ದಿನದ ಸುದ್ದಿ
ಜನಪದ ಕಲೆ ಸಾಹಿತ್ಯದ ಬೇರು : ಪ್ರಾಂಶುಪಾಲ ಡಾ. ಧನಂಜಯ ಬಿ.ಜಿ
ಸುದ್ದಿದಿನ,ಹೊನ್ನಾಳಿ:ಜನಪದ ಕಲೆ ಗ್ರಾಮೀಣ ಭಾರತದ ತಾಯಿ ಬೇರು ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿಬೇರುಗಳಿದ್ದಂತೆ ಜನರ ಉನ್ನತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವುದೇ ಜನಪದ ಕಲೆ ಎಂದು ಪ್ರಾಂಶುಪಾಲ ಡಾ. ಬಿ.ಜಿ.ಧನಂಜಯ್ ರವರು
ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಜಾನಪದ ಉತ್ಸವ-2025 ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾನಪದ ಕಲೆಯಲ್ಲಿ ಕ್ರಿಯಾತ್ಮಕ ಮತ್ತು ಉಪಯುಕ್ತ ದೃಶ್ಯ ಕಲೆ ಒಳಗೊಂಡಿರುತ್ತದೆ ಜನಪದ ಕಲೆ ಅಂದರೆ ಜನರಿಂದ ಜನರಿಗಾಗಿ ಸೃಜಿಸಿದ ಕಲೆ. 19ನೇ ಶತಮಾನದ ಉತ್ತರಾರ್ಧದಲ್ಲಿ ಗುರುತಿಸುವ ಪ್ರಯತ್ನ ಆಯಿತು ವಿಶೇಷವಾಗಿ ಹೊರಗಿನ ಪ್ರಪಂಚದ ಸಂಪರ್ಕಕ್ಕೆ ಗ್ರಾಮೀಣ ಸಂಸ್ಕೃತಿಯನ್ನು ಸೇರಿಸಿದ ಕೀರ್ತಿ ಜನಪದ ಕಲೆ ಮತ್ತು ಸಾಹಿತ್ಯಕ್ಕೆ ಸಲ್ಲುತ್ತದೆ ತಾಯಿ ನಾಡಿನ ಸಂಸ್ಕೃತಿಯನ್ನು ಬೆಳೆಸುವುದು ಯುವ ಸಮೂಹದ ಒಂದು ಗುರುತರಹದ ಜವಾಬ್ದಾರಿ ಎಂದು ಕಿವಿಮಾತು ಹೇಳಿದರು.
ಆದ್ದರಿಂದ ಪ್ರಾಚೀನ ವಾದಂತಹ ಈ ಕಲೆಯನ್ನು ಪರಿವೀಕ್ಷಣೆ ಮತ್ತು ಅನುಕರಣೆ ಹಾಗೂ ಅರಿತಿದ್ದನ್ನು ಒಂದು ಕಡೆ ದಾಖಲಿಸುವ ಒಂದು ಕಲೆಗೆ ಜಾನಪದ ಕಲೆ , ಹಾಗಾಗಿ ಈ ಜಾನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಮುಂದಿನ ತಲೆಮಾರಿಗೆ ವರ್ಗಾಯಿಸುವ ನಿಟ್ಟಿನಲ್ಲಿ ಯುವಜನರ ಪಾತ್ರ ಬಹಳ ಮಹತ್ವದ್ದು, ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕೂಡ ಜಾನಪದ ಕಲೆಯನ್ನು ಜಾನಪದ ಕಲಾವಿದರನ್ನು ಪ್ರೋತ್ಸಾಹಿಸೋಣ ಎಂದರು.
ಜನಪದ ಕಲಾವಿದರಾದ ತಮಟೆ ಜಗದೀಶ್ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಮತ್ತು ಮತ್ತು ತಮಟೆ ಮೂಲಕ ವಿದ್ಯಾರ್ಥಿಗಳಿಗೆ ಜಾನಪದ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಡಾ . ಬೀನಾ. ಪಿ , ಗೀತಾ .ಹೆಚ್ ವಿ, ದಿಲೀಪ್ ಕಂಬ್ಳಿ, ಅಶೋಕ ಭಸ್ಮೆ , ಸುದಿನ ಟಿ. ಎ, ಪವಿತ್ರಾ. ಏ. ಎಂ, ವಿನಾಯಕ, ಅಶೋಕ್ .ಹೆಚ್.ಬಿ. .ರಹಮತ್ ಉಲ್ಲಾ. ಆರ್. ದೊಡ್ಡಪ್ಪ,ಖಲೀಲ್ ಅಹಮದ್ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243