ದಿನದ ಸುದ್ದಿ

ಅಂತರಾಷ್ಟ್ರೀಯ ಪತ್ರ ಲೇಖನ ಸ್ಪರ್ಧೆ

Published

on

ಸುದ್ದಿದಿನ,ದಾವಣಗೆರೆ : ಭಾರತೀಯ ಅಂಚೆ ಇಲಾಖೆ ಚಿತ್ರದುರ್ಗ ವಿಭಾಗದ ವತಿಯಿಂದ 15 ವರ್ಷದ ಒಳಗಿನ ಯುವಜನತೆಗೆ ಕೋವಿಡ್ 19 ಕುರಿತ ತಮ್ಮ ಅನುಭವವನ್ನು ತಮ್ಮ ಕುಟುಂಬದ ಸದಸ್ಯರಿಗೆ ಪತ್ರ ಬರೆಯುವ ವಿಷಯವಾಗಿ ಮಾ.28 ರಂದು ಅಂತರಾಷ್ಟ್ರೀಯ ಪತ್ರ ಲೇಖನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಪತ್ರ ಲೇಖನ ಸ್ಪರ್ಧೆಯು ಒಂದು ಗಂಟೆಯ ಅವಧಿಯದಾಗಿದ್ದು, ನೂರು ಅಂಕಗಳನ್ನು ಒಳಗೊಂಡಿದೆ. 800 ಪದಗಳನ್ನು ಮೀರದಂತೆ ಪತ್ರ ಬರೆಯಬೇಕು. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ತಮ್ಮ ಮೂರು ಭಾವಚಿತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ | ದಾವಣಗೆರೆ | ಕ್ರೀಡೆಯಿಂದ ಮಾನಸಿಕ ನೆಮ್ಮದಿ : ಮೇಯರ್ ಎಸ್.ಟಿ ವೀರೇಶ್

ಪತ್ರ ಲೇಖನ ಸ್ಪರ್ಧೆಯಲ್ಲಿ ಕರ್ನಾಟಕ ವೃತ್ತ ಮಟ್ಟಕ್ಕೆ ಪ್ರಥಮ ಬಹುಮಾನ ರೂ.25000, ದ್ವಿತೀಯ ರೂ.10000 ಹಾಗೂ ತೃತೀಯ ರೂ.4500 ಗಳು ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಪ್ರಧಾನ ಅಂಚೆ ಕಚೇರಿ ಹಾಗೂ ದೂರವಾಣಿ ಸಂಖ್ಯೆ: 9986038721 ನ್ನು ಸಂಪರ್ಕಿಸಬಹುದು ಎಂದು ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version