ಲೈಫ್ ಸ್ಟೈಲ್
ಹೆಚ್ಚಿಸಿಕೊಳ್ಳಿ ಕೂದಲ ಅಂದ
- ತೆಂಗಿನ ಕಾಯಿ ತುರಿಯನ್ನು ನೀರು ಹಾಕಿ ರುಬ್ಬಿ ದಪ್ಪನೆಯ ಕಾಯಿ ಹಾಲು ತೆಗೆಯಿರಿ. ಈ ಹಾಲನ್ನು ತಲೆಯ ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ಮೈಲ್ಡ್ ಶ್ಯಾಂಪೂ ಅಥವಾ ಶೀಗೆಕಾಯಿ ಹಾಕಿ ಕೂದಲನ್ನು ತೊಳೆದರೆ ಉದುರುವಿಕೆ ನಿಲ್ಲುತ್ತದೆ. ಜೊತೆಗೆ ಮಿರಿಮಿರಿ ಮಿಂಚುವ ಉದ್ದನೆಯ ಕೂದಲು ನಿಮ್ಮದಾಗುತ್ತದೆ.
- ಕೆಲವೊಮ್ಮೆ ತಲೆಬುರುಡೆಯ ಸೋಂಕು, ದೂಳು, ಅಲರ್ಜಿಗಳಿಂದ ಕೂದಲು ಉದುರುತ್ತದೆ. ಇದಕ್ಕೆ ಅಲೊವೆರಾ ಉತ್ತಮ ಔಷಧವಾಗಬಲ್ಲದು. ಅಲೊವೆರಾದ ಪಲ್ಟ್ ತೆಗೆದು ಕೂದಲಿನ ಬುಡಕ್ಕೆ ದಪ್ಪಗೆ ಹಚ್ಚಿ ಕೆಲವು ಗಂಟೆಗಳ ಕಾಲ ಬಿಟ್ಟು ತೊಳೆಯಿರಿ. ಇದು ತಲೆಬುರುಡೆಯ ಪಿ. ಎಚ್. ಮಟ್ಟವನ್ನು ಸಮತೋಲನದಲ್ಲಿಟ್ಟು ಅಲರ್ಜಿ, ಸೋಂಕುಗಳನ್ನ ಮಟ್ಟಹಾಕುತ್ತದೆ. ಈ ರೀತಿ ವಾರಕ್ಕೆ ಎರಡು ಬಾರಿ ಮಾಡಿದರೆ ಕೂದಲ ಬೆಳವಣಿಗೆಯಲ್ಲಿ ಉತ್ತಮಪರಣಾಮ ಕಾಣಬಹುದು.
- ಪಾಲಕ್ ಸೊಪ್ಪಿನೊಂದಿಗೆ ಹಸಿಶುಂಠಿಯ ಎಲೆ ಸೇರಿಸಿ ನುಣ್ಣಗೆ ರುಬ್ಬಿ ತಲೆಗೆ ಹಚ್ಚಿ ತೊಳೆಯುವುದರಿಂದ ಕೂದಲಿನ ಶತ್ರುಗಳಾದ ಹೇನು, ಸೀರುಗಳು ಸಾಯುತ್ತವೆ.
- ಪಾಲಕ್‍ಸೊಪ್ಪನ್ನು ನುಣ್ಣಗೆ ರುಬ್ಬಿ, ಅದಕ್ಕೆ ಒಂದು ಚಮಚ ಜೀರಿಗೆ ಪುಡಿ ಬೆರೆಸಿ ಕೂದಲ ಬುಡಕ್ಕೆ ಹಚ್ಚುಚುದರಿಂದ ತಲೆಹೊಟ್ಟು ಕಡಿಮೆ ಆಗುವುದು. ವಾರಕ್ಕೊಮ್ಮೆ ಈ ಪ್ಯಾಕ್ ಕೂದಲಿಗೆ ಹಾಕಿ ಕೊಳ್ಳಬಹುದು.
- ಬೇವಿನನಷ್ಟು ಕಹಿ ಇಲ್ಲದ ಕರಿಬೇವಿನ ಒಗ್ಗರಣೆ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಅಂತೆಯೇ ಕರಿಬೇವಿನಿಂದ ಸೌಂದರ್ಯ ವೃದ್ಧಿಸಿಕೊಳ್ಳುವುದು ಬಹಳ ಸುಲಭ.
- ಕರಿಬೇವು ಕೂದಲ ಬೆಳವಣಿಗೆ ಮತ್ತು ಹೊಟ್ಟು ನಿವಾರಣೆಗೆ ಸಹಾಯಕ. ಕರಿಬೇವಿನ ಎಲೆಗಳನ್ನು ತವಾದ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಬಾಡಿಸಿ, ನಂತ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ ಕೆಳಗೆ ಇಳಿಸಿ. ತಣ್ಣಗಾದ ಮೇಲೆ ಕೂದಲ ಬುಡಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ತುದಿ ಕೂದಲು ಸೀಳೀದರೆ ಬಿಸಿ ಎಣ್ಣೆಯಲ್ಲಿ ಅದ್ದಿಯಲ್ಲಿ ತೆಗೆಯಿರಿ, ಸೀಳುವಿಕೆ ಕಡಿಮೆ ಆಗುತ್ತದೆ.
- ಪ್ರತಿನಿತ್ಯ ಹೊತ್ತು ಹೊತ್ತಿಗೆ ಪೌಷ್ಠಿಕವಾದ ಆಹಾರವನ್ನು ಸೇವಿಸಿ.
- ಜಂಕ್ ಫುಡ್‍ಗಳು, ತಂಪು ಪಾನೀಯಗಳನ್ನು ವರ್ಜಿಸಿ.
- ಕೂದಲನ್ನು ಅತಿ ಬಿಸಿನೀರಿನಿಂದ ತೊಳೆಯಬೇಡಿ. ತಣ್ನೀರು ಅಥವಾ ಉಗುರು ಬೆಚ್ಗಿನ ನೀರಿನಲ್ಲಿ ತೊಳೆಯಿರಿ.
- ಒದ್ದೆ ಕೂದಲನ್ನು ಬಾಚಬೇಡಿ.
- ಎಣ್ಣೆ ಹಾಕದೇ ಒಣಕೂದಲನ್ನು ಬಾಚುವುದು, ಸ್ನಾನ ಮಾಡುವುದು ಬೇಡ.
- ಸದಾ ಬಿಗಿದು ಎಳೆದು ಕಟ್ಟುವ ಹೇರ್‍ಸ್ತೈಲ್ ಮಾಡಬೇಡಿ. ಸರಳವಾಗಿ, ಕೂದಲಿಗೆ ಸೌಖ್ಯವಾಗಿರುವಂತೆ ಹೇರ್‍ಸ್ಟೈಲ್ ಇರಲಿ.
- ದಿನಕ್ಕೆರಡುಬಾರಿ ಸಿಕ್ಕಿಲ್ಲದೆ ಮೃದುವಾಗಿ ಬಾಚಿಕೊಳ್ಳಿ. ಇದರಿಂದ ಕೂದಲ ಬುಡಕ್ಕೆ
- ರಕ್ತಸಂಚಾರ ಸುಗಮವಾಗಿ ಬೆಳವಣಿಗೆಗೆ ಅನುಕೂಲವಾಗತ್ತದೆ.
- ಪ್ರತಿದಿನ ವ್ಯಾಯಾಮ ಮಾಡಿ, ವಿಟಮಿನ್ ‘ಇ’ ಇರುವ ಆಹಾರವನ್ನು ಹೆಚ್ಚು ಸೇವಿಸಿ.
- ಬಸಿಲೊಡೆದ ಕೂದಲನ್ನು ಟ್ರಿಮ್ ಮಾಡಿಸಿ.
- ಒಣಕೂದಲಿದ್ದರೆ ಬಿಸಿನೀರು, ಹಾರ್ಡ್ ಶ್ಯಾಂಪೂ, ಶೀಗೆಕಾಯಿ ಬಳಸಬೇಡಿ.
- ಕಾಫಿ, ಟೀ ಕುಡಿಯುವುದನ್ನು ನಿಲ್ಲಿಸಿ, ಆಗದಿದ್ದರೆ ಕಡಿಮೆ ಮಾಡಿ.
ಹೆಚ್ಚು ನೀರು ಕುಡಿಯಿರಿ.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ |9986715401