ದಿನದ ಸುದ್ದಿ

ಹಿಂದೂ ಪಾಕಿಸ್ತಾನ್ ಹೇಳಿಕೆ | ತರೂರ್ ಕುಟುಕಿದ ಸುಬ್ರಹ್ಮಣಿಯನ್ ಸ್ವಾಮಿ

Published

on

ಸುದ್ದಿದಿನ ಡೆಸ್ಕ್ | ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರು ನೀಡಿರುವ ಹಿಂದೂ ಪಾಕಿಸ್ತಾನ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು, ತರೂರ್ ಅವರಿಗೆ ಆರೋಗ್ಯ ಸಮಸ್ಯೆ ಇದ್ದು, ಪ್ರಧಾನಿ ಅವರು ಈ ಕೂಡಲೇ ಅವರಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಕುಟುಕಿದ್ದಾರೆ.

ಇನ್ನೊಮ್ಮೆ ಮೋದಿ ಸರಕಾರ ಆಡಳಿತಕ್ಕೆ ಬಂದರೆ ಭಾರತವು ಹಿಂದೂ ಪಾಕಿಸ್ತಾನವಾಗುವುದು ಖಚಿತ ಎಂದು ತರೂರ್ ಅವರು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿ ಅವರು, ತರೂರ್‌ಗೆ ಪಾಕಿಸ್ತಾನದ ಮೇಲೆ ಇಷ್ಟು ಪ್ರೀತಿ ಯಾಕೆ ಗೊತ್ತಿಲ್ಲ. ಅವರಿಗೆ ಪಾಕಿಸ್ತಾನದ ಗರ್ಲ್ ಫ್ರೆಂಡ್ ಇರುವುದು ಗೊತ್ತಿರುವ ವಿಷಯ. ಅದಕ್ಕಾಗಿ ಅವರು ಹಾಗೆ ವರ್ತಿಸುತ್ತಿದ್ದಾರೆ. ಬಹುಶಃ ಅವರಿಗೆ ಓವರ್ ಡೋಸ್ ಆಗಿರಬಹುದು ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ನಾಯಕರು ಹಿಂದೂ ಉಗ್ರವಾದ ಎಂಬ ಬಗ್ಗೆ ಮಾತನಾಡುತ್ತಿದ್ದರು. ಈಗ ಹಿಂದೂ ಪಾಕಿಸ್ತಾನ್ ಎಂಬ ಹೇಳಿಕೆಯು ಕಾಂಗ್ರೆಸ್ ಕೈನಲ್ಲಿ ಯಾವುದೇ ಅಸ್ತ್ರವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version