ದಿನದ ಸುದ್ದಿ
ಶಹಾಪುರ | ಸ್ವತಂತ್ರ ದಿನಾಚರಣೆ ಆಚರಣೆ
73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ಸ್ಟೂಡೆಂಟ್ ಐಡಿ ಕಾರ್ಡ್ ಹಾಗೂ ಬೆಲ್ಟ ಕಾಣಿಕೆಯಾಗಿ ಶಿವು ಆಂದೋಲ ವಿತರಿಸಿದರು.
ಈ ಮೂಲಕ ದೃಡಿಕರಿಸುವದೆನಂದರೆ ದಿನಾಂಕ 15/08/2019 ರಂದು ಸ.ಕಿ.ಪ್ರಾ.ಶಾಲೆ ಅಂಬೇಡ್ಕರ್ ಕಾಲೋನಿ ಶಿರವಾಳ ತಾ.ಶಹಾಪುರ ಜಿ.ಯಾದಗಿರಿ ಶಾಲೆಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಾಯಿತು.
ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರು ಬಸವರಾಜ ಮ್ಯಾಗೇರಿ ಮಾಜಿ ಎಸ್ ಡಿ ಎಮ್ ಸಿ ಅಧ್ಯಕ್ಷರು ಸಿದ್ದಪ್ಪ ಧಮ್ಮನ ಶ್ರೀ ಮತಿ ಶಿವಕಾಂತಮ್ಮ ನಡಿವಿನಕೇರಿ ಗ್ರಾ.ಪಂ.ಸದಸ್ಯರು ಮತ್ತು ಎಸ್ ಡಿ ಎಮ್ ಸಿ ಸದಸ್ಯರು ಪಾಲಕರು ಪೋಷಕರು ಯುವಕರು ಮುಖಂಡರು ಭಾಗವಹಿಸಿ ಯಶಸ್ವಿಗೊಳಿಸಿದರು
ಈ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮುಖ್ಯ ಗುರುಗಳಾದ ಎಸ್ ಎಮ್ ನಧಫ್ ಮಾತನಾಡಿ ಸ್ವಾತಂತ್ರ್ಯದ ಬಗ್ಗೆ ಮತ್ತು ಶಾಲಾ ಮುಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸಲು ವಿನಂತಿಸಿದರು
ಈ ಕಾರ್ಯಕ್ರಮದ ನಿರೂಪಣೆ ಸಾವಿತ್ರಿ ಸ.ಶಿ. ನೇರವರಸಿ ಕೊಟ್ಟರು ಜುಬಿದಾಬೇಗಂ ಸ.ಶಿ. ಸ್ವಾತಂತ್ರ್ಯದ ಬಗ್ಗೆ ಮಾತನಾಡಿ ವಂದನಾರ್ಪಣೆ ಮಾಡಿದರು.
ಮಕ್ಕಳಿಂದ ಭಾಷಣ ಹಾಗೂ ಪ್ರೋತ್ಸಾಹಿಕವಾಗಿ ಶಾಲಾ ಶಿಕ್ಷಕರು ಮತ್ತು ಮರಿಲಿಂಗಪ್ಪ ಭಂಡಾರಿ ಕಾಫಿ ಪೆನ್ನು ಡಿಕ್ಸನರಿ ನೀಡಿದರು ಶಿವು ಆಂದೋಲಾ ರವರು ನಮ್ಮ ಶಾಲೆಯ ಎಲ್ಲಾ ಮಕ್ಕಳಿಗು ಉಚಿತವಾಗಿ ಸ್ಟೂಡೆಂಟ್ ಐಡಿ ಕಾರ್ಡ್ ಹಾಗೂ ಬೆಲ್ಟ ಕಾಣಿಕೆಯಾಗಿ ಮುಖ್ಯ ಗುರುಗಳಿಗೆ ನೀಡಿದರು ನಂತರ ಶಾಲಾ ಶಿಕ್ಷಕರ ವೃಂದದಿಂದ ಶಿವು ಆಂದೋಲಾ ರವರಿಗೆ ಸನ್ಮಾನ ಮಾಡಲಾಯಿತು.