ರಾಜಕೀಯ
ಎಲ್ಲಾ ಧರ್ಮಗಳಲ್ಲೂ ಮಹಿಳೆಯರನ್ನು ಕೀಳಾಗಿ ಕಾಣಲಾಗುತ್ತಿದೆ | ಕಾಂಗ್ರೆಸ್ ನಾಯಕ ಹುಸೇನ್
ಸುದ್ದಿದಿನ ಡೆಸ್ಕ್ | ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಚೆಗೆ ಸಂಸತ್ತಿನಲ್ಲಿ ಮೋದಿ ಅಪ್ಪಿಕೊಂಡು ಅಪಹಾಸ್ಯಕ್ಕೆ ಈಡಾಗಿದ್ದರು. ಈಗ ಅವರ ಪಕ್ಷದ ರಾಜ್ಯಸಭಾ ಸದಸ್ಯ ಹುಸೇನ್ ದಳವಾಯಿ ಅವರ ಹೇಳಿಕೆ ವಿವಾದ ಸೃಷ್ಟಿಸಿದ್ದಾರೆ. ಶ್ರೀರಾಮ ಕಾಡಿನಲ್ಲಿ ಸೀತಾಮಾತೆಯನ್ನು ಬಿಟ್ಟ ಬಂದಿದ್ದು, ನಂತರ ಅಗ್ನಿ ಪರೀಕ್ಷೆ ನಡೆದಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಇದೆಲ್ಲ ನಡೆದ ನಂತರ ಹಿಂದುಗಳಿಗೆ ರಾಮ- ಸೀತೆ ಎಂದರೆ ಪಾವಿತ್ರ್ಯತೆ ಸಂಕೇತ, ಆದರ್ಶವಾಗಿದ್ದಾರೆ. ಇಂತಹ ಸೀತೆ ಅಗ್ನಿಯಷ್ಟೇ ಪರಿಶುದ್ಧಳಾದವಳು ಸೀತಾಮಾತೆ. ಇಂತಹ ಸೀತಾಮಾತೆಯ ಮಾರ್ಯಾದೆಗೆ ಧಕ್ಕೆ ತಂದಿದ್ದಾರೆ ಎಂದು ಹಿಂದುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಡಳಿತಾರೂಢ ಬಿಜೆಪಿ ಸರ್ಕಾರ ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಮಂಡಿಸಿತು. ಈ ವೇಳೆ ಚರ್ಚೆ ಮಾಡುವಾಗ ರಾಮ- ಸೀತೆಯನ್ನು ಎಳೆದು ತಂದಿದ್ದಾರೆ. ಹುಸೈನ್ ದಲ್ವಾಯಿ ರಾಮ- ಸೀತೆಯ ಬಗ್ಗೆ ಗೌರವಕ್ಕೆ ಧಕ್ಕೆ ತರುವಂಥ ಹೇಳಿಕೆ ನೀಡಿದ್ದಾರೆ. ಸೀತೆಯ ಭಾರತೀಯ ಮಹಿಳೆಯರ ಪಾವಿತ್ರ್ಯತೆಯ ಪ್ರತೀಕ. ಅಂತಹ ಭಾರತೀಯ ನೆಲದ ಯಾವುದೇ ಸಮಾಜದ ಮಹಿಳೆಯರನ್ನು ನಂಬಬಾರದು. ಪುರುಷರ ದಬ್ಬಾಳಿಕೆಯಿಂದ ಬೇಸತ್ತು ತಲಾಕ್ ನೀಡುವ ಮಹಿಳೆಯರೊಂದಿಗೆ ಸೀತೆಯನ್ನು ಹೋಲಿಸಿದ್ದಾರೆ. ಸೀತೆಯೂ ಕೂಡ ರಾಮನಿಂದ ದೂರವಿದ್ದವಳು. ರಾಮ ಸೀತೆಯನ್ನು ಅನುಮಾನಿಸಿದ್ದ ಎಂದು ಅವಿವೇಕದ ನುಡಿ ಹೇಳಿದ್ದಾರೆ ಎಂದು ಮೈನೇಷನ್ ವರದಿ ಮಾಡಿದೆ.
ಎಲ್ಲಾ ಸಮುದಾಯಗಳ ಮಹಿಳೆಯರು ದುಃಖಕ್ಕೆ ಒಳಗಾಗಿದ್ದಾರೆ. ಅವರನ್ನು ಅಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ. ಕೇವಲ ಮುಸ್ಲಿಂ ಧರ್ಮದಲ್ಲಿ ಮಾತ್ರ ಈ ರೀತಿ ನಡೆಯಿತ್ತಿಲ್ಲ. ಭಾರತೀಯ ನೆಲದ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ವಿವಿಧ ಧರ್ಮಗಳಲ್ಲಿ ಮಹಿಳೆಯರನ್ನು ಕೀಳಾಗಿ ಕಾಣಲಾಗುತ್ತಿದೆ ಎಂದು ಕಾಂಗ್ರೆಸ್ ಸಂಸದ ಹುಸೇನ್ ದಳವಾಯಿ ಹೇಳಿದ್ದಾರೆ.
ದಳವಾಯಿ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಮುಖಂಡರೆ ಆಕ್ಷೇಪಿಸಿದ್ದಾರೆ. ಬಿಜೆಪಿಯ ಮುಖಂಡ ಶಾಜಿಯಾ ಇಲ್ಮಿ ಟ್ವಿಟ್ ಮಾಡಿದ್ದು, ದಳವಾಯಿ ಸೀತಾರಾಮರನ್ನು ಸಭೆಯಲ್ಲಿ ಎಳೆದು ತರುವ ಅಗತ್ಯವಿರಲಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಬಂಡಾಯ ಮುಖಂಡ ಶೆಹಜದ್ ಪೂನವಾಲಾ ಸಹ ವಿರೋಧಿಸಿದ್ದಾರೆ.
ಈ ಟೀಕೆ, ವಿರೋಧಾತ್ಮಕ ಹೇಳಿಕೆಗಳನ್ನು ಗಮನಿಸಿದ ಹುಸೇನ್ ಕ್ಷಮೆ ಕೋರಿ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401