ದಿನದ ಸುದ್ದಿ
‘ವಿರಾಟ್’ ಯಾನಾಂತ್ಯಕ್ಕೆ ದಿನಗಣನೆ..!
ಸುದ್ದಿದಿನ ಡೆಸ್ಕ್: ದೇಶದ ನೌಕಾಪಡೆಯಲ್ಲಿ 30 ವರ್ಷಗಳ ಸೇವೆ ಸಲ್ಲಿಸಿದ್ದ ‘ಐಎನ್‌ಎಸ್ ವಿರಾಟ್’ ಯಾನ ಮುಗಿಸಲಿದ್ದು, ದಿನಗಣನೆ ಪ್ರಾರಂಭವಾಗಿದೆ.
ಈ ಯುದ್ಧನೌಕೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸುವ ಪ್ರಯತ್ನಗಳು ವಿಫಲಗೊಂಡ ಬಳಿಕ, ಅದನ್ನು ಹರಾಜು ಹಾಕಲಾಯಿತು. ಹರಾಜಿನಲ್ಲಿ ಶ್ರೀರಾಮ್ ಗ್ರೂಪ್ ಎಂಬ ಸಂಸ್ಥೆ ರೂ38 ಕೋಟಿಗೆ ಖರೀದಿಸಿದೆ. ದೇಶದಲ್ಲಿ ಗುಜರಿಗೆ ಸೇರುತ್ತಿರುವ ಎರಡನೇ ಯುದ್ಧ ನೌಕೆ ವಿರಾಟ್ ಆಗಿದ್ದು, ಇದಕ್ಕೂ ಮುನ್ನ ಐಎನ್‌ಎಸ್ ವಿಕ್ರಾಂತ್ ಅನ್ನು ಗುಜರಿಗೆ ಹಾಕಲಾಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243