ದಿನದ ಸುದ್ದಿ
ಅಕ್ರಮ ಮದ್ಯ ವಶ
ಸುದ್ದಿದಿನ,ಮಡಿಕೇರಿ : ಕೊಡಗು ಜಿಲ್ಲಾ ಅಬಕಾರಿ ಇಲಾಖೆಯ ವತಿಯಿಂದ ಮಾರ್ಚ್, 20 ರಂದು ವಿವಿಧ ಕಡೆ ದಾಳಿ ನಡೆಸಿ 11.790 ಲೀ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ವಿರಾಜಪೇಟೆ ವ್ಯಾಪ್ತಿಯ ಹೊಸಕೋಟೆ ಗ್ರಾಮ, ಬೆಳಗುಂದ ಅಂಚೆ ವ್ಯಾಪ್ತಿಯಲ್ಲಿ ವಿರಾಜಪೇಟೆ ವಲಯದ ಅಬಕಾರಿ ಉಪ ನಿರೀಕ್ಷಕರು ಗಸ್ತು ಸಂದರ್ಭದಲ್ಲಿ 10 ಲೀ ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡು ಒರ್ವ ಆರೋಪಿಯ ವಿರುದ್ಧ ಪ್ರಕರಣ ದಾಖಲು ಮಾಡಿರುತ್ತಾರೆ.
ಈ ದಿನದಂದು ಒಟ್ಟು 9 ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, 2 ಗಂಭೀರ ಹಾಗೂ 9 ಇತರೆ ಪ್ರಕರಣಗಳು ದಾಖಲಾಗಿದೆ. ವಶಪಡಿಸಿಕೊಂಡ ಮದ್ಯದ ಅಂದಾಜು ಮೊತ್ತ ರೂ.3,605 ಗಳಾಗಿರುತ್ತದೆ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401