ದಿನದ ಸುದ್ದಿ
ಯೋಗ ಪ್ರಚಾರದಲ್ಲಿ ಕಾರ್ಯನಿರ್ವಹಿಸಿದವರಿಗೆ ಪ್ರಧಾನಮಂತ್ರಿ ಪ್ರಶಸ್ತಿ ಪ್ರಕಟ
ಸುದ್ದಿದಿನ ಡೆಸ್ಕ್ : 2021 ನೇ ಸಾಲಿನ ಯೋಗದ ಪ್ರಚಾರದಲ್ಲಿ ಅತ್ಯದ್ಭುತ ಕಾರ್ಯನಿರ್ವಹಿಸಿದವರಿಗಾಗಿ ಪ್ರಧಾನಮಂತ್ರಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಲಡಾಖ್‌ನ ಭಿಕ್ಕು ಸಂಘಸೇನಾ, ಬೆಜಿಲ್‌ನ ಮಾರ್ಕಸ್ ವಿನಿಸಿಯಸ್ ರೊಜೊ ರಾಡ್ರಿಗಸ್, ಉತ್ತರಾಖಂಡದ ಡಿವೈನ್ ಲೈಫ್ ಸೊಸೈಟಿ ಮತ್ತು ಯುನೈಟೆಡ್ ಕಿಂಗ್‌ಡಂನ ಬ್ರಿಟಿಷ್ ವ್ಹೀಲ್ ಆಫ್ ಯೋಗ ಸಂಘಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ವಿಜೇತರಿಗೆ ಪ್ರಶಸ್ತಿ ಪತ್ರ, ಟ್ರೋಫಿ ಮತ್ತು 25 ಲಕ್ಷ ರೂಪಾಯಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಆಯುಷ್ ಸಚಿವಾಲಯ ತಿಳಿಸಿದೆ.
2016 ರಲ್ಲಿ 6 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಈ ಪ್ರಶಸ್ತಿಯನ್ನು ಘೋಷಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243