿದೆ. ಎಸ್​ಡಿಪಿಐ, ಪಿಎಫ್​ಐ ನಂತಹ ಸಂಘಟನೆಗಳು ಸದಾ ಸಕ್ರಿಯವಾಗಿವೆ ಎನ್ನುವುದಕ್ಕೆ ಇದೊಂದು ದೊಡ್ಡ ನಿದರ್ಶನವಾಗಿದೆ ಎಂದು ಕಂದಾಯ ಸಚಿವ ಆರ್​.ಅಶೋಕ್​ ಹೇಳಿದರು.

ಮಾಧ್ಯಮಗಳೊಂದಿಂಗೆ ಮಾತನಾಡಿದ ಅವರು, ಶಿವಮೊಗ್ಗ ದಲ್ಲಿನಡೆದಿರುವ ಗಲಭೆಗೆ ಹಿಜಾಬ್ ವಿವಾದವೇ ಕಾರಣ ಅನ್ನುವುದು ತಿಳಿದಿದೆ. ಈ ಘಟನೆ ಬಗ್ಗೆ ತೀವ್ರವಾದ ತನಿಖೆ ನಡೆಯುತ್ತಿದ್ದು ಹಲವರನ್ನು ಬಂಧಿಸಲಾಗಿದೆ. ಹಿಜಾಬ್ ವಿವಾದದ ವಿಚಾರದಲ್ಲಿ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಆರೋಪಿಸಿದರು.

ಯಾವ ದೇಶದ್ರೋಹಿಯನ್ನು ಬಿಡುವುದಿಲ್ಲ, ಅವರನ್ನುಮಟ್ಟ ಹಾಕುತ್ತೇವೆ. ತನಿಖೆ ಇನ್ನೂ ನಡೆಯುತ್ತಿದ್ದು, ಇದರಲ್ಲಿ ಪಿಎಫ್​ಐ ಭಾಗಿಯಾಗಿದೆಯಾ ಅನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ. ಈ ಬಗ್ಗೆ ಸಿಎಂ ಅವರ ಜೊತೆ ಇಂದು ಚರ್ಚೆ ಮಾಡುತ್ತೇವೆ ಎಂದರು.

ಸಚಿವ ಕೆ.ಎಸ್. ಈಶ್ವರಪ್ಪ ಅವರು ಕೊಲೆ ಮಾಡಿಸಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಕೂಡ ಹಿಂದೆ ಗೃಹ ಸಚಿವನಾಗಿ ಕೆಲಸ ಮಾಡಿದ್ದು, ಪೊಲೀಸ್ ಇಲಾಖೆ ಅನ್ನುವುದು ಸ್ವತಂತ್ರ ಸಂಸ್ಥೆಯಾಗಿದ್ದು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ, ತನಿಖೆ ನಡೆಯುತ್ತಿದೆ.ಅದು ಮುಖ್ಯಮಂತ್ರಿಗಳ ಗಮನಕ್ಕೂ ಬಂದಿದ್ದು, ಹಲವು ಜನ ಸಲಹೆ ಕೊಟ್ಟಿದ್ದಾರೆ, ಕೊಟ್ಟ ಸಲಹೆ ಗೌರವಯುತವಾಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version