ದಿನದ ಸುದ್ದಿ

ಜಮೀನು ವಿವಾದ | ಮಹಿಳೆಯ ಮೇಲೆ ಬಲಾಢ್ಯರ ದೌರ್ಜನ್ಯ : ನ್ಯಾಯ ಒದಗಿಸುವಂತೆ ನೊಂದ ಮಹಿಳೆಯ ಪರ ವಕೀಲ ಒತ್ತಾಯ

Published

on

ನೊಂದ ಮಹಿಳೆ

ಸುದ್ದಿದಿನ,ಚನ್ನರಾಯಪಟ್ಟಣ, :ತಾಲ್ಲೂಕಿನ ಕಲ್ಕೆರೆ ಚೌಡೇನಹಳ್ಳಿ ಗ್ರಾಮದಲ್ಲಿ ಮಹಿಳೆಯ ಮೇಲೆ ಬಲಾಢ್ಯರ ದೌರ್ಜನ್ಯವಾಗುತ್ತಿದೆ ನ್ಯಾಯ ಒದಗಿಸಲು ಬಂದ ಅಧಿಕಾರಿಗಳಿಗೆ ತೊಂದರೆ ನೀಡಿದ್ದು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ನಾಗಮಣಿ ದೀಕ್ಷಿತ್ ಪರ ವಕೀಲ ಬಸವರಾಜ್ ಮಾಧ್ಯಮದವರೊಡನೆ ಮನವಿ ಮಾಡಿದ್ದಾರೆ.

ವಕೀಲ ಬಸವರಾಜ್

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಲ್ಕೆರೆ ಚೌಡೇನಹಳ್ಳಿ ಗ್ರಾಮದಲ್ಲಿನ ಜಮೀನು ವಿವಾದ ತಾರಕಕ್ಕೇರಿದೆ ಕೆಲ ಮಹಿಳೆಯರು ವಿಷ ಕುಡಿದು ಹೈಡ್ರಾಮ ನಡೆಸುತ್ತಿದ್ದಾರೆ. ಹೌದು, ಒಂದೆಡೆ ಬಲಾಢ್ಯರು ರೈತರನ್ನು ಒಗ್ಗೂಡಿಸಿಕೊಂಡು ಮಾಧ್ಯಮದವರ ಎದುರು ಜಮೀನು ಕೈ ತಪ್ಪಿ ಹೋಗುತ್ತಿದೆ ದಯಮಾಡಿ ಜಮೀನು ದೊರಕಿಸಿಕೊಡಿ ಎಂದು ಅಂಗಲಾಚುವಂತೆ ಡ್ರಾಮಾ ಮಾಡುತ್ತಿದ್ದಾರೆ ಆದರೆ ಅಲ್ಲಿನ ವಾಸ್ತವ ಪರಿಸ್ಥಿತಿಯೇ ಬೇರೆ ಇದೆ ಆದರೆ,ಕೆಲ ಬಲಾಢ್ಯರು ರೈತರ ನೆಪ ಮಾಡಿಕೊಂಡು ಮಾಧ್ಯಮದವರ ಎದುರು ವಾಸ್ತವತೆಯನ್ನೇ ತಿರುಚುವ ಕಾರ್ಯ ಮಾಡುತ್ತಿದ್ದಾರೆ.

ವಿವಾದದ ಹಾದಿಯನ್ನೇ ದಿಕ್ಕು ತಪ್ಪಿಸುತ್ತಿದ್ದಾರೆ ನ್ಯಾಯ ಕೊಡಿಸಲು ಬಂದ ಅಧಿಕಾರಿಗಳ ಎದುರು ಸಾಯುವ ನಾಟಕ ಮಾಡಿ ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ವೇಳೆ ಅಡ್ಡಿಪಡಿಸಿ ಮಹಿಳೆಗೆ ನ್ಯಾಯ ದೊರಕದಂತೆ ಹುನ್ನಾರ ಮಾಡುತ್ತಿದ್ದಾರೆ ಆದ್ದರಿಂದ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಬ್ರಾಹ್ಮಣ ಮಹಿಳೆ ನಾಗಮಣಿ ಪರ ವಕೀಲ ಬಸವರಾಜ್ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ನೀಡಿದ್ದಾರೆ.

ಘಟನೆ ವಿವರ

ಅಷ್ಟಕ್ಕೂ ವಿವಾದದ ವಾಸ್ತವ ಸಾರಾಂಶವೆನೆಂದರೆ ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿ ಹೋಬಳಿ ಕಲ್ಕೆರೆ ಚೌಡೇನಹಳ್ಳಿ ಗ್ರಾಮದ ಸರ್ವೆ ನಂಬರ್ 30, ಬ್ಲಾಕ್ 12ಪಿ ಮತ್ತು 13ಪಿ ರಲ್ಲಿ ಎಂಟು ಎಕರೆ ಜಮೀನು 1980 ಡಿ.30 ರಂದು ವೆಂಕಟರಾಮು ದೀಕ್ಷಿತ್ ಎಂಬುವವರಿಗೆ ಕೃಷಿ ಭೂಮಿ ಮಂಜೂರಾಗಿದ್ದು ನಂತರ 25.8.1984ರಲ್ಲಿ ಜಮೀನು ದುರಸ್ಥಿಯಾಗಿದ್ದು, ಅದರಂತೆ ವೆಂಕಟರಾಮು ದೀಕ್ಷೀತ್ ಅವರು ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಕೆಲವು ವರ್ಷದಿಂದ ಜೀವನ ನಡೆಸಲು ಕಷ್ಟವಾಗಿದ್ದರಿಂದ ಕುಣಿಗಲ್ ದೇವಾಲಯದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು, ಈ ವೇಳೆ ತಮ್ಮ ಕೃಷಿ ಭೂಮಿಯನ್ನು ಪಕ್ಕದ ರೈತರಿಗೆ ಉಳುಮೆ ಮಾಡಲು ಹೇಳಿ ವಾರ್ಷಿಕವಾಗಿ ರೈತರು ಬೆಳೆದ ಬೆಳೆಯಲ್ಲಿ ಅರ್ಧದಷ್ಟು ದವಸ ಧಾನ್ಯಗಳನ್ನು ಪಡೆಯುತ್ತಿದ್ದರು, ತಿಂಗಳಿಗೆ ಎರಡರಿಂದ ಮೂರು ಬಾರಿ ಗ್ರಾಮಕ್ಕೆ ಆಗಮಿಸಿ ಜಮೀನು ನೋಡಿಕೊಂಡು ರೈತರೊಂದಿಗೆ ಅನ್ಯೂನ್ಯವಾಗಿದ್ದರು.

ಕೆಲವು ವರ್ಷಗಳ ನಂತರ ವೆಂಕಟರಾಮು ದೀಕ್ಷಿತ್ ಮೃತರಾದ ಮೇಲೆ ವೆಂಕಟರಾಮು ದೀಕ್ಷಿತ್ ರವರ ಪುತ್ರಿ ನಾಗಮಣಿಜಗದೀಶ್‌ದೀಕ್ಷಿತ್ ಸ್ವಗ್ರಾಮಕ್ಕೆ ಬಂದು ಕೃಷಿ ಭೂಮಿ ಉಳುಮೆ ಮಾಡುತ್ತಿದ್ದ ರೈತರೊಂದಿಗೆ ವಿಶ್ವಾಸದಿಂದ ಇದ್ದು ದವಸ ಧಾನ್ಯಗಳನ್ನು ಪಡೆಯುತ್ತಿದ್ದರು, ಕೆಲವು ದಿನಗಳ ನಂತರದಲ್ಲಿ ತಮ್ಮ ಜಮೀನನ್ನು ವಾರಕ್ಕೆ ನೋಡಿಕೊಳ್ಳುತ್ತಿದ್ದ ಮತ್ತು ಕೃಷಿ ಭೂಮಿಯನ್ನು ವ್ಯವಸಾಯ ಮಾಡುತ್ತಿದ್ದ ರೈತರನ್ನು ಉಳುಮೆ ಮಾಡುವುದು ಬೇಡ ನಾವೇ ಮಾಡುತ್ತೇವೆ ಎಂದು ವಿನಂತಿಸಿದರು.

ಈ ವೇಳೆ ಕೃಷಿ ಭೂಮಿಯನ್ನು ವಾರಕ್ಕೆ ಉಳುಮೆ ಮಾಡುತ್ತಿದ್ದ ಕುಟುಂಬದವರು ನಿನಗೆ ಪೋಷಕರಿಲ್ಲ ಕುಣಿಗಲ್ ದೇವಾಲಯದಲ್ಲಿ ಪೂಜೆ ಮಾಡುತ್ತೀಯ ಅಲ್ಲಿಯ ವರಮಾನವೇ ಸಾಕು, ನಾವು ಯಾವುದೇ ಕಾರಣಕ್ಕೂ ಜಮೀನನ್ನು ನಿನಗೆ ಬಿಟ್ಟು ಕೊಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.

ಇದರಿಂದ ನೊಂದ ಬ್ರಾಹ್ಮಣ ಮಹಿಳೆ ತಮ್ಮ ಬಳಿ ಇದ್ದ ಕೃಷಿ ಭೂಮಿಯ ದಾಖಲಾತಿ ಸಮೇತ ಕಾನೂನು ಮೊರೆ ಸಲುವಾಗಿ ಹಾಸನ ಜಿಲ್ಲಾಧಿಕಾರಿಗಳ ಸಂಪರ್ಕ ಮಾಡಿ ತಮ್ಮ ತಂದೆಯವರಿಗೆ ಮಂಜೂರಾದ ಸರ್ವೇ ನಂ 12ಪಿ, 13ಪಿರಲ್ಲಿ ಮತ್ತು ನಂತರ ದುರಸ್ಥಿಯಾದ ಹೊಸ ಸರ್ವೇ ನಂ 109 ಮತ್ತು 110ರಲ್ಲಿ 8.10 ಗುಂಟೆ ಕೃಷಿ ಭೂಮಿಯನ್ನು ಸರ್ವೇ ಮಾಡಿಸಿ ತಮಗೆ ಸಾಗುವಳಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಅದರಂತೆ ಹಾಸನ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕು ದಂಡಾಧಿಕಾರಿಗಳಾದ ಜೆ.ಬಿ.ಮಾರುತಿ, ಪೊಲೀಸ್ ವೃತ್ತ ನಿರೀಕ್ಷಕರಾದ ಬಾನು, ಗ್ರಾಮ ನಿರೀಕ್ಷಕರಾದ ಲೋಕೇಶ್(ಉಪ ತಹಶೀಲ್ದಾರ್), ಹಾಗೂ ಸರ್ವೇ ಇಲಾಖೆ ಅಧಿಕಾರಿಗಳ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳ ಸಹಾಯದೊಂದಿಗೆ ಕಲ್ಕೆರೆ ಚೌಡೇನಹಳ್ಳಿ ಗ್ರಾಮದ ಕೃಷಿ ಭೂಮಿಗೆ ತೆರಳಿ ಸರ್ವೆ ಮಾಡಲು ಭೂಮಾಪನ ಇಲಾಖೆ ಅಧಿಕಾರಿಗಳು ಮುಂದಾಗಿದ್ಧಾರೆ.

ಈ ವೇಳೆ ಕೆಲ ಅಕ್ಕ ಪಕ್ಕದ ಬಲಾಢ್ಯರು ಆಗಮಿಸಿ ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿ ಮಾಡಿದಲ್ಲದೆ, ಅಧಿಕಾರಿಗಳಿಗೆ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಿ, ಗುಂಪು ಕಟ್ಟಿಕೊಂಡು ಬಂದು ಗಲಾಟೆ ಮಾಡಿ , ವಿಷ ಸೇವನೆ ಮಾಡುವ ನಾಟಕವಾಡಿದ್ದಾರೆ.

ಈ ವೇಳೆ ಕೆಲವು ಮಹಿಳೆಯರು ವಿಷ ಕುಡಿದು ಹೆದರಿಸಿದ್ದರಿಂದ ತಾಲೂಕು ಮಟ್ಟದ ಅಧಿಕಾರಿಗಳು ಮಹಿಳೆಯನ್ನು ಅಲ್ಲಿಂದ ಕಳುಹಿಸಿದ್ದಾರೆ, ತಾಲೂಕು ದಂಡಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಿದವರ ಮೇಲೆ ಈಗಾಗಲೇ ಐಪಿಸಿ 353ರ ಸೆಕ್ಷನ್ ಪ್ರಕಾರ ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯುವ ನಿಯಮದಂತೆ ದೂರು ದಾಖಲಾಗಿದೆ.

ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು, ನಿಜವಾದ ಜಮೀನಿನ ಫಲಾನುಭವಿಯಾದ ನಾಗಮಣಿ ರವರಿಗೆ ಭೂಮಿಯನ್ನು ಸ್ವಾಧೀನಕ್ಕೆ ನೀಡಬೇಕೆಂದು ಮನವಿ ಮಾಡುತ್ತೇನೆ, ಹಾಗೂ ಮಹಿಳೆಗೆ ಕೊಲೆ ಬೆದರಿಕೆ ಹಾಕುತ್ತಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಮಾಧ್ಯಮದವರ ಮುಂದೆ ಮನವಿ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version