ದಿನದ ಸುದ್ದಿ

ಬಾಬರಿ ಮಸೀದಿ ಧ್ವಂಸದ ವೇಳೆ ನಾನು ಪಾಲ್ಗೊಂಡಿದ್ದೆ : ದೇವೇಂದ್ರ ಫಡ್ನವೀಸ್

Published

on

ಸುದ್ದಿದಿನ,ಮುಂಬೈ: ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆಸಲು ಹೆದರುತ್ತಿರುವವರು ಬಾಬ್ರಿ ಮಸೀದಿ ಧ್ವಂಸದಲ್ಲಿ ಭಾಗವಹಿಸಿದ್ದೆವು ಎಂದು ಹೇಳುತ್ತಿದ್ದಾರೆ, ಬಾಬರಿ ಮಸೀದಿ ಧ್ವಂಸದ ವೇಳೆ ನಾನು ಪಾಲ್ಗೊಂಡಿದ್ದೆ. ಆದರೆ ಅಲ್ಲಿ ಯಾವ ಶಿವಸೇನೆ ನಾಯಕರು ನಮಗೆ ಕಾಣಲಿಲ್ಲ ಎಂದು ಶಿವಸೇನೆಗೆ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿರುಗೇಟು ನೀಡಿದ್ದಾರೆ.

ಮುಂಬಯಿನ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಬಾಬರಿ ಮಸೀದಿಯ ಕಟ್ಟಡವನ್ನು ಧ್ವಂಸಗೊಳಿಸಿದ ದಿನ ಅಯೋಧ್ಯೆಯಲ್ಲಿದ್ದ ಸಕ್ರಿಯ ಕರಸೇವಕರಲ್ಲಿ ನಾನೂ ಕೂಡಾ ಇದ್ದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಇಷ್ಟಪಡುತ್ತೇನೆ. ರಾಮಮಂದಿರ ನಿರ್ಮಾಣಕ್ಕಾ ಕರಸೇವೆಯಲ್ಲಿ ಭಾಗವಹಿಸಿದ್ದೆ. ಆಗ ನನ್ನನ್ನು ಜೈಲಿನಲ್ಲಿ ಇರಿಸಲಾಯಿತು. ನನ್ನ ಮೇಲೆ ಲಾಠಿಚಾರ್ಜ್ ಕೂಡ ಮಾಡಲಾಯಿತು ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version