ಲೈಫ್ ಸ್ಟೈಲ್
ಕರ್ನಾಟಕದ ಬೆಡಗು ಇಳಕಲ್ ಸೀರೆ
ಸೌಂದರ್ಯ! ಹೌದು ಅದೇ ಇದರಲ್ಲಿ ಇರುವುದು. ಮನುಷ್ಯನಲ್ಲಿರುವ ಸೃಜನಶೀಲತೆಯನ್ನು ಸುಂದರವಾಗಿ ಕಾಣಬೇಕೆಂಬ ಕೋರಿಕೆಯನ್ನು ಪ್ರತಿಬಿಂಸುವುದೇ ಕಾಟನ್ ಸೀರೆಗಳು. ಹಾಗೇ ಇಳಕಲ್ ಸೀರೆ ಬಗ್ಗೆ ಸ್ವಲ್ಪ ತಿಳಿಯೋಣ.
ಇದು ಕರ್ನಾಟಕದ ಬಾಗಲಕೋಟೆಯ ಬಳಿಯಲ್ಲಿರುವ ಇಳಕಲ್ ಊರಿನಲ್ಲಿ ಪ್ರಾಚೀನಕಾದಿಂದಲೂ ತಯಾರಾಗುತ್ತಿರುವ ಒಂದು ಅದ್ಭುತವಾದ ಕಾಟನ್ ಸೀರೆ. ಈ ಸೀರೆಯ ವಿಷೇಶವೆಂದರೆ ಸ್ಥಳೀಯವಾಗಿ ಸಿಗುವ ಕಚ್ಚಾವಸ್ತುಗಳಿಂದಲೇ ಸೀರೆಗಳು ತಯಾರಾಗುತ್ತವೆ. ಟೋಪಿತೆನೆಯೆಂಬ ತಂತ್ರದಿಂದ ಇಳಕಲ್ ಸೀರೆಗಳು ತಯಾರಾಗುತ್ತವೆ.
- ಇಳಕಲ್ ಸೀರೆಯ ವಿಶೇಷತೆ ಎಂದರೆ ಸೀರೆಯ ಮೈಗೆ, ಹತ್ತಿ ಎಳೆಗಳನ್ನು ಬಳಸಿದ ಬಾಗು ಆಥವಾ ವಕ್ರ ಡೊಂಕು ನೇಯ್ಗೆ ವ್ಯವಸ್ಥೆ.
- ಸೀರೆಯ ಅಂಚಿಗೆ ಹಾಗೂ ಸೆರಗಿಗೆ, ಕಚ್ಚಾ ರೇಷ್ಮೆಯ ನೂಲನ್ನು ಬಳಸುತ್ತಾರೆ.
ಹಾಗೇ ಕಚ್ಚಾ ರೇಷ್ಮೆಯ ನೂಲಿಗೆ ಬದಲು ಶುದ್ಧ ರೇಷ್ಮೆ ಸಹ ಬಳಸುತ್ತಾರೆ. - ಇಳಕಲ್ ಸೀರೆಗಳಲ್ಲಿ ಸಾಂಪ್ರದಾಯಿಕ ಸೀರೆಯ ಬಣ್ಣ ಸಾಮಾನ್ಯವಾಗಿ ಕೆಂಪು ಇಲ್ಲವೇ ಮೆರೂನ್ ಕಲರ್ ಇರುತ್ತದೆ.
- ಇಳಕಲ್ ಸೀರೆಗಳ ಮೈ ಅಥವಾ ಒಡಲುಗಳಲ್ಲಿ 3 ವಿನ್ಯಾಸಗಳನ್ನು ನಾವು ಕಾಣಬಹುದು. ಬಣ್ಣದ ಪಟ್ಟಿಗಳು, ಆಯತಾಕೃತಿ ಹಾಗೂ ಚೌಕಳಿ ಆಕಾರದ ವಿನ್ಯಾಸಗಳು.
- ಸಾಮಾನ್ಯವಾಗಿ ಮಧ್ಯವಯಸ್ಸಿನ ಮಹಿಳೆಯರು, ದಾಳಿಂಬೆ, ಕೆಂಪು, ಹಸಿರು ಬಣ್ಣ, ಇಲ್ಲವೆ ಗಿಳಿ ಹಸಿರಿನ ಸೀರೆಯನ್ನು ಉಟ್ಟರೆ ಚೆನ್ನ.
- ಇಳಕಲ್ ಸೀರೆಗೆ ಸ್ಟಾರ್ಚ್ ಹಾಕಬಾರದು. ಹಾಗೇ ಉಡಬೇಕು.
- ಎಲ್ಲ ಕಾಲಕ್ಕೂ ಅತ್ಯುತ್ತಮ. ಚಳಿಗೂ ಸೆಖೆಗು ಹಿತವೆನಿಸುತ್ತದೆ.