ದಿನದ ಸುದ್ದಿ
ತೋಟಗಾರಿಕೆ ತರಬೇತಿ ; ಅರ್ಜಿ ಆಹ್ವಾನ
ಸುದ್ದಿದಿನ,ಧಾರವಾಡ : ರೈತ ಮಕ್ಕಳಿಗೆ 2022-23 ನೇ ಸಾಲಿಗೆ, 10 ತಿಂಗಳ ಅವಧಿಯ ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಗದಗದಲ್ಲಿ ತರಬೇತಿ ನೀಡಲಾಗುವುದು .
ಅಭ್ಯರ್ಥಿಗಳು ಅರ್ಜಿಗಳನ್ನು ಧಾರವಾಡ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಲ್ಲಾ ಪಂಚಾಯತ) ಧಾರವಾಡ ಕಛೇರಿಯಲ್ಲಿ ನಿಗದಿತ ಶುಲ್ಕ ಹಾಗೂ ದಾಖಲಾತಿಗಳೊಂದಿಗೆ ಸಲ್ಲಿಸಬೇಕು.
ಅರ್ಜಿ ನಮೂನೆಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ) ಸ್ಟೇಷನ್ ರಸ್ತೆ, ಧಾರವಾಡ ಕಛೇರಿಯಲ್ಲಿ ಅಥವಾ ಇಲಾಖಾ ವೆಬ್‍ಸೈಟ್ https://horticulturedir.karnataka.gov.in ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳ ಸಲ್ಲಿಸಲು ಏಪ್ರೀಲ್ 16 ರ ಕೊನೆಯ ದಿನವಾಗಿದೆ.
ಇದನ್ನೂ ಓದಿ |ಸಾಹಿತಿಗಳ ಕೂದಲು ಮುಟ್ಟಲು ಕಾಂಗ್ರೆಸ್ ಬಿಡುವುದಿಲ್ಲ : ಬಿ ಕೆ ಹರಿಪ್ರಸಾದ್
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ದೂ.ಸಂ. 0836-2957801 ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243