ದಿನದ ಸುದ್ದಿ
ರಾಜ್ಯಗಳು ಪಡಿತರ ಬೇಡಿಕೆ ಸಲ್ಲಿಸಿದರೆ ಆಹಾರ ಧಾನ್ಯ ಪೂರೈಕೆಗೆ ಕೇಂದ್ರ ಸಿದ್ಧ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಸುದ್ದಿದಿನಡೆಸ್ಕ್:ಪಡಿತರ ವಿತರಣೆ ವ್ಯವಸ್ಥೆಯನ್ನು ಸೂಕ್ತವಾಗಿ ಜಾರಿಗೊಳಿಸುವುದು ರಾಜ್ಯಗಳ ಜವಾಬ್ದಾರಿಯಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಅಕ್ಕಿ ಮತ್ತು ಗೋಧಿಯನ್ನು ವಿತರಿಸುತ್ತಿದ್ದು, ರಾಜ್ಯಗಳು ಬಯಸಿದರೆ ಸಿರಿಧಾನ್ಯಗಳನ್ನು ಸಹ ವಿತರಿಸಲು ಅವಕಾಶವಿದೆ. ರಾಜ್ಯಗಳು ಈ ಕುರಿತು ಬೇಡಿಕೆ ಸಲ್ಲಿಸಿದರೆ ಪೂರೈಕೆ ಮಾಡಲು ಕೇಂದ್ರ ಸಿದ್ಧವಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಆಹಾರ ಭದ್ರತೆ ಕಾಯ್ದೆಗೆ ಸೂಕ್ತ ನೀತಿ ರೂಪಿಸಿದ್ದು ಕಳೆದ ಜನವರಿಯಲ್ಲಿ ಉಚಿತ ಪಡಿತರ ವಿತರಣೆಯನ್ನು ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸಿದೆ. ದೇಶದ ಶೇಕಡ 67ರಷ್ಟು ಜನರಿಗೆ ಪಡಿತರ ಲಭ್ಯವಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243