ದಿನದ ಸುದ್ದಿ

ಜಗಳೂರು | ದೇವರ ಎತ್ತುಗಳಿಗೆ ಮೇವು ಸಂಗ್ರಹ

Published

on

ಸುದ್ದಿದಿನ,ಜಗಳೂರು: ತಾಲ್ಲೂಕಿನ ಮಾದಮುತ್ತೇನಹಳ್ಳಿ ಗ್ರಾಮದಲ್ಲಿ ನಾಯಕ ಪಂಗಡದ ಮ್ಯಾಸ ನಾಯಕ ಬುಡಕಟ್ಟು ಜನಾಂಗದ ದೇವರ ಎತ್ತುಗಳಿಗೆ ಮೇವು ಸಂಗ್ರಹ ಅಭಿಯಾನದ ಅಂಗವಾಗಿ ಮೇವು ಸಂಗ್ರಹಣೆ ಮಾಡಿ ಜಗಳೂರು ತಾಲ್ಲೂಕು ಕಾಮಗೇತನಹಳ್ಳಿಯ ಶ್ರೀ ಸೂರಪ್ಪ ದೇವರು ಶ್ರೀ ಓಬಳದೇವರ ಎತ್ತುಗಳಿಗೆ ಸೋಮವಾರ ನೀಡಲಾಯಿತು.

ಮ್ಯಾಸ ಬೇಡ(ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ(ರಿ) ವತಿಯಿಂದ “ದೇವರ ಎತ್ತುಗಳಿಗೆ ಮೇವು ಸಂಗ್ರಹ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈ ಅಭಿಯಾನದ ಭಾಗವಾಗಿ ಇಂದು ಜಗಳೂರು ತಾಲ್ಲೂಕು ಮಾದಮುತ್ತೇನಹಳ್ಳಿ ಗ್ರಾಮದ ಶ್ರೀಮತಿ ಜಯಮ್ಮ ದಿವಂಗತ ಶ್ರೀ ಪಾಲಯ್ಯ ಮತ್ತು ಕುಟುಂಬದವರು ಮ್ಯಾಸ ಮಂಡಲದ ಕಾಮಗೇತನಹಳ್ಳಿಯ ಕಾಮಗೇತಿ ಗುಡಿಕಟ್ಟೆಯ ದೇವರ ಎತ್ತುಗಳಿಗೆ ಒಂದು ಲೋಡ್ ರಾಗಿ ಹುಲ್ಲನ್ನು ದೇವರ ಎತ್ತುಗಳಿಗೆ ನೀಡಿ ಭಕ್ತಿಯನ್ನು ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮ್ಯಾಸ ನಾಯಕ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿಯಾದ ದೊಡ್ಡಮನಿ ಪ್ರಸಾದ್, ಕಿಲಾರಿ ತಿಪ್ಪೇಸ್ವಾಮಿ, ಎಂ.ಕೆ.ಬೋಸಪ್ಪ, ಕೆ.ಬಿ.ಓಬಣ್ಣ, ಗೊಂಚಿಕಾರ ಸಣ್ಣ ಮಲ್ಲಯ್ಯ,ಕೆ.ಓ.ಚೌಡಪ್ಪ, ಓ.ಕೃಷ್ಣಮೂರ್ತಿ, ಬೋರೇಶ್ ಹಾಗೂ ಶಿಕ್ಷಕರುಗಳಾದ ಹೆಚ್ ಜಿ ಲೋಕೇಶ್, ಟಿ.ಪಿ.ಓಬನಾಯಕ, ತಿಮ್ಮಣ್ಣ ಓ.ಬಿ.ಮತ್ತು ಇತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version