ದಿನದ ಸುದ್ದಿ
ಭಾರತೀಯ ನೌಕಾಪಡೆಯಿಂದ ದೇಸಿನಿರ್ಮಿತ ಪ್ರಥಮ ನೌಕಾ ನಿರೋಧಕ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ಸುದ್ದಿದಿನ ಡೆಸ್ಕ್ : ಒಡಿಶಾದ ಬಾಲಸೋರ್‌ನಲ್ಲಿ ದೇಸಿನಿರ್ಮಿತ ಪ್ರಥಮ ನೌಕಾ ನಿರೋಧಕ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗವನ್ನು ಭಾರತೀಯ ನೌಕಾಪಡೆ ಬುಧವಾರ ಯಶಸ್ವಿಯಾಗಿ ನಡೆಸಿತು.
42-ಬಿ ಹೆಲಿಕಾಪ್ಟರ್‌ನಿಂದ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದ್ದು, ಅದು ನಿಗದಿತ ಗುರಿಯನ್ನು ಸಕಾಲದಲ್ಲಿ ಕರಾರುವಕ್ಕಾಗಿ ತಲುಪಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ಸಾಗರ ಕ್ಷಿಪಣಿ ತಂತ್ರಜ್ಞಾನದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದ್ದು, ಇದು ದೇಸಿನಿರ್ಮಿತ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾರತೀಯ ನೌಕಾಪಡೆಯ ಬದ್ಧತೆಯ ಪ್ರತೀಕವಾಗಿದೆ ಎಂದು ನೌಕಾಪಡೆ ಟ್ವೀಟ್ ಮಾಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ – ಡಿಆರ್‌ಡಿಒ ಸಹಯೋಗದೊಂದಿಗೆ ಈ ಕ್ಷಿಪಣಿ ಅಭಿವೃದ್ಧಿಪಡಿಸಲಾಗಿದೆ.
@DRDO_India & #IndianNavy successfully conducted a maiden flight-test of indigenously developed Naval Anti-Ship Missile from a Seaking 42B helicopter at ITR, Chandipur, off Odisha coast today.
Details here: https://t.co/bMVqeLPAuY pic.twitter.com/rBKIXdrx9K— A. Bharat Bhushan Babu (@SpokespersonMoD) May 18, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243