ದಿನದ ಸುದ್ದಿ

ಡಾ.ಕೆ.ಸಧಾಕರ್ ಫೇಸ್ ಬುಕ್, ಟಿಟ್ಟರ್ ನಲ್ಲಿ‌ ಮಾತ್ರ ಸಚಿವರು, ನಮ್ಮ ಕಷ್ಟ ಅರ್ಥವಾಗಲ್ಲ: ವೈದ್ಯಕೀಯ ಕಾಲೇಜು ವಿದ್ಯಾರ್ಥಿ ಆಕ್ರೋಶ

Published

on

ಸುದ್ದಿದಿನ, ದಾವಣಗೆರೆ: ವೈದ್ಯಕೀಯ ಸಚಿವ ಕೆ.ಸುಧಾಕರ್ ಅವರು ಕೇವಲ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಮಾತ್ರ ಸಚಿವರು, ವಿದ್ಯಾರ್ಥಿಗಳ ಕಷ್ಟ ಅವರಿಗೆ ಅರ್ಥವಾಗಲ್ಲ.ಇದು ದಾವಣಗೆರೆಯ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿ ರಾಹುಲ್ ಅವರ ಆಕ್ರೋಶದ ನುಡಿ.

ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಬುಧವಾರ ಸಚಿವ ಡಾ.ಕೆ ಸುಧಾಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿಗಳು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಸುಧಾಕರ್ ಅವರು ಕೇವಲ ಫೇಸ್ ಬುಕ್ ಹಾಗೂ ಟ್ವಿಟರ್ ನಲ್ಲಿ ಮಾತ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಮ್ಮ ಕಷ್ಟ ಅವರಿಗೆ ಅರ್ಥವಾಗುವುದಿಲ್ಲ‌ ಎಂದು ವಿದ್ಯಾರ್ಥಿ ರಾಹುಲ್ ದೂರಿದರು.

ಮಳೆ, ಬಿಸಿಲು ಎನ್ನೆದೆ ಕಳೆದ 11 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಜೊತೆ ವಿದ್ಯಾರ್ಥಿನಿಯರು ಇದ್ದು ಹಲವು ಕಷ್ಟ ಅನುಭವಿಸುತ್ತಿದ್ದಾರೆ. ಕೇವಲ ಶಿಷ್ಯ ವೇತನ ಬಿಡುಗಡೆಗೆ ಇಷ್ಟು ಸತಾಯಿಸುತ್ತಿರುವ ಈ ಸರ್ಕಾರಕ್ಕೆ ಕಿವಿ ಇಲ್ಲ. ನಾವು ಅಕ್ಷರಶಃ ಗುಲಾನರಂತೆ ಬದುಕಿದ್ದೇವೆ. ಕೊನೆಗೆ ಸರ್ಕಾರ ನಮ್ಮ ಮೇಲೆ ಯಾವುದೇ ಕ್ರಮ ಕೈಗೊಂಡರು ಪರವಾಗಿಲ್ಲ. ನಾವು ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಸಿತ್ತೇವೆ ಎಂದು ಎಚ್ಚರಿಸಿದರು.

16 ತಿಂಗಳಿಂದ ಬಾಕಿ ಇರುವ ಶಿಷ್ಯ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಳೆದ 11 ದಿನಗಳಿಂದ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸರ್ಕಾರದಿಂದ ಮಾತ್ರ ಸೂಕ್ತ ಉತ್ತರ ಸಿಕ್ಕಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ತಟ್ಟೆ ಬಾರಿಸಿ ವಿನೂತನ ರೀತಿ ಪ್ರತಿಭಟನೆ ನಡೆಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version