ದಿನದ ಸುದ್ದಿ

ಸಂವಿಧಾನ ಪ್ರತಿ ಸುಟ್ಟ ಪ್ರಕರಣ ಖಂಡಿಸಿ ಪ್ರಜಾ ಪರಿವರ್ತನಾ ವೇದಿಕೆಯಿಂದ ಆ.25ರಂದು ಪ್ರತಿಭಟನೆ

Published

on

ಸುದ್ದಿದಿನ,ದಾವಣಗೆರೆ | ಸ್ವಾತಂತ್ರ್ಯ ದಿನಾಚರಣೆ ಗೆ ನಾಲ್ಕು ದಿನದ ಹಿಂದೆ (ಆ.11).ದೆಹಲಿಯ ಜಂತರ್-ಮಂಥರ್ ನಲ್ಲಿ ದೇಶದ‌ ಪವಿತ್ರ ಗ್ರಂಥವಾದ ಸಂವಿಧಾನ ಪ್ರತಿಯನ್ನು ಸುಟ್ಟಿರುವ ದೇಶದ್ರೋಹದ ಕೆಲಸ ಖಂಡಿಸಿ ಆ.25 (ಶನಿವಾರ) ಪ್ರತಿಭಟನಾ ಬೈಕ್ ರ್ಯಾಲಿ ನಡೆಸುವುದಾಗಿ ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಡಿ.ಈಶ್ವರಪ್ಪ ಹೇಳಿದರು.

ನಗರ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ಸುಟ್ಟು ಸಂಭ್ರಮಿಸಿರುವ ದೇಶದ್ರೋಹಿಗಳನ್ನು ಗಡಿಪಾರು ಮಾಡಬೇಕು ಹಾಗೂ ದೆಹಲಿಯ ‘ ಅಖಿಲ‌ ಭಾರತೀಯ ಭೀಮ ಸೇನ’ ಸಂಘಟನೆಯು ದಾಖಲಿಸಿರುವ ದೂರನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸ ಬೇಕೆಂದು ಒತ್ತಾಯಿಸಿ ಬೈಕ್ ರ್ಯಾಲಿಯನ್ನು ಅಂದು ಬೆಳಗ್ಗೆ 11 ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ಆರಂಭಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಪ್ರತಿಭಟನಾ ಬೈಕ್ ರ್ಯಾಲಿಯಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಪ್ರಜ್ಞಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕಾಗಿ ಕೋರಿದರು.

ಸುದ್ದಿಗೋಷ್ಟಿಯಲ್ಲಿ ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ಕೃಷ್ಣ ಅರಕೆರೆ ಸೇರಿದಂತೆ ಕೆ.ಓ.ಹನುಮಂತಪ್ಪ, ನಾಗರಾಜ್, ಸುನೀಲ್, ಅಣ್ಣೇಶಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version