ಬಹಿರಂಗ
ಇಮ್ರಾನ್ ಖಾನ್ ‘ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ’ ಅಂದಿದ್ಯಾಕೆ ಗೊತ್ತಾ..,!?
ನೆನ್ನೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಮಗೆ ಮೋದಿಯೇ ಪ್ರಧಾನಿಯಾಗಬೇಕು ಅಂದಿದ್ದಾನೆ. ಎರಡು ವರ್ಷಗಳ ಹಿಂದೆ ಪಾಕಿಸ್ತಾನಿ ಬೇಹುಗಾರಿಕಾ ಸಂಸ್ಥೆ ISI ಕೂಡಾ ಇದನ್ನೇ ಹೇಳಿತ್ತು. ಮೋದಿಯಂತಹ ಕಟ್ಟರ್ ವಾದಿ ಭಾರತದ ಪ್ರಧಾನಿ ಆಗಿದ್ರೇನೇ ಪಾಕಿಸ್ತಾದ ಉದ್ದೇಶಗಳಿಗೆ ಅನುಕೂಕರ ಎಂದು ISI ಅಧಿಕಾರಿ ಬರೆದಿದ್ದ.
ಮೋದಿಯೇ ಪ್ರಧಾನಿ ಆದರೆ ತನಗೆ ನೊಬೆಲ್ ಶಾಂತಿ ಪ್ರಶಸ್ತಿ ಖಂಡಿತಾ ಸಿಗುತ್ತದೆ ಎನ್ನೋ ನಂಬಿಕೆಯಿಂದಲೋ ಅಥವಾ ಭಾರತದ ಪರ ಇರುವ ಕಾಶ್ಮೀರಿ ಜನರೆಲ್ಲ ಪಾಕಿಸ್ತಾನಕ್ಕೆ ಬೆಂಬಲಿಸುತ್ತಾರೆ, ಅಂತಿಮವಾಗಿ ಕಾಶ್ಮೀರದಲ್ಲಿ ಪ್ರತ್ಯೇಕತಾ ಉಗ್ರವಾದ ಹೆಚ್ಚಾಗಿ, ಭಾರತ ಅಪಾರ ಸೈನ್ಯ, ಹಣ ವಿನಿಯೋಗಿಸುತ್ತಾ ಭಾರತವನ್ನೇ ಬರ್ಬಾದು ಮಾಡಿಬಿಡಬಹುದು ಮೋದಿ ಮೂಲಕ ಎಂಬ ಲೆಕ್ಕಾಚಾರದಲ್ಲಿ ಇಮ್ರಾನ್ ಖಾನ್ ಹೀಗೆ ಹೇಳಿರುವ ಸಾಧ್ಯತೆ.
ಇಮ್ರಾನ್ ಖಾನ್ ಹೇಳಿಕೆ ಪ್ರತಿಯೊಬ್ಬ ನೈಜ ದೇಶಪ್ರೇಮಿ ಆಲೋಚಿಸಬೇಕಾದ ವಿಷಯ. ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಅತ್ಯಂತ ಲಾಭ ಪಡೆಯುವುದು ಒಂದು ಆರೆಸ್ಸೆಸ್ ಮತ್ತೊಂದು ಪಾಕಿಸ್ತಾನ. ಭಾರತದ ಸಮಸ್ತ ಜನತೆ ಪಡಬಾರದ ಪಾಡು ಪಡುವುದು ನಿಶ್ಚಿತ.
ಅಕಸ್ಮಾತ್ ಇಮ್ರಾನ್ ಖಾನ್ ತನಗೆ ಮೋದಿ ಬದಲಿಗೆ ರಾಹುಲ್ ಗಾಂಧಿಯೇ ಪ್ರಧಾನಿ ಆಗಲಿ ಎಂದಿದ್ದರೆ ಇಷ್ಟೊತ್ತಿ ಪಕೋಡಾ ಭಕ್ತರು ಏನೆಲ್ಲಾ ಮಾಡಿರುತ್ತಿದ್ದರು ಯೋಚಿಸಿ.. ನೋಡಿ.. ನೋಡಿ ಹೇಗೆ ತುಕಡೇ ಗ್ಯಾಂಗ್ ಮತ್ತು ಪಾಕಿಸ್ತಾನದ ಸಂಬಂಧ ಇದೆ ಎಂದೆಲ್ಲಾ ಗಂಟಲು ಹರಿದುಕೊಳ್ತಿದ್ರು..ಆದರೆ ಈಗ ಅವರ ಗಂಟಲಲ್ಲಿ ಮೋದಿ ಮಾಡಿ ಪಕೋಡಾ ಸಿಕ್ಕಿಕೊಂಡಿರಬೇಕು!
Pak has officially allied with Modi!
‘A vote for Modi is a vote for Pakistan’, says Pak PM Imran Khan
मोदीजी, पहले नवाज़ शरीफ़ से प्यार और अब ईमरान खान आपका चहेता यार!
ढोल की पोल खुल गयी है।
— Randeep Singh Surjewala (@rssurjewala) April 10, 2019
Bhakts scratching their heads & at wit ends wondering if they should praise Imran Khan or not. 😷 https://t.co/V4pv4u4vgn
— Mehbooba Mufti (@MehboobaMufti) April 10, 2019
– ಹರ್ಷಕುಮಾರ್ ಕುಗ್ವೆ