ಲೋಕಾರೂಢಿ

‘ಗಣರಾಜ್ಯೋತ್ಸವ’ ಎಂದರೇನು? ಮೊದಲು ತಿಳಿಯಿರಿ ಈ ದಿನದ ಮಹತ್ವ..!

Published

on

ಣರಾಜ್ಯೋತ್ಸವ’ ಆಚರಿಸುವ ಮುನ್ನ ಯಾಕೆ ಆಚರಿಸಬೇಕು ಎನ್ನುವುದಕ್ಕೆ ಇಲ್ಲಿದೆ ಉತ್ತರನಾಡಿನ ಸಮಸ್ತ ಜನರಿಗೂ 69ನೇ ಗಣರಾಜ್ಯೋತ್ಸವದ ಶುಭಾಶಯಗಳು. ಒಂದು ಕ್ಷಣ ‘ಗಣರಾಜ್ಯೋತ್ಸವ’ ಎಂದರೇನು? ಎಂದು ತಿಳಿಯೋಣ.

ನಮ್ಮನ್ನು ನಾವೇ ಆಳಲು ಸಾಧ್ಯವೇ? ಅದು ಅಸಾಧ್ಯದ ಮಾತು ಎನ್ನುವ ಕಾರಣದಿಂದಾಗಿ ಸ್ವತಃ ನಾವೆ ನಮ್ಮನ್ನು ಆಳಲು ಚುನಾವಣೆಯಲ್ಲಿ ಅಮೂಲ್ಯವಾದ ಮತ ಚಲಾಯಿಸಿ ನಾಯಕರನ್ನು ಆಯ್ಕೆ ಮಾಡುತ್ತೇವೆ. ನಾವೇ ಆಯ್ಕೆ ಮಾಡಿದ ನಾಯಕರಿಂದ ನಮ್ಮನ್ನು ನಾವೇ ಆಡಳಿತ ಮಾಡಿಸಿಕೊಳ್ಳುತ್ತೇವೆ. ಇವರು ನಮಗಾಗಿಯೇ ಶ್ರಮೀಸುವ ಮಹಾನ ವ್ಯಕ್ತಿಗಳು. ಈ ನಾಯಕರನ್ನು ನಾವು ಗಣ್ಯರೇಂದು ಭಾವಿಸಿ ಅನೇಕ ರೀತಿಯಲ್ಲಿ ಗೌರವವನ್ನು ನೀಡುತ್ತೇವೆ.

ಗಣರಾಜ್ಯೋತ್ಸವದ ಪೂರ್ವದಲ್ಲಿ ಅನೇಕ ಮಹಾನ ವ್ಯಕ್ತಿಗಳು ವಿವಿಧ ರೀತಿಯಲ್ಲಿ ಬಲಿದಾನವನ್ನು ಮಾಡಿದ್ದಾರೆ. ನಾವು ಅವರ ಬಲಿದಾನಗಳನ್ನು ನೆನೆಪಿಸಿಕೊಳ್ಳುವ ಕಾರಣಕ್ಕಾಗಿ ಈ ಗಣರಾಜ್ಯೋತ್ಸವದ ಆಚರಣೆ ಮಾಡುತ್ತೇವೆ. ನಂತರ ಇದನ್ನು ಮುಂದಿನ ವರ್ಷವೇ ನೆನಪಿಕೊಳ್ಳುತ್ತೇವೆ ಹೊರತು, ಅವರ ತತ್ವಗಳನ್ನು ರೂಡಿಸಿಕೊಂಡು ಅವುಗಳನ್ನು ಕಾರ್ಯರೂಪದಲ್ಲಿ ತರುವುದಕ್ಕಾಗಿ ಆಚರಣೆ ಮಾಡುವದಿಲ್ಲ. ಇದು ಕೇವಲ ತೋರಿಕೆಯ ಕಾಟಾಚಾರದ ಆಚರಣೆ ಅಂಥ ಅನಿಸುತ್ತಿದೆ. ಗಣರಾಜ್ಯೋತ್ಸವ ತೋರಿಕೆಯಾಗಿ ಆಚರಣೆ ಮಾಡದೆ, ನಿಜವಾದ ರೀತಿಯಲ್ಲಿ ಗಣರಾಜ್ಯೋತ್ಸವಕ್ಕೆ ಒಂದು ಅರ್ಥ ಕಲ್ಪಿಸೋಣ.

ಇಲ್ಲ ನಾವು ಕೇವಲ ತೋರಿಕೆಗೆ ಆಚರಣೆ ಮಾಡುವುದ್ದಾದರೆ ಆಚರಣೆ ಮಾಡುವುದೆ ಬೇಡವೆಂದು ಅನಿಸುತ್ತದೆ.ನಮ್ಮ ಭಾರತ ದೇಶವು ಹಲವು ಜಾತಿ, ಧರ್ಮ, ಜನಾಂಗಗಳಿಂದ ಕುಡಿಕೊಂಡಿದೆ. ಇಲ್ಲಿ ಪ್ರತಿಯೊಂದು ತಮ್ಮದೆಯಾದ ಪ್ರತ್ಯೇಕ ಗುಂಪುಗಳನ್ನು ಮಾಡಿಕೊಂಡಿವೆ. ಈ ಎಲ್ಲಾ ಗುಂಪುಗಳು ಸೇರಿಯೇ ಜನೇವರಿ 26ರಂದು ಗಣರಾಜ್ಯೋತ್ಸವನ್ನು ಆಚರಿಸಲಾಗುತ್ತದೆ.

ನಮಗೆ ಅಗಸ್ಟ್ 15,1947ರಂದು ಮಧ್ಯರಾತ್ರಿ ಸ್ವಾತಂತ್ರ್ಯ ದೊರೆಯಿತು. ಸ್ವಾತಂತ್ರ್ಯ ದೊರೆತ ಮೇಲು ದೇಶದಲ್ಲಿ ಅನೇಕ ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿವೆ. ಅವುಗಳೆಂದರೆ ಜಾತೀಯತೆ. ಮೇಲ್ಜಾತಿ, ಕೆಳಜಾತಿ ಎಂಬ ಬೇಧ ಭಾವವಿದೆ. 12ನೇ ಶತಮಾನದಲ್ಲಿಯೇ ಜಗಜ್ಯೋತಿ ಬಸವಣ್ಣನವರೆ ಜಾತೀಯತೆಯನ್ನು ತೊಡೆದು ಹಾಕಿಲು ಅಂತ್ರಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದರು.. ಆದರು ಸಹ ಸುಮಾರು 19ನೇ ಶತಮಾನದ ಅಂತ್ಯದಲ್ಲಿ ಹಾಗೂ 20ನೇ ಶತಮಾನದ ಆರಂಭದಿಂದ ಅಂತ್ಯದವರೆಗೂ ಈ ಜಾತೀಯತೆ ತುಂಬಿ ತುಳುಕುತ್ತಿದೆ. ಈ ಜಾತಿಯತೆಯನ್ನು ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಮೆಟ್ಟಿ ನಿಂತರು. ಸುಧೀರ್ಘವಾದ ಪ್ರವಾಸ, ಗ್ರಂಥಗಳ ಅಧ್ಯಯನದಿಂದ ದೇಶದ ಸ್ಥಿತಿಗತಿಗಳನ್ನು ಅರಿತರು.

1947 ಅಗಷ್ಟ 15ರಂದು ಭಾರತ ಸ್ವಾತಂತ್ರ್ಯವಾದ ನಂತರ ಅಗಷ್ಟ 29ರಂದು ಬಾಬಾ ಸಾಹೇಬರ ನೇತೃತ್ವದಲ್ಲಿ ಎರಡು ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವ್ಹೆಂಬರ್ 4‌, 1947ರಂದು ಶಾಸನದಲ್ಲಿ ಮಂಡಿಸಲಾಯಿತು. ನವ್ಹೆಂಬರ್ 26, 1949 ರಂದು ಅಂಗೀಕರಿಸಲ್ಪಟ್ಟು ಅನೇಕ ವಿಧದಲ್ಲಿ ಪರಿಶೀಲನೆ ಹಾಗೂ ತಿದ್ದುಪಡೆಗಳ ನಂತರ ಜನವರಿ 26, 1950 ರಂದು ವಿಶ್ವದ ಮೊದಲ ಲಿಖಿತ ಸಂವಿಧಾನ ಎಂಬ ಹೆಗ್ಗಳಿಯೊಂದಿಗೆ ಭಾರತದ ಸಂವಿಧಾನ ಜಾರಿಗೆ ಬಂತು.

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಜನವರಿ 26 1929 ರಂದು ಲಾಹೋರ್‍ನಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಧಿವೇಶನದಲ್ಲಿ ‘ಪೂರ್ಣ ಸ್ವರಾಜ್ಯ’ ಎನ್ನುವ ಧ್ಯೇಯ ಹಾಕಿಕೊಳ್ಳುವ ನಿರ್ಧಾರ ಮಾಡಿತು. ಅಂದೆ ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತಂತ್ರ್ಯ ನಂತರ ಭಾರತದ ಸಂವಿಧಾನವನ್ನು ಈ ದಿನದಂದೇ ಜಾರಿ ತರಲಾಯಿತು ಎಂದು ಇತಿಹಾಸ ಹೇಳುತ್ತಿದೆ.

ನಮ್ಮದು ಪ್ರಜಾಪ್ರಭುತ್ವ ದೇಶವಾಗಿದೆ. ಪ್ರಜಾ ಪ್ರಭುತ್ವ ಎಂದರೆ ಪ್ರಜೆಗಳಿಂದ ಆಯ್ಕೆಯಾಗಿ ಪ್ರಜೆಗಳನ್ನೆ ಪ್ರಜೆಗಳಿಗೊಸ್ಕರ ಆಡಳಿತ ನಡೆಸುವ ದೇಶ ಅಥವಾ ರಾಜ್ಯ ಎನ್ನುವ ಪ್ರತೀತಿ ಇದೆ. ಆದರೆ ಇಂದಿನ ಪರಿಸ್ಥಿತನ್ನು ನೋಡಿದರೆ. ಭಯ, ಆತಂಕ ಮುಡುತ್ತ್ತಿದೆ. ಏಕೆಂದರೆ ಸಧ್ಯದ ಪರಿಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ಸರ್ಕಾರಿಯ ಕೆಲಸ ಮಾಡಬೇಕೆನ್ನು ಕನಸ್ಸನ್ನು ಕಟ್ಟ ಬಾರದು ಅನಿಸುತ್ತಿದೆ. ಹೌದು ಒಂದು ಸಣ್ಣದಾದ ಕಳದರ್ಜೆಯ ಉದ್ಯೋಗ ಮಾಡಬೇಕೇಂದರು ಕಂತೆಗಟ್ಟಲೆ ಹಣ ಕೊಡಬೇಕಾದ ಸ್ಥಿತಿ ಬಂದಿದೆ. ಸರ್ಕಾರಿಯ ಕೆಲಸದ ಕನಸು ಎಲ್ಲ ವರ್ಗದ ಜನರು ಕಟ್ಟುತ್ತಾರೆ. ಮಧ್ಯಮ ಹಾಗೂ ತೀರ ಕೆಳ ವರ್ಗದ ಜನರು ತೊಂದರೆಯನ್ನು ಅನುಭವಿಸುತಿದ್ದಾರೆ.

ನಮ್ಮ ಸುತ್ತ-ಮುತ್ತಲಿನ ಎಷ್ಟೋ ಪ್ರತಿಭೆಗಳು ಎಲೆಮರೆಯ ಕಾಯಿಯಂತೆ ಬೆಳಕಿಗೆ ಬರದೆ ಅಲ್ಲೆ ಕಳೆದು ಹೋಗುತ್ತಿವೆ. ಅದು ಏಕೆಂದರೆ ಆ ಪ್ರತಿಭೆ ಒಂದು ಕೆಳವರ್ಗದವನಾಗಿ ಅಥವಾ ಮಧ್ಯಮ ವರ್ಗದವನಾಗಿ ಇರುವುದಕ್ಕೆ, ಇವನ ಕೈಯಿಂದ ಲಂಚ ಕೊಟ್ಟು ತನ್ನ ಪ್ರತಿಭೆಯನ್ನು ಹೊರ ಹಾಕಲು ಸಾಧ್ಯವಾಗದೆ ಹಿಂದೆ ಉಳಿದು ಬಿಡುತ್ತಾನೆ. ಏಲ್ಲೋ ಕೆವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಸರ್ಕಾರ ಪ್ರೋತ್ಸಾಹ ನೀಡಿದೆ. ಕೆಲವು ಬಾರಿ ಇನ್ನುಳಿದವರು ಹಣ ನೀಡಲು ಅಸಾಧ್ಯವಾಗಿ ಪ್ರಾಣ ತ್ಯಾಗ ಸಹ ಮಾಡಿದ್ದಾರೆ.

ಇದೆಲ್ಲ ಒಂದು ಕಡೆಯಾದರೆ ಮತ್ತೊಂದೆಡೆ ಜನರನ್ನು ರಕ್ಷಿಸುವ ಪೋಲಿಸರು, ನ್ಯಾಯ ನೀಡುವ ನ್ಯಾಯಾಧೀಶರು ಜನರಿಗೆ ಮೊಸ ಅನ್ಯಾಯದಿಂದ ಲಂಚ ಪಡೆದುಕೊಂಡರೆ, “ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ ಪರಬ್ರಹ್ಮ ತಸ್‍ಮೆಶ್ರೀ ಗುರುವೆ ನಮಹಾಃ” ಎನ್ನುತ್ತಾ ವಿದ್ಯೆ ಹೇಲುವ ಗುರುಗಳನ್ನು ಪೂಜಿಸುವ ನಾಡು ನಮ್ಮದು. ಇಂತಹ ಗುರುವಿ ಸ್ಥಾನ ಪಡೆಯಲು ಲಂಚ ನೀಡ ಬೇಕು. ಮುಂದೆ ಈ ಗುರು ತನ್ನ ಹಣವನ್ನು ಹಿಂದಕ್ಕೆ ಪಡೆಯಲೆಂದು ವಿದ್ಯೆಯ ನೀಡುವ ಸ್ಥಳದಲ್ಲಿ ಹಣ ಪಡೆದು ವಿದ್ಯೆಯನ್ನು ಮಾರುತ್ತಿರುವುದನ್ನು ನೋಡುತ್ತೇವೆ. ಇದನ್ನು ಯಾರೂ ಸಹ ಪ್ರಶ್ನೆ ಮಾಡುವದಿಲ್ಲ.ಒಂದು ವೇಳೆ ಪ್ರಶ್ನೆ ಮಾಡಿದರೆ ಅವರು ಬದುಕಿರುವಾಗಲೆ ನರಕಯಾತನೆ ಅನುಭವಿಸಬೇಕಾಗುತ್ತದೆ.

ಇನ್ನೊಂದು ಕಡೆಗೆ ಜೀವ ನೀಡುವ ವೈದ್ಯ ಹಣ ಸುಲಿಗೆ ಮಾಡುತ್ತಾನೆ. ಹಣ ಸುಲಿಗೆ ಮಾಡುವದರ ಜೊತೆಗೆ ಕೆಲವು ಬಾರಿ ಮನುಷ್ಯರ ರಕ್ತ ಹೀರುವ ನರ ಭಕ್ಷಕನಂತೆ ವರ್ತಿಸುತ್ತಾನೆ. ಮಧ್ಯಮ ಹಾಗೂ ಕೆಳವರ್ಗದಲ್ಲಿ ಹುಟ್ಟಿ ವ್ಯಕ್ತಿ ತನ್ನ ಹುಟ್ಟಿನಿಂದ ಸಾಯುವವರೆಗೆ ಲಂಚ ಕೊಡುತ್ತಾನೆ. ಶ್ರೀಮಂತರು ಅಥವಾ ಅಧಿಕಾರ ಶಾಹಿಗಳು ಲಂಚ ಪಡೆಯದೆ ಹೋದರೆ ಅವರಿಗೆ ತಿಂದದ್ದು ಜೀರ್ಣವಾಗದು. ಅವರ ಸ್ಥಿತಿಯನ್ನು ನೋಡಿದಾಗ ನನಗೆ ನಮ್ಮ ಸರ್ಕಾರದ ಬಗ್ಗೆ ಒಂದು ಕಲ್ಪನೆಯಲ್ಲಿ ಕೆಲವು ಶಬ್ದಗಳು ನೆನೆಪಾಗುತ್ತವೆ. ಅವುಗಳೆಂದರೆ ಲಂಚದಿಂದ ಆಯ್ಕೆಯಾಗಿ, ಲಂಚಕ್ಕಾಗಿ, ಲಂಚಕ್ಕೋಸ್ಕರ ಆಡಳಿತ ನಡೆದಂತೆ ಭಾಸವಾಗುತ್ತಿದೆ. ಇದೆಲ್ಲ ನಮಗೆ ಬೇಕಾ? ಲಂಚ ನೀಡದೆ ತಮ್ಮ ಪ್ರತಿಭೆಗಳು ಹೊರ ಹಾಕಲು ಅವಕಾಶ ಕಲ್ಪಿಸಬೇಕು.

ಸ್ವಾತಂತ್ರ್ಯದ ಸಮಯದಲ್ಲಿ ಎಷ್ಟೋ ನಾಯಕರು ತಮ್ಮ ಜೀವನವನ್ನೆ ಬಲಿಯಾಗಿ ನೀಡಿದ್ದಾರೆ. ಅವನ್ನು ಉಳಿಸಿಕೊಂಡು ಹೋಗಬೇಕು. ಅದನ್ನು ಬಿಟ್ಟು ಲಂಚಕೋರ, ಬ್ರಷ್ಟಾಚಾರರಿಗೆ ನಾವೇ ಸಹಾಯ ಮಾಡುತ್ತಿದ್ದೇವೆ. ನಾವು ಮಧ್ಯ ಹಾಗೂ ಕೆಳವರ್ಗದಜನರು ಇವರ ವಿರುದ್ಧ ಸಿಡಿದು ನಿಲ್ಲಬೇಕು. ಆಗ ತಾನೆ ಅಲ್ಪಪ್ರಮಾಣದಲ್ಲಿ ಕಡಿಮೆಯಾಗ ಬಹುದುದೆಂದು ಹೇಳಲಾಗುತ್ತದೆ.

ಕಾಂಚನಾ. ಬಸವರಾಜ. ಪೂಜಾರಿ
ಪತ್ರಿಕೋದ್ಯಮ ಮತ್ತು ಸಮುಹ ಸಂವಹನ ವಿಭಾಗ
ಪ್ರಥಮ ವರ್ಷದ ವಿದ್ಯಾರ್ಥಿನಿ
ಅಕ್ಕ ಮಹಾದೇವಿ ವಿಶ್ವವಿದ್ಯಾನಿಲಯ ತೋರವಿ
ವಿಜಯಪುರ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version