/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

“ಅಮ್ಮ ನಮಗೆ ಊಟ ಕೊಡಿ” ಎಂದ ಎಳೆಯ ಜೀವಗಳು ಇನ್ನಿಲ್ಲ..!

Published

on

ಸುದ್ದಿದಿನ ಡೆಸ್ಕ್ | ಮ್ಮ ನಮಗೆ ಊಟ ಕೊಡಿ ಎಂದು ಕೇಳಿದ್ದ ಮೂವರು ಎಳೆಯ ಜೀವಗಳು ಕೋಮಾ ಸ್ಥಿತಿಗೆ ತಲುಪಿ ಪ್ರಾಣಬಿಟ್ಟ ಹೃದಯವಿದ್ರಾವಕ ಘಟನೆ ದೇಶದ ಶಕ್ತಿ ಕೇಂದ್ರ ಹೊಂದಿರುವ ದೆಹಲಿಯಲ್ಲಿ ಸಂಭವಿಸಿದೆ. ಮಕ್ಕಳು ಹಸಿವಿನಿಂದ ಬಳಲಿ ಸಾವನ್ನಪ್ಪಿರುವ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.

ಪೂರ್ವ ದೆಹಲಿಯಲ್ಲಿ ವಾಸವಿದ್ದ ಕುಟುಂಬವೊಂದರ ಎಂಟು, ನಾಲ್ಕು, ಎರಡು ವರ್ಷದ ಮೂವರು ಅಕ್ಕ ತಂಗಿಯರು ಎಂಟು ದಿನಗಳ ಕಾಲ ಅನ್ನಾಹಾರ ಇಲ್ಲದೇ ದೇಹ ನಿತ್ರಾಣಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಮಕ್ಕಳನ್ನು ಪರೀಕ್ಷಿಸಿದ್ದ ವೈದ್ಯರು ಆಹಾರವಿಲ್ಲದೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಕುಟುಂಬದ ಯಜಮಾನ ಸೈಕಲ್ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇದರಿಂದ ಬಂದ ಹಣದಿಂದಲೇ ಬದುಕಿನ ಬಂಡಿ ಸಾಗಿಸುತ್ತಿದ್ದ. ಆದರೆ, ಕಳೆದೊಂದು ವಾರದ ಹಿಂದೆ ರಿಕ್ಷಾ ಕಳವಾಗಿದ್ದರಿಂದ ಕೆಲಸಕ್ಕಾಗಿ ಹುಡುಕಿಕೊಂಡು ಬರಲು ಹೋಗಿದ್ದ. ಒಂದು ವಾರದಿಂದ ಮನೆಯತ್ತ ಹೋಗಿರಲಿಲ್ಲ.

ಈ ವೇಳೆ ಎಳೆಯ ಜೀವಗಳು ಎಂಟು ದಿನ ಆಹಾರ ಬಳಲಿ ದೇಹ ನಿತ್ರಾಣಗೊಂಡು ಕೋಮಾ ಸ್ಥಿತಿಗೆ ತಲುಪಿದಾಗ ಮಕ್ಕಳನ್ನು ಆಸ್ಪತ್ರೆಗೆ ತರಲಾಗಿದೆ. ಈ ವೇಳೆ ಪೊಲೀಸರು ತಾಯಿಯನ್ನು ವಿಚಾರಿಸಿದ್ದಾರೆ. ಆಗ ತಾಯಿ ಮನಕಲಕುವ ವಿಷಯ ಹೇಳಿದ್ದಾಳೆ. ಮೂವರು ಮಕ್ಕಳು ನಮಗೆ ಊಟ ಕೊಡಿ ಎಂದು ಕೇಳಿದ್ದರೆಂದು ಹೇಳಿದ್ದಾಳೆ. ಅಸ್ವಸ್ಥ ತಾಯಿಗೆ ಮಕ್ಕಳ ಹಸಿವು ಅರಿಯದಂತಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version