ಬಹಿರಂಗ
ಸಂವಿಧಾನ ದಿನಾಚರಣೆ ಹೇಗೆ ಗಣರಾಜ್ಯೋತ್ಸವವಾಯಿತು..?
- ಪರಶುರಾಮ್. ಎ
ಭಾರತದ ಪ್ರಜೆಗಳಾದ ನಮಗೆ ಜನವರಿ 26 ಹರ್ಷೋದ್ಘಾರದ ದಿನವೆಂದು ನೆನೆಯಲು ಖುಷಿ ಮತ್ತು ಸಂಕಟಗಳೆರಡನ್ನು ಹೊತ್ತು ಈ ಲೇಖನದಲ್ಲಿ ವಿಚಾರಗಳನ್ನು ಮಂಡಿಸುತ್ತೇನೆ. ಈ ಅವಕಾಶವನ್ನು ದೇಶ ಸೇವೆಗಾಗಿ ಎಂದೆ ನಾನು ಭಾವಿಸಿದ್ದೇನೆ. ಇತಿಹಾಸದಲ್ಲಿ ಮರೆಮಾಚಲ್ಪಟ್ಟ ಘಟನೆಯೊ ದುರಂತವೋ ಇಂದು ನಿಮಗೆ ಹಂಚಕೊಳ್ಳಲಿದ್ದೇನೆ.
ಜನವರಿ 26 ರಂದು ಎಲ್ಲೆಡೆಯು ಕೇಳಿ ಬರುತ್ತೀರುವುದೇನೆಂದೆರೆ ‘ಗಣರಾಜ್ಯ’ ಗಣರಾಜ್ಯ ದಿನವೆಂದು ಹಾಗೆಂದರೇನು ಎಂದು ಸ್ವಲ್ಪ ಗಮನ ಹರಿಸಿದರೆ ಆಗಸ್ಟ್ 15,1947 ರಂದು ಸ್ವಾತಂತ್ರ್ಯ ಬಂದಿದ್ದರಿಂದ ಸ್ವಾತಂತ್ರ್ಯ ದಿನಾಚರಣೆ, ನವೆಂಬರ್ 01.1956 ರಂದು ಯಾವ ದಿನ? ‘ಕನ್ನಡ ರಾಜ್ಯೋತ್ಸವ ದಿನ’. ಅಕ್ಟೋಬರ್ 02ಗಾಂಧೀ ಜಯಂತಿ ಹೀಗೆ ಜನವರಿ26 ರಂದು ಯಾವ ದಿನ? ಗಣರಾಜ್ಯ ದಿನವೇ? ಇದು ಮಾತ್ರ ಹೇಗೆ ಗಣರಾಜ್ಯ ದಿನವಾಯಿತು? ಸ್ವಲ್ಪ ಇವುಗಳ ಅರ್ಥದತ್ತ ಗಮನ ಹರಿಸೋಣಾ.
ಗಣ ಎಂದರೆ ‘ಪ್ರಜೆಗಳು’ ಎಂದು, ರಾಜ್ಯ ಎಂದರೆ ‘ಪ್ರಭುತ್ವ’. ಎಂಬರ್ಥವಲ್ಲವೇ ಅಂದರೆ ಈ ದಿನವನ್ನು ‘ಪ್ರಜಾಪ್ರಭುತ್ವ ದಿನ’ ಎಂದಾಯ್ತಲ್ಲವೇ?. ಇದರರ್ಥ ಇಂಗ್ಲೀಷ್‌ನಲ್ಲಿ ಏನಿದೆ ಎಂದರೆ ರಿಪಬ್ಲಿಕ್ ಅಂದರೆ ‘ಡೆಮೊಕ್ರಸಿ’ ಎಂದು. ಡೆಮೊ ಎಂದರೆ “ಪೀಪಲ್” ಹಾಗೂ ಕ್ರಸಿ ಯು “ರೂಲ್” ಎಂಬ ಅರ್ಥವನ್ನು ನೀಡುತ್ತದೆ. ಮತ್ತೊಂದು ಅರ್ಥ ಹೀಗಿದೆ “ಯಾವ ದೇಶವು ಸ್ವತಂತ್ರವಾಗಿದ್ದು, ಲಿಖಿತ ಸಂವಿಧಾನವನ್ನು ಹೊಂದಿದ್ದು ಅದರಂತೆ ರಾಜ್ಯದ ಆಡಳಿತವನ್ನು ನಡೆಸುತ್ತದೋ ಅಂತಃ ದೇಶವನ್ನು ಗಣರಾಜ್ಯವೆಂದು ಕರೆಯಲಾಗುತ್ತದೆ” ಅಂದರೆ ಜನಗಳ ಆಳ್ವಿಕೆ ಎಂದರ್ಥ.
ಹೀಗೇ ಕನ್ನಡದಲ್ಲಿ ‘ಪ್ರಜಾಪ್ರಭುತ್ವ ದಿನ’ ಇಂಗ್ಲೀಷ್‌ನಲ್ಲಿಯೂ ಜನರ ಆಳ್ವಿಕೆಯೆಂಬ ಅರ್ಥವಿರುವಾಗ ಒಟ್ಟಾರೆಯಾಗಿ “ಪ್ರಜಾಪ್ರಭುತ್ವ ಜಾರಿಗೆ ತಂದ ದಿನ” ಎನ್ನುವ ಅರ್ಥ ಬರುತ್ತದೆ. ಹಾಗಾದರೆ ಈ ದೇಶಕ್ಕೆ ಪ್ರಜಾಪ್ರಭುತ್ವ ಜಾರಿಗೆ ಬಂದಿದ್ದು ಅದು 26.ಜನವರಿ.1950 ಅಲ್ಲವೇ ಯಾವುದರ ಮೂಲಕ ಪ್ರಜಾಪ್ರಭುತ್ವ ಜಾರಿಗೆ ಬಂತು? “ಸಂವಿಧಾನ” ಜಾರಿಯಾಗುವ ಮೂಲಕ ಹೌದಲ್ಲವೇ? ಹಾಗಾದರೆ ನೇರವಾಗಿ ಈ ದಿನವನ್ನು “ಸಂವಿಧಾನ ದಿನಾಚರಣೆ” ಎಂದು ಕರೆಯಲು ಅಡ್ಡಿಯಾಗುವ ಅಂಶಗಳೇನು? ಈ ಬಗ್ಗೆ ವಿಚಾರಿಸಿದಾಗ ಅಂದಿನ ದಿನವನ್ನು ನೇರವಾಗಿ ಸಂವಿಧಾನ ದಿನಾಚರಣೆ ಎಂದು ಕರೆದರೆ ಆ ದಿನ ಇಡೀ ಭಾರತದ121 ಕೋಟಿ ಜನರು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ರವರ ತ್ಯಾಗ.
ಸೇವೆಗಳ ಬಗ್ಗೆ ಚಿಂತನೆ ಮಾಡಿ ಬಿಡುತ್ತಾರಲ್ಲ ಎಂಬ ಹುನ್ನಾರದಿಂದ ಇರಬಹುದೇ ಎಂಬ ಪ್ರಶ್ನೆ ಮೂಡುವುದು. ಈ ದಿನದ ಕ್ರೆಡಿಟ್ ಡಾ.ಬಿ.ಆರ್.ಅಂಬೇಡ್ಕರ್‌ರವರಿಗೆ ತಪ್ಪಿಸಬಹುದಲ್ಲ ಎನ್ನುವ ಏಕೈಕ ಉದ್ದೇಶದಿಂದ ಪರೋಕ್ಷ ಅರ್ಥದಲ್ಲಿ ‘ಗಣರಾಜ್ಯದಿನ’ ಎಂದು ನಮಗೆ ಇತಿಹಾಸಕಾರರು. ಪಂಡಿತರೆನಿಸಿಕೊಂಡುವವರು ಪರಿಚಯಿಸುತ್ತ ಬಂದಿದ್ದಾರೆ.
ಇಂದಿನ ಸಾಕಷ್ಟು ಮಂದಿ “ಗಣರಾಜ್ಯ ವೆಂದರೆ ಭಾಷಾವಾರು ಪ್ರಾಂತ್ಯಗಳನ್ನು ವಿಂಗಡಿಸಿ ಎಲ್ಲಾ ರಾಜ್ಯಗಳನ್ನು ಒಕ್ಕೂಟದ ವ್ಯವಸ್ಥೆ ಒಳಗಡೆ ತಂದ ದಿನ ಎಂದು ಬಹುತೇಕರು ಭಾಷಣ ಮಾಡುತ್ತಾರೆ. ಹಾಗೇ ನಂಬಿಸಿದ್ದಾರೆ ಕೂಡಾ..!
ಅಷ್ಟಕ್ಕೂ ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ನಡೆದದ್ದು ಜನವರಿ 26.1950ರಲ್ಲಿಯೇ? ಇಲ್ಲ ನವೆಂಬರ್ 1.1956 ರಲ್ಲಿ ಇದರಿಂದ ಮೊದಲ ರಾಜ್ಯವಾಗಿ ಆಂಧ್ರಪ್ರದೇಶ ಉದಯವಾಯಿತು. ಇಲ್ಲಿಂದ ಕರ್ನಾಟಕದ ರಾಜ್ಯ ಸ್ಥಾಪನೆಗೆ ನಾಂದಿಯಾಯಿತು. ನೋಡಿ ಇತಿಹಾಸದಲ್ಲಿ ಎಂತಹ ಗೊಂದಲವನ್ನು ತುರುಕಿಸಿದ್ದಾರೆ!. ನಮಗೆ ಅಂದರೆ ಭಾರತದ ಪ್ರಜೆಗಳಿಗೆ ಅನ್ಯಾಯ ಮಾಡಿದ್ದಾರೆ. ಇದೊಂದು ವ್ಯವಸ್ಥಿತ ಪಿತೂರಿಯೊ ಎಂದು ನಮಗೇಕೆ ಅನಿಸುತ್ತಿಲ್ಲ?
1950ರಿಂದಲೂ ಇಂತಹ ಅನ್ಯಾಯವನ್ನು ಮಾಡುತ್ತಿರುವ ಈ ದಿನದ ಮಹತ್ವವನ್ನು ಮರೆಮಾಚಿ ದೂರವಿಟ್ಟು ಜನಸಮೂಹದಿಂದ ಡಾ.ಬಿ.ಆರ್.ಅಂಬೇಡ್ಕರರ ಕೊಡುಗೆಗಳನ್ನು ದೂರವಿಟ್ಟು ರಾಜ್ಯಭಾರ ನಡೆಸಿರುವ ರಾಜಕಿಯ ಪಕ್ಷಗಳಿಗೆ ಈ ಪ್ರಶ್ನೆ ಎಲ್ಲರೂ ಕೇಳಲೇ ಬೇಕು. ಅಂಬೇಡ್ಕರರ ಕೊಡುಗೆ ಸಂವಿಧಾನಕ್ಕೆ ಏನೆಂದು ಗಮನಿಸಿದ ಸಂವಿಧಾನ ಸಭೆಯ ಉಪಾಧ್ಯಕ್ಷರೂ, ಕರಡು ರಚನಾ ಸಮಿತಿಯ ಸದಸ್ಯರು ಆಗಿದ್ದ ಶ್ರೀ ಟಿ.ಟಿ.ಕೃಷ್ಣಮಾಚಾರಿ ಹೇಳುತ್ತಾರೆ “ಸಂವಿಧಾನ ಕರಡು ಸಮಿತಿಗೆ 7 ಜನ ಸದಸ್ಯರಲ್ಲಿ ಒಬ್ಬರು ಮಧ್ಯದಲ್ಲಿ ರಾಜೀನಾಮೆ ನೀಡಿದರು ಮತ್ತು ಆ ಜಾಗವನ್ನು ತುಂಬಲಾಯಿತು ಎಂಬುದು ಈ ಸಭೆಗೆ ತಿಳಿದಿರಬಹುದು. ಆದರೆ ಒಬ್ಬರು ಮರಣವನ್ನು ಹೊಂದಿದರು ಮತ್ತೆ ಆ ಜಾಗಕ್ಕೆ ಯಾರನ್ನೂ ತುಂಬಲಿಲ್ಲ.
ಮತ್ತೊಬ್ಬರು ಅಮೇರಿಕಾದಲ್ಲಿ ಇದ್ದರು. ಅವರ ಜಾಗವನ್ನು ಬೇರೆಯವರಿಂದ ತುಂಬಲಿಲ್ಲ. ಮತ್ತೊಬ್ಬರು ರಾಜ್ಯದ ಆಡಳಿತ ಕಾರ್ಯಗಳಲಿ ನಿರತರಾಗಿದ್ದರು. ಮತ್ತೆ ಬೇರೆ ಒಬ್ಬರು ದೂರದ ದೆಹಲಿಯಲ್ಲಿ ಉಳಿದರು: ಈ ಕಾರಣ ಅವರ ಆರೋಗ್ಯ ಅವರನ್ನು ಅನುಮತಿಸಲಿಲ್ಲ. ನಂತರ ಸಂವಿಧಾನದ ಕರಡನ್ನು ರಚಿಸುವ ಭಾರ ಡಾ.ಬಿ.ಆರ್. ಅಂಬೇಡ್ಕರರವರ ಮೇಲೆ ಬಿತ್ತು ಅವರು ಆ ಕಾರ್ಯವನ್ನು ಒಂಟಿಯಾಗಿ ನಿಭಾಯಿಸಿದ ರೀತಿ ಶ್ಲಾಘನೀಯ ಮತ್ತು ನಾವೆಲ್ಲ ಯಾವುದೇ ಅನುಮಾಮಗಳಿಲ್ಲದೆ ಅವರಿಗೆ ಋಣಿಯಾಗಿರಬೇಕು”.
ಸಂವಿಧಾನ ಸಭೆಯ ಸದಸ್ಯರಾಗಿದ್ದ, ಸಂವಿಧಾನ ರಚನೆಗೆ ೧೫ ಜನ ಮಹಿಳೆಯರು ಸಹ ಕೊಡುಗೆಗಳನ್ನು ನೀಡಿರುವುದು ಒಂದು ಶ್ಲಾಘನೀಯ. ಹೀಗೆ ಸಂವಿಧಾನ ಕರಡು ರಚನೆ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಆರ್ ಅಂಬೇಡ್ಕರರವರು ಸಂವಿಧಾನ ಸಭೆಯ ಅಧ್ಯಕ್ಷರಾದ ಡಾ.ರಾಜೇಂದ್ರ ಪ್ರಸಾದ್‌ರವರಿಗೆ1949 ನವೆಂಬರ್ 25ರಂದು ಸಲ್ಲಿಸಿದರು. ಸಂವಿಧಾನ ಸಭೆಯ 284 ಸದಸ್ಯರು ಸಹಿ ಮಾಡಿ ನವೆಂಬರ್ 26.1949 ರಂದು ಅಂಗೀಕರಿಸಲಾಯಿತು. ಇದನ್ನು ನಮ್ಮ ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಕಾಣಬಹುದು.
1947 ಆಗಸ್ಟ್ 15ರಂದು ಬ್ರಿಟಿಷರಿಂದ ಸ್ವತಂತ್ರವಾದ ಭಾರತವು, 1950ರ ಜನವರಿ 26ರಂದು ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವನು ಜಾರಿಗೆ ತರುವುದರ ಮೂಲಕ ಗಣರಾಜ್ಯವಾಯಿತು. ಹಿಂದೆ1930 ರ ಜನವರಿ 26 ರಂದು ‘ಪೂರ್ಣ ಸ್ವರಾಜ್ಯ’ ಬೇಕೆಂಬ ಹೋರಾಟದ ಪ್ರಾರಂಭವಾದ ಕಾರಣ ಇದರ ನೆನಪಿಗಾಗಿ 1950.ಜನವರಿ 26ರಂದು ನಮ್ಮ ಸಂವಿಧಾನ ಜಾರಿಗೆ ತರಲಾಯಿತು.
ಭಾರತದ ಸಂವಿಧಾನ ರಚನೆಯಲ್ಲಿ ವಿವಿಧ ದೇಶಗಳಿಂದ ಹಲವಾರು ಅಂಶಗಳನ್ನು ಎರವಲು ಪಡೆದು ಒಟ್ಟು 2ವರ್ಷ. 11ತಿಂಗಳು. 18ದಿನಗಳು ಸಂವಿಧಾನ ರಚನೆಗೆ ಕಾಲಾವಕಾಶ ತಲುಪಿತು. ನಂತರ ಇತ್ತೀಚಿನ ನಾಲ್ಕು ವರ್ಷಗಳಲ್ಲಿ ನವೆಂಬರ್ 26ರಂದು ಸಂವಿಧಾನ ದಿನವನ್ನಾಗಿ ಆಚರಿಸಿಲಾಗುತ್ತಿದೆ. ಹಾಗಾದರೆ ನವೆಂಬರ್26ಕ್ಕೂ. ಜನವರಿ 26ರ ಆಚರಣೆಗು ವ್ಯತ್ಯಾಸಗಳೇನು ಎಂಬ ಷಡ್ಯಂತ್ರ ಅರಿಯಬೇಕಾದ್ದು ನಮ್ಮಗಳ ಕರ್ತವ್ಯ. ಸಂವಿಧಾನದ ಪ್ರಸ್ತಾವನೆಯಲ್ಲಿ ನವೆಂಬರ್‌ನಲ್ಲಿ ಸಂವಿಧಾನವನ್ನು ನಮಗೆ ನಾವೆ ಅಂಗೀಕರಿಸಿಕೊಂಡಿರುವಾಗ ಇನ್ನೊಂದು ದಿನವನ್ನು ಬೇರೆ ಹೆಸರಿನಿಂದ ಈ ದಿನದ ಮಹತ್ವ ಮತ್ತು ಅಂಬೇಡ್ಕರರ ಕೊಡುಗೆ ಮರೆ ಮಾಚಿರುವ ಕಾರಣ ಅರಿಯಬೇಕು.
ಹೀಗೆ ಇತಿಹಾಸದಲ್ಲಿ ಅದೆಷ್ಟೋ ಮುಚ್ಚಿಡಲ್ಪಟ್ಟ ವಿಷಯಗಳಿವೆ, ಈಗ ನಮ್ಮ ಕರ್ತವ್ಯ ಏನೆಂದರೆ ಸಂವಿಧಾನವೇ ಅವಕಾಶ ಮಾಡಿಕೊಟ್ಟಿರುವಾಗ ವೈಜ್ಞಾನಿಕ ಮನೋಭಾವನೆ ಹೊಂದಿ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದಡಿಯಲ್ಲಿ ಸಂಶೋಧನೆಯ ಮೂಲಕ ಹೊರ ತಂದು ಜಗತ್ತಿಗೆ ತಿಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ಓದುಗರಿಗೆ ಹಾಗೂ ವಿದ್ಯಾರ್ಥಿ ಮತ್ತು ಯುವ ಸಮುದಾಯಕ್ಕೆ ನನ್ನ ಮನವಿಯೇನೆಂದರೆ ಸರಿಯಾದ ಓದು ಇಂದಿನ ದಿನಗಳಲ್ಲಿ ಅವಶ್ಯಕವಾಗಿದೆ. ಅದರಲ್ಲೂ ಸಂವಿಧಾನ. ಮೀಸಲಾತಿ. ರಾಷ್ಟ್ರಭಕ್ತಿ ಹೀಗೆ ಇನ್ನೂ ಹಲವು ವಿಚಾರಗಳ್ಲಿ ನಮಗೆ ಗೊಂದಲವನ್ನು ಸೃಷ್ಠಿಸಿದ್ದಾರೆ.
ಆದ್ದರಿಂದ ವಿದ್ಯಾರ್ಥಿ ಮತ್ತು ಯುವ ಸಮುದಾಯಕ್ಕೆ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್‌ರವರ “ಸಂವಿಧಾನ ಓದು” ಎಂಬ ಪುಸ್ತಕ ಮತ್ತು ‘ಭಾರತದ ಸಂವಿಧಾನ’ ಓದಿ ಅರ್ಥೈಸಿಕೊಳ್ಳಬೇಕು ಎಂದು ಹೇಳುತ್ತೇನೆ. ಏಕೆಂದರೆ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್‌ದಾಸ್‌ರವರು ಹೇಳುವಂತೆ “ನಾವೆಲ್ಲರೂ ನಮ್ಮ ಸಂವಿಧಾನ ಓದಬೇಕು, ಅರ್ಥೈಸಬೇಕು.
ಸಂವಿಧಾನದ ಮೂಲತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಬದುಕಿನ ವಿಧಾನವಾಗಿಸಿಕೊಳ್ಳಬೇಕು. ಸಂವಿಧಾನದ ಪ್ರತಿಯೊಂದು ಆಶಯವನ್ನು ಅನುಷ್ಠಾನಗೊಳಿಸಲಿಕ್ಕೆ ಪ್ರಯತ್ನಿಸಬೇಕು. ಸಂವಿಧಾನ ಎದುರಿಸುತ್ತಿರುವ ಸವಾಲುಗಳನ್ನು ಹಿಮ್ಮೆಟ್ಟಿಸಬೇಕು”.
ಸುದ್ದಿದಿನ.ಕಾಂ|ವಾಟ್ಸಾಪ್|9980346243