/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಹೈದರಾಬಾದ್ ಬಾಂಬ್ ಸ್ಫೋಟ; ಇಬ್ಬರು ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ

Published

on

ಸುದ್ದಿದಿನ ಡೆಸ್ಕ್: 2007ರಲ್ಲಿ ನಡೆದ ಬಾಂಬ್ ದಾಳಿಗಳಲ್ಲಿ 44 ಜನರ ಸಾವಿಗೆ ಕಾರಣರಾಗಿದ್ದ ಇಬ್ಬರು ಉಗ್ರರಿಗೆ ಹೈದರಾಬಾದ್ ಮೆಟ್ರೋಪಾಲಿಟನ್ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಈ ಉಗ್ರರಿಗೆ ನೆರವಾದ ಇನ್ನೋಬ್ಬ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಚೆರ್ಲಾಪಲ್ಲಿ ಕೇಂದ್ರ ಬಂಧೀಖಾನೆಯಲ್ಲಿ ಸ್ಥಾಪಿಸಿದ ವಿಶೇಷ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿದ್ದು, ಉಗ್ರರಾದ ಅನೀಕ್ ಶಫೀಕ್ ಸಯೀದ್ ಹಾಗೂ ಮೊಹಮ್ಮದ್ ಅಕ್ಬರ್ ಇಸ್ಮಾಯಿಲ್ ಚೌಧರಿಗೆ ಮರಣದಂಡನೆ ವಿಧಿಸಲಾಗಿದೆ.

ಸೆಪ್ಟೆಂಬರ್ 4ರಂದು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಟಿ. ಶ್ರೀನಿವಾಸ ರಾವ್ ಅವರು, ಪ್ರಕರಣದಲ್ಲಿ ಸೈಯದ್ ಹಾಗೂ ಚೌಧರಿ ದೋಷಿಗಳು ಎಂದು ತಿಳಿಸಿದ್ದರು. ಆದರೆ, ಸಾಕ್ಷಿಗಳ ಕೊರತೆಯ ಹಿನ್ನೆಲೆಯಲ್ಲಿ ಫಾರೂಕ್ ಶರ್ಫುದ್ದೀನ್ ಟರ್ಕಶ್ ಹಾಗೂ ಮೊಹಮ್ಮದ್ ಸಾಧಿಕ್ ಇಸ್ರಾರ್ ಎಂಬುವವರನ್ನು ದೋಷಮುಕ್ತಗೊಳಿಸಲಾಗಿತ್ತು. ಶಿಕ್ಷೆಯ ಪ್ರಮಾಣದ ಕುರಿತು ಸೋಮವಾರ ವಿಚಾರಣೆ ನಡೆಸಿದ ನಂತರ ತೀರ್ಪು ಪ್ರಕಟಿಸಲಾಗಿದೆ. ಗೋಕಲ್ ಚಾಟ್ ಹಾಗೂ ಲುಂಬಿಣಿ ಪಾರ್ಕ್‌ನಲ್ಲಿ ನಡೆದ ಸ್ಫೋಟಗಳಲ್ಲಿ ಅನೀಕ್ ಹಾಗೂ ಚೌಧರಿ ಭಾಗಿಯಾಗಿದ್ದು ಸಾಬೀತಾಗಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಸುರಿಂದರ್ ತಿಳಿಸಿದ್ದಾರೆ.

ಹೈದರಾಬಾದ್ ಬಾಂಬ್ ಸ್ಫೋಟ ಸೇರಿದಂತೆ ಹಲವೆಡೆ ನಡೆದ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾದ ಐದನೇ ಆರೋಪಿ ತಾರಿಕ್ ಅಂಜುಮ್ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್ ಹಾಗೂ ಅಮಿರ್ ರಜಾ ಖಾನ್ ಆರೋಪಿಗಳಾಗಿದ್ದಾರೆ. ಅವರು ತಲೆಮರೆಸಿಕೊಂಡಿದ್ದಾರೆ. ನಾವು ನಿರ್ದೋಷಿಗಳು, ನಮ್ಮನ್ನು ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ ಎಂದು ಶಿಕ್ಷೆಯ ಪ್ರಮಾಣದ ಕುರಿತು ವಿಚಾರಣೆ ನಡೆಯುವಾಗ ಆರೋಪಿಗಳು ಹೇಳಿದ್ದಾರೆ. ಆದರೆ, ಅವರ
ಶಿಕ್ಷೆಯ ಪ್ರಮಾಣವನ್ನು ಇಳಿಸಲು ವಿಶೇಷ ನ್ಯಾಯಾಲಯ ನಿರಾಕರಿಸಿದೆ.

Leave a Reply

Your email address will not be published. Required fields are marked *

Trending

Exit mobile version